ಸಿನಿಮಾದಲ್ಲಿ ನಟಿಸುತ್ತಿಲ್ಲ, ಕುಟುಂಬವೂ ಇಲ್ಲ, ಆದರೂ ಐಶಾರಾಮಿ ಜೀವನ! ಹೇಗೆ?
ಸಿನಿಮಾ ಸ್ಟಾರ್‌ಗಳ ಅದರಲ್ಲೂ ಬಾಲಿವುಡ್ ಸ್ಟಾರ್‌ಗಳ ಐಶಾರಾಮಿ ಬದುಕಿನ ಬಗ್ಗೆ ಬಹುತೇಕರಿಗೆ ಗೊತ್ತಿರುವುದೇ. ಆದರೆ ಹಾಗೆ ಐಶಾರಾಮಿಯಾಗಿ ಬದುಕಲು ಸಾಕಷ್ಟು ನೋಟಿನ ಕಂತೆಗಳನ್ನು ವ್ಯಯಿಸಬೇಕು.
Recommended Video
ದೀಪಿಕಾ ಪಡುಕೋಣೆ ತನ್ನ ಬಾಡಿಗಾರ್ಡ್‌ಗೆ ಕೋಟಿ ರೂಪಾಯಿ ಸಂಬಳವನ್ನೇ ನೀಡುತ್ತಾರೆಂದರೆ, ಆಕೆ ತನ್ನ ಒಟ್ಟಾರೆ ಜೀವನ ನಿರ್ವಹಣೆಗೆ ಎಷ್ಟು ಕೋಟಿ ವೆಚ್ಚ ಮಾಡುತ್ತಿರಬಹುದು ಎಂಬುದನ್ನು ಸಾಮಾನ್ಯರೂ ಸಹ ಊಹಿಸಬಹುದು.
ಐಶಾರಾಮಿಯ ಅನ್ವರ್ಥದಂತೆ ಇರುವ ಬಾಲಿವುಡ್‌ನಲ್ಲಿ ಕೆಲವರಿದ್ದಾರೆ ಅವರಿಗೆ ಹೆಚ್ಚಿನ ಆದಾಯವಿಲ್ಲ, ನಟನೆಯನ್ನೂ ಬಿಟ್ಟಿದ್ದಾರೆ, ಆದರೂ ಐಶಾರಾಮಿಯಾಗಿಯೇ ಬದುಕುತ್ತಿದ್ದಾರೆ. ಅವರಲ್ಲಿ ಪ್ರಮುಖರು ನಟಿ ರೇಖಾ.

ಹತ್ತು ವರ್ಷದಲ್ಲಿ ಐದು ಸಿನಿಮಾ
ನಟಿ ರೇಖಾ ಒಂದು ಕಾಲದ ಜನಪ್ರಿಯ ನಟಿ, ವರ್ಷಕ್ಕೆ ಎಂಟು ಸಿನಿಮಾಗಳು ಬಿಡುಗಡೆ ಆದದ್ದೂ ಇದೆ. ಆದರೆ ಈಗ ಅವರ ಕಾಲವಲ್ಲ. ಕಳೆದ ಹತ್ತು ವರ್ಷದಲ್ಲಿ ಅವರು ನಟಿಸಿದ್ದು ಕೇವಲ ಐದು ಸಿನಿಮಾಗಳಲ್ಲಿ ಅದರಲ್ಲಿ ಮೂರರಲ್ಲಿ ಅತಿಥಿ ಪಾತ್ರಗಷ್ಟೆ.

ಇನ್ನೂ ಮದುವೆಯಾಗಿಲ್ಲ
65 ವರ್ಷ ವಯಸ್ಸಿನ ನಟಿ ರೇಖಾ ಇನ್ನೂ ಮದುವೆಯಾಗಿಲ್ಲ ಯಾವುದೇ ಜಾಹೀರಾತುಗಳಲ್ಲಿಯೂ ನಟಿಸುತ್ತಿಲ್ಲ ಆದರೆ ಈಗಲೂ ಅದೇ ಐಶಾರಾಮಿ ಜೀವನ ನಿರ್ವಹಿಸುತ್ತಿದ್ದಾರೆ. ಆಗಾಗ್ಗೆ ಅವಾರ್ಡ್ ಕಾರ್ಯಗಳಲ್ಲಿ ಕಾಣಿಸಿಕೊಳ್ಳುವ ಅವರು ಈಗಲೂ ಸುಂದರಿಯೇ.

ಬಾಂಡ್ರಾದಲ್ಲಿ ಭವ್ಯವಾದ ಬಂಗಲೆ
ಮುಂಬೈನ ಬಾಂಡ್ರಾನಲ್ಲಿ ಭವ್ಯವಾದ ಬಂಗೆಲೆ ಹೊಂದಿರುವ ರೇಖಾ ಕೆಲವು ಐಶಾರಾಮಿ ಕಾರುಗಳನ್ನನು ಸಹ ಹೊಂದಿದ್ದಾರೆ. ನಟನೆ, ಜಾಹೀರಾತು ನಟನೆ ನಿಲ್ಲಿಸಿ ಬಹುತೇಕ ಹತ್ತು ವರ್ಷಗಳಿಗಿಂತಲೂ ಹೆಚ್ಚಾಗಿದ್ದರೂ ಐಶಾರಾಮಿ ಜೀವನ ಹೇಗೆ ನಿರ್ವಹಿಸುತ್ತಿದ್ದಾರೆ ರೇಖಾ ಎಂಬುದು ಹಲವರ ಕುತೂಹಲ.

ಚೆನ್ನಾಗಿ ಹೂಡಿಕೆ ಮಾಡಿದ್ದಾರೆ ರೇಖಾ
ಆದರೆ ರೇಖಾ ತಾನು ಗಳಿಸಿದ ಹಣವನ್ನು ಚೆನ್ನಾಗಿ ಹೂಡಿಕೆ ಮಾಡಿದ್ದಾರೆ. ಮುಂಬೈನಲ್ಲಿಯೇ ಕೆಲವಾರು ಒಳ್ಳೆಯ ಬಾಡಿಗೆ ಬರುವ ಆಸ್ತಿಗಳು ಅವರಿಗಿದೆ. ಅದನ್ನು ಹೊರತಾಗಿ ಚೆನ್ನೈನಲ್ಲೂ ಸಹ ಸಾಕಷ್ಟು ಆಸ್ತಿ ಖರೀದಿಸಿ ಬಾಡಿಗೆ ಬರುವಂತೆ ಮಾಡಿಕೊಂಡಿದ್ದಾರೆ ರೇಖಾ.

ಇತರೆ ಖರ್ಚುಗಳು ಬಹಳ ಕಡಿಮೆ
ಇದರ ಜೊತೆಗೆ ಯಾವುದೇ ಖಾಸಗಿ ಕಾರ್ಯಕ್ರಮಕ್ಕೆ ಹೋದರೂ ಅದಕ್ಕೆಂದು ಹಣ ಪಡೆಯುತ್ತಾರಂತೆ. ರೇಖಾ ಇತರೆ ಖರ್ಚುಗಳು ಬಹಳ ಕಡಿಮೆ. ಅವರಿಗೊಬ್ಬ ಮ್ಯಾನೇಜರ್ ಇದ್ದಾರೆ ಆದರೆ ಬಾಡಿಗಾರ್ಡ್ ಇತರೆ ಸಿಬ್ಬಂದಿಗಳಾರನ್ನೂ ಇಟ್ಟುಕೊಂಡಿಲ್ಲ ರೇಖಾ.

ಈಗಿನ ನಟಿಯರಿಗೆ ಖರ್ಚು ಹೆಚ್ಚು
ಈಗಿನ ನಟಿಯರು ಬಾಡಿಗಾರ್ಡ್, ಸೋಷಿಯಲ್ ಮೀಡಿಯಾ ನಿರ್ವಹಿಸಲು ಸಿಬ್ಬಂದಿ, ಪಿಆರ್‌ಒ ಸಿಬ್ಬಂದಿ, ಮೇಕಪ್‌ಗೆ ಕೆಲವರು, ಪ್ರತ್ಯೇಕ ಡಿಸೈನರ್ಸ್ ಹೀಗೆ ಹಲವರನ್ನು ಕೆಲಸಕ್ಕಿಟ್ಟುಕೊಂಡು ಕೈತುಂಬ ಸಂಬಳ ಕೊಡುತ್ತಿರುತ್ತಾರೆ ಹಾಗಾಗಿ ಅವರ ಖರ್ಚು ಹೆಚ್ಚು.

ಚೆನ್ನಾಗಿ ಬದುಕುತ್ತಿದ್ದಾರೆ ರೇಖಾ
ಆದರೆ ನಟಿ ರೇಖಾ, ಒಬ್ಬ ಮ್ಯಾನೇಜರ್ ಬಿಟ್ಟರೆ ಬೇರೆ ಯಾವ ಸಿಬ್ಬಂದಿಯನ್ನೂ ಇಟ್ಟುಕೊಂಡಿಲ್ಲ. ಆ ಮ್ಯಾನೇಜರ್ ಕೂಡ ಹಲವು ವರ್ಷಗಳಿಂದ ರೇಖಾ ಬಳಿ ಕೆಲಸ ಮಾಡುತ್ತಿರುವವರೇ. ಅಷ್ಟೆ ಅಲ್ಲದೆ ತುಂಬಾ ಐಶಾರಾಮಿ ಕಾರುಗಳು, ವಿದೇಶಿ ಪ್ರವಾಸಗಳಿಂದ ರೇಖಾ ದೂರ ಹಾಗಾಗಿ ಬರುವ ಸಂಪಾದನೆಯಲ್ಲಿ ಚೆನ್ನಾಗಿಯೇ ಬದುಕುತ್ತಿದ್ದಾರೆ ರೇಖಾ.


Click it and Unblock the Notifications











