For Quick Alerts
  ALLOW NOTIFICATIONS  
  For Daily Alerts

  ಕೆಂಪು ಕೋಟೆ ಧ್ವಜ ಪ್ರಕರಣ: ನಟ ದೀಪ್ ಸಿಧು ನಾಪತ್ತೆ

  |

  ಗಣರಾಜ್ಯೋತ್ಸವದಂದು ರೈತ ಪ್ರತಿಭಟನೆಯಲ್ಲಿ ಕೆಂಪು ಕೋಟೆ ಮುಂದೆ ಧ್ವಜ ಹಾರಿಸಿದ ಪ್ರಕರಣಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿರುವ ನಟ ದೀಪ್ ಸಿಧು ನಾಪತ್ತೆಯಾಗಿದ್ದಾರೆ.

  ರೈತ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ನಟ ದೀಪ್ ಸಿಧು ಗಣರಾಜ್ಯೋತ್ಸವದಂದು ಕೆಂಪು ಕೋಟೆ ಯಲ್ಲಿ ಧಾರ್ಮಿಕ ಧ್ವಜ ಹಾರಲು ಪ್ರಮುಖ ಕಾರಣವಾಗಿದ್ದರು. ಅಂದು ನಡೆದ ಹಿಂಸಾಚಾರದಲ್ಲಿ ದೀಪ್ ಸಿದ್ಧು ಪಾತ್ರ ಇದೆ ಎನ್ನಲಾಗುತ್ತಿದೆ. ಇದೀಗ ದೀಪ್ ಸಿಧು ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ನಟ ನಾಪತ್ತೆಯಾಗಿದ್ದಾರೆ.

  ದೀಪ್ ಸಿದ್ಧು ಜೊತೆಗೆ ರೌಡಿ ಶೀಟರ್ ಸಿಧಾನಾ ಸಹ ನಾಪತ್ತೆಯಾಗಿದ್ದು, ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಲುಕೌಟ್ ನೊಟೀಸ್ ಸಹ ಹೊರಡಿಸಲಾಗಿದೆ.

  ದೀಪ್ ಸಿಧು ಬಿಜೆಪಿಯ ಆಪ್ತ ಎಂದು ಹೇಳಲಾಗುತ್ತಿದ್ದು, ಬಿಜೆಪಿ ಸಂಸದ ಸನ್ನಿ ಡಿಯೋಲ್ ಹಾಗೂ ಪ್ರಧಾನಿ ಮೋದಿ ಅವರೊಂದಿಗೆ ದೀಪ್ ಸಿದ್ಧು ಇರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಗಣರಾಜ್ಯೋತ್ಸವದ ದಿನದಂದು ಧ್ವಜ ಹಾರಿದ ಕೂಡಲೇ ದೀಪ್ ಸಿದ್ಧು ಅಲ್ಲಿಂದ ಬೈಕ್‌ನಲ್ಲಿ ಪರಾರಿ ಆಗಿರುವ ವಿಡಿಯೋಗಳು ಹರಿದಾಡುತ್ತಿವೆ. ಅದೇ ದಿನ ಕೆಲವು ರೈತರು ದೀಪ್ ಸಿದ್ಧುವನ್ನು ಹಿಡಿಯಲು ಪ್ರಯತ್ನಪಟ್ಟರಾದರೂ ಆತ ಯಾರ ಕೈಗೂ ದೊರೆತಿಲ್ಲ.

  ದೀಪ್ ಸಿಧು ಬಗ್ಗೆ ಮಾತನಾಡಿರುವ ಸ್ವರಾಜ್ ಪಕ್ಷದ ಯೋಗೇಂದ್ರ ಯಾದವ್, 'ದೀಪ್ ಸಿಧು ಹೋರಾಟದಲ್ಲಿ ಭಾಗವಹಿಸಿರುವ ಬಗ್ಗೆ ಆರಂಭದಿಂದಲೂ ವಿರೋಧವಿತ್ತು. ಆದರೆ ಆತ ಹೇಗೆ ಕೆಂಪು ಕೋಟೆ ಬಳಿ ಬಂದು ಭಾಷಣ ಮಾಡಿದ' ಎಂಬುದು ಗೊತ್ತಾಗಬೇಕು, ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

  ಪೊಗರು, ರಾಬರ್ಟ್ ಬಗ್ಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ | Filmibeat Kannada

  'ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಸಂಸದ ಸನ್ನಿ ಡಿಯೋಲ್‌ ರ ಚುನಾವಣೆ ಏಜೆಂಟ್ ಆಗಿದ್ದ ದೀಪ್ ಸಿಧು. ಪ್ರಧಾನ ಮಂತ್ರಿ ಜೊತೆಗೆ ಸಹ ಆತನ ಕೆಲವು ಚಿತ್ರಗಳಿವೆ. ಆತನ ಬಗ್ಗೆ ಈ ಮುಂಚೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದೆವು ಅವರು ಯಾವುದೇ ಕ್ರಮ ಕೈಗೊಂಡಿಲ್ಲ' ಎಂದಿದ್ದಾರೆ ಯೋಗೇಂದ್ರ ಯಾದವ್.

  English summary
  Actor Deep Sidhu abscond after case registered against him for red fort violence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X