For Quick Alerts
  ALLOW NOTIFICATIONS  
  For Daily Alerts

  ಕಪ್ಪಗಿದ್ದೀನೆಂದು ಮೂದಲಿಸಿದ್ದರು: ಖ್ಯಾತ ನಟಿಯ ಬೇಸರ ನುಡಿ

  |

  ಕನ್ನಡ ಸೇರಿ ಆರು ಭಾಷೆಯ ಸಿನಿಮಾಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ನಟಿಸಿರುವ ಸಮೀರಾ ರೆಡ್ಡಿ ತಮ್ಮ ಬಣ್ಣದ ಕಾರಣದಿಂದ ಮೂದಲಿಕೆಗೆ ಒಳಗಾಗಿದ್ದರಂತೆ.

  Brahma ಚಿತ್ರದಲ್ಲಿನ ರೋಮಾಂಚಕ ಫೈಟ್ ಸೀನ್ ತಯಾರಾಗಿದ್ದು ಹೀಗೆ | Action Scene Making | Filmibeat Kannada

  ಹೌದು, ಕನ್ನಡದ ವರದನಾಯಕ ಸಿನಿಮಾದಲ್ಲಿ ಸುದೀಪ್ ಗೆ ನಾಯಕಿಯಾಗಿ ನಟಿಸಿದ್ದ ಸಮೀರಾ ರೆಡ್ಡಿ, ಚಿರಂಜೀವಿ, ಜೂ.ಎನ್‌ಟಿಆರ್, ಹಿಂದಿಯ ಅನಿಲ್ ಕಪೂರ್ ಹೀಗೆ ಹಲವು ಸೂಪರ್‌ ಸ್ಟಾರ್‌ಗಳ ಜೊತೆ ನಟಿಸಿರುವ ಅನುಭವ ಹೊಂದಿದ್ದಾರೆ.

  ಬದಲಾಗಿದ್ದೀನಿ ಆದರೆ ಬೇಸರವಿಲ್ಲ: ನಟಿ ತೋರಿದ ಧೈರ್ಯಬದಲಾಗಿದ್ದೀನಿ ಆದರೆ ಬೇಸರವಿಲ್ಲ: ನಟಿ ತೋರಿದ ಧೈರ್ಯ

  ಇಂಥಹಾ ಪ್ರತಿಭಾವಂತ ನಟಿ ಒಂದೊಮ್ಮೆ ತಮ್ಮ ಕಪ್ಪು ಬಣ್ಣದಿಂದ ಮೂದಲಿಕೆ ಗುರಿಯಾಗಿದ್ದರಂತೆ. ನಟಿಯ ಕಪ್ಪು ಬಣ್ಣದ ಬಗ್ಗೆ ಕೆಲವರು ಅವಮಾನವಾಗುವಂತೆ ಮಾತನಾಡಿದ್ದರಂತೆ. ಆ ಬಗ್ಗೆ ಮಾತನಾಡಿದ್ದಾರೆ ಸಮೀರಾ.

  ಬಣ್ಣದ ಬಗ್ಗೆ ಬಾಲಿವುಡ್‌ನಲ್ಲಿ ಚಕಾರ

  ಬಣ್ಣದ ಬಗ್ಗೆ ಬಾಲಿವುಡ್‌ನಲ್ಲಿ ಚಕಾರ

  ಬಾಲಿವುಡ್‌ನಲ್ಲಿ ಕೆಲವರು ನನ್ನ ಬಣ್ಣದ ಬಗ್ಗೆ ಚಕಾರ ಎತ್ತಿದ್ದರು. ನನ್ನ ಕಪ್ಪು ಬಣ್ಣ, ಹೆಚ್ಚು ಎತ್ತರ ಅವರಿಗೆ ಸರಿ ಬರುತ್ತಿರಲಿಲ್ಲ ಜೊತೆಗೆ ನನ್ನದು ಬಹಳ 'ಬೋರಿಂಗ್' ಮುಖ, ಬಬ್ಲಿ ಮುಖಭಾವ ಹೊಂದಿಲ್ಲವೆಂದು ಕೆಲವು ಸಿನಿಮಾಗಳಿಂದ ನನ್ನನ್ನು ಕೈಬಿಟ್ಟರು ಎಂದು ಸಮೀರಾ ಹೇಳಿದ್ದಾರೆ.

  ತಾರತಮ್ಯ ಎಂದು ಭಾವಿಸಲಿಲ್ಲ ಸಮೀರಾ ರೆಡ್ಡಿ

  ತಾರತಮ್ಯ ಎಂದು ಭಾವಿಸಲಿಲ್ಲ ಸಮೀರಾ ರೆಡ್ಡಿ

  ಬಣ್ಣದ ಬಗ್ಗೆ ಅನುಭವಿಸಿದ ನಿರಾಕರಣೆಯನ್ನು ತಾರತಮ್ಯ ಎಂದು ಭಾವಿಸಲಿಲ್ಲವಂತೆ ಸಮೀರಾ. ಬದಲಿಗೆ ಆ ಎಲ್ಲ ಅನುಭವಗಳಿಂದ ನಾನು ಕಲಿತೆ. ನಾನು ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಪ್ರೀತಿಸಲು ಕಲಿತೆ. ನನ್ನನ್ನು ನಾನು ದ್ವೇಷಿಸಲು ಪ್ರಾರಂಭಿಸಿದ್ದಿದ್ದರೆ ನಾನು ಇಂದೇನಾಗಿದ್ದೇನೋ ಅದು ಆಗುತ್ತಿರಲಿಲ್ಲ ಎಂದಿದ್ದಾರೆ ಸಮೀರಾ.

  'ವರದನಾಯಕ' ನಟಿ ಸಮೀರಾ ತೆಲುಗು ಚಿತ್ರರಂಗ ತೊರೆಯಲು ಜೂ. ಎನ್‌ಟಿಆರ್ ಕಾರಣ!'ವರದನಾಯಕ' ನಟಿ ಸಮೀರಾ ತೆಲುಗು ಚಿತ್ರರಂಗ ತೊರೆಯಲು ಜೂ. ಎನ್‌ಟಿಆರ್ ಕಾರಣ!

  ವ್ಯಕ್ತಿಯನ್ನು ತಪ್ಪು ಮಾನದಂಡದಿಂದ ಅಳೆಯುತ್ತಿದ್ದೇವೆ: ಸಮೀರಾ

  ವ್ಯಕ್ತಿಯನ್ನು ತಪ್ಪು ಮಾನದಂಡದಿಂದ ಅಳೆಯುತ್ತಿದ್ದೇವೆ: ಸಮೀರಾ

  ವ್ಯಕ್ತಿಯ ಅಂದವನ್ನು ಆಕಾರ, ಬಣ್ಣದಿಂದ ಅಳೆಯುವ ಸಮಾಜದ ಮೇಲೆಯೇ ಸಮೀರಾ ಗೆ ಬೇಸರ. 'ನಾವು ವ್ಯಕ್ತಿಯನ್ನು ತಪ್ಪು ಮಾನದಂಡಗಳಿಂದ ಅಳೆಯುತ್ತಿದ್ದೇವೆ, ಬಣ್ಣ, ಆಕಾರಗಳು ವ್ಯಕ್ತಿಯನ್ನು ಅಳೆಯುವ ಮಾನದಂಡಗಳಲ್ಲ ಎಂದಿದ್ದಾರೆ ಸಮೀರಾ ರೆಡ್ಡಿ.

  ಮೇಕಪ್‌ ಇಲ್ಲದೆ ಕ್ಯಾಮೆರಾ ಮುಂದೆ ನಟಿ

  ಮೇಕಪ್‌ ಇಲ್ಲದೆ ಕ್ಯಾಮೆರಾ ಮುಂದೆ ನಟಿ

  ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಮೀರಾ, ಮೇಕಪ್ ಇಲ್ಲದೆ ವಿಡಿಯೋ ಮಾಡಿ, ದಪ್ಪಗಿದ್ದೇನೆ, ಕಪ್ಪಗಿದ್ದೇನೆ ಆದರೆ ಸಂತೋಶವಾಗಿದ್ದೇನೆ. ಬದುಕಿನಲ್ಲಿ ಅದೇ ಮುಖ್ಯ ಎಂದು ಕೆಲವು ದಿನಗಳ ಹಿಂದೆ ವಿಡಿಯೋ ಅಪ್‌ಲೋಡ್ ಮಾಡಿದ್ದರು.

  2 ತಿಂಗಳ ಮಗುವಿನೊಂದಿಗೆ ಕರ್ನಾಟಕದ ಅತಿ ಎತ್ತರದ ಬೆಟ್ಟ ಏರಿದ ನಟಿ ಸಮೀರಾ ರೆಡ್ಡಿ.!2 ತಿಂಗಳ ಮಗುವಿನೊಂದಿಗೆ ಕರ್ನಾಟಕದ ಅತಿ ಎತ್ತರದ ಬೆಟ್ಟ ಏರಿದ ನಟಿ ಸಮೀರಾ ರೆಡ್ಡಿ.!

  English summary
  Rejected for being black, tall and boaring said actress Sameera Reddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X