ಎಡವಟ್ಟಾಯ್ತು..! ಅಮಿತಾಬ್ ಬಚ್ಚನ್ ಫೋಟೋ ನೋಡಿ ರೇಖಾ ಜೂಟ್.!
ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ರೇಖಾ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗಾಸಿಪ್ ಇಂದು ನಿನ್ನೆಯದಲ್ಲ. 1970 ರಿಂದಲೂ ಈ ಗುಸುಗುಸು ಬಿಟೌನ್ ನಲ್ಲಿ ಚಾಲ್ತಿಯಲ್ಲಿದೆ.
ಗಾಸಿಪ್ ಕಾಲಂಗಳಲ್ಲಿ ಆಹಾರವಾಗದಂತೆ ಎಲ್ಲೇ ಹೋದರೂ ರೇಖಾ ಮತ್ತು ಅಮಿತಾಬ್ ಬಚ್ಚನ್ ಎಚ್ಚರವಹಿಸುತ್ತಿದ್ದರು. ಆದರೆ, ಇತ್ತೀಚೆಗಷ್ಟೇ ನಡೆದ ಸಮಾರಂಭವೊಂದರಲ್ಲಿ ಹಿರಿಯ ನಟಿ ರೇಖಾ ಕಡೆಯಿಂದ ಎಡವಟ್ಟಾಗ್ಹೋಯ್ತು.
ಅದು ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ರವರ ಕ್ಯಾಲೆಂಡರ್ ಲಾಂಚ್ ಪಾರ್ಟಿ. ಇದಕ್ಕಾಗಿ ಬಾಲಿವುಡ್ ನ ಖ್ಯಾತನಾಮರು ಭಾಗವಹಿಸಿದ್ದರು. ನಟಿ ರೇಖಾ ಕೂಡ ಕ್ಯಾಲೆಂಡರ್ ಲಾಂಚ್ ಪಾರ್ಟಿಯಲ್ಲಿ ಪಾಲ್ಗೊಂಡು, ಕ್ಯಾಮರಾಗಳಿಗೆ ಪೋಸ್ ಕೊಡುತ್ತಿದ್ದರು. ಆಗಲೇ ನೋಡಿ ಅಚಾನಕ್ಕಾಗಿ ಒಂದು ಘಟನೆ ನಡೆದಿದ್ದು.

ಕಪ್ಪು ಉಡುಗೆ ತೊಟ್ಟು ಬಂದಿದ್ದ ಹಿರಿಯ ನಟಿ ರೇಖಾ ಫೋಟೋ ವಾಲ್ ಮುಂದೆ ಪೋಸ್ ಕೊಡಲು ಆರಂಭಿಸಿದರು. ತಕ್ಷಣ ಅವರಿಗೆ ಏನು ಅನ್ಸಿಸ್ತೋ... ಹಿಂದೆ ತಿರುಗಿ ನೋಡಿದರು.
ರೇಖಾ ನಿಂತಿದ್ದ ಫೋಟೋ ವಾಲ್ ನಲ್ಲಿ ಅಮಿತಾಬ್ ಬಚ್ಚನ್ ಫೋಟೋ ಇತ್ತು. ಅದನ್ನ ನೋಡಿ ರೇಖಾ ಜೂಟ್ ಹೇಳಿದರು. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂದು ವೇಳೆ ರೇಖಾ ಸುಮ್ಮನೆ ಫೋಟೋ ತೆಗೆಸಿಕೊಂಡಿದ್ದರೆ, ಇಷ್ಟೊಂದು ಸುದ್ದಿ ಆಗುತ್ತಿತ್ತೋ, ಇಲ್ವೋ..!?


Click it and Unblock the Notifications











