ಪ್ರಳಯವಾದರೂ ಅಮಿತಾಬ್ ನ ಮರೆಯಲ್ಲ ರೇಖಾ ; ಬಿಗ್ ಬಿ ಮೊಮ್ಮಗನಿಗೆ ಫ್ಲೈಯಿಂಗ್ ಕಿಸ್

ಬಾಲಿವುಡ್ ಅಂದರೇನೇ ಹಾಗೆ ಅಲ್ಲಿ ದಿನಕ್ಕೊಂದು ಹೊಸ ಸುದ್ದಿ ಸದ್ದು ಮಾಡುತ್ತಲೇ ಇರುತ್ತದೆ. ತಾರೆಯರ ನಡುವಿನ ಸಂಬಂಧ, ಅವರ ಸಾರ್ವಜನಿಕ ನಡವಳಿಕೆಗಳು ಸದಾ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಇಂತಹದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಿನಿಮಾ ಕಾರ್ಯಕ್ರಮಗಳು ಅಂದ ಮೇಲೆ ಅಲ್ಲಿ ಗ್ಲಾಮರ್ ಲೋಕದ ಗಣ್ಯರು ಸೇರುವುದು ಸಾಮಾನ್ಯ. ಅಂತಹ ವೇದಿಕೆಯಲ್ಲಿ ನಡೆಯುವ ಸಣ್ಣ ಸಣ್ಣ ಚಲನವಲನಗಳು ಕೂಡ ದೊಡ್ಡ ಮಟ್ಟದ ಸುದ್ದಿಯಾಗುತ್ತವೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಕಂಡ ದೃಶ್ಯವೊಂದು ಈಗ ಎಲ್ಲರ ಬಾಯಲ್ಲೂ ಓಡಾಡುತ್ತಿದೆ.

rekha-s-public-display-of-affection-for-agastya-nanda-sparks-cringe-debate-on-the-internet

ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಎರಡು ಬಣಗಳಾಗಿ ವಿಂಗಡಣೆಯಾಗಿದ್ದಾರೆ. ಕೆಲವರು ಇದನ್ನು ಪ್ರೀತಿಯ ಸಂಕೇತವೆಂದು ಕರೆದರೆ, ಇನ್ನು ಕೆಲವರು ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಅಚ್ಚರಿ ಮೂಡಿಸಿದ ನಟಿ ರೇಖಾ ಅವರ ನಡವಳಿಕೆ...

ಬಾಲಿವುಡ್ ನ ಎವರ್ಗ್ರೀನ್ ಸುಂದರಿ ರೇಖಾ ಅವರು ಹೋದ ಕಡೆಯೆಲ್ಲಾ ತಮ್ಮದೇ ಆದ ಪ್ರಭಾವ ಬೀರುತ್ತಾರೆ. ಅವರ ಸೀರೆ ಉಡುವ ಶೈಲಿ ಮತ್ತು ಅವರ ನಗು ಎಲ್ಲರನ್ನೂ ಸೆಳೆಯುತ್ತದೆ. ಆದರೆ ಈ ಬಾರಿ ರೇಖಾ ಅವರು ಸುದ್ದಿಯಾಗಿದ್ದು ಅವರ ಸೌಂದರ್ಯಕ್ಕಾಗಿ ಅಲ್ಲ, ಬದಲಾಗಿ ಅವರು ನೀಡಿದ ಆ ಒಂದು ರಿಯಾಕ್ಷನ್ ಗಾಗಿ.

ಕಾರ್ಯಕ್ರಮವೊಂದರಲ್ಲಿ ರೇಖಾ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದಾಗ ಅವರು ಅಲ್ಲಿ ನೆರೆದಿದ್ದ ಯುವ ನಟನೊಬ್ಬನಿಗೆ ಸಾರ್ವಜನಿಕವಾಗಿಯೇ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವಿಡಿಯೋ ಕ್ಷಣಾರ್ಧದಲ್ಲಿ ಇಂಟರ್ನೆಟ್ನಲ್ಲಿ ಹರಿದಾಡಲು ಪ್ರಾರಂಭಿಸಿತು. ರೇಖಾ ಅವರ ಈ ನಡೆಗೆ ಈಗ ನೆಟ್ಟಿಗರು ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದಾರೆ.

ಅಗಸ್ತ್ಯ ನಂದಾಗೆ ಫ್ಲೈಯಿಂಗ್ ಕಿಸ್ ನೀಡಿದ ರೇಖಾ...

ಹೌದು ಆ ಯುವ ನಟ ಬೇರೆ ಯಾರೂ ಅಲ್ಲ, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ. ಈ ಘಟನೆ ನಡೆದಿದ್ದು ಇತ್ತೀಚಿನ "ಇಕ್ಕೀಸ್" ಚಿತ್ರಸ ಪ್ರೀಮಿಯರ್ ಶೋ ಸಂದರ್ಭದಲ್ಲಿ .

"ಇಕ್ಕೀಸ್" ಹೀರೋ ಬೇರೆ ಯಾರು ಅಲ್ಲ. ಬದಲಿಗೆ ಬಿಗ್ ಬಿಗ್ ಮೊಮ್ಮಗ ಅಗಸ್ತ್ಯನೇ ಈ ಚಿತ್ರದ ಕಥಾನಾಯಕ. ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದಾರೆ ಅಗಸ್ತ್ಯ. ಇನ್ನೂ ಬಾಲಿವುಡ್‌ನ ದಂತಕತೆ, ಇತ್ತೀಚೆಗೆ ನಮ್ಮನ್ನು ಅಗಲಿದ ಧರ್ಮೆಂದ್ರ ಅಭಿನಯದ ಕೊನೆಯ ಸಿನಿಮಾ ಇದು. ಈ ಸಿನಮಾದ ಪ್ರೀಮೊಯರ್ ಗೆ ಬಂದಿದ್ದ ರೇಖಾ ಅವರು ಅಗಸ್ತ್ಯ ಅವರ ಪೋಸ್ಟರ್ ಮೇಲೆ ಪ್ರೀತಿಯಿಂದ ಕೈಯಾಡಿಸಿದ್ದಾರೆ. ಆ ನಂತರ ಫ್ಲೈಯಿಂಗ್ ಕಿಸ್ ನೀಡಿದ್ದಾರೆ.

rekha-s-public-display-of-affection-for-agastya-nanda-sparks-cringe-debate-on-the-internet

ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರ ನಡುವಿನ ಹಳೆಯ ಇತಿಹಾಸ ಇಡೀ ಬಾಲಿವುಡ್ ಗೆ ತಿಳಿದಿರುವ ವಿಚಾರ. ಹೀಗಿರುವಾಗ ರೇಖಾ ಅವರು ಬಿಗ್ ಬಿ ಮೊಮ್ಮಗನಿಗೆ ಇಷ್ಟೊಂದು ಪ್ರೀತಿ ತೋರಿಸಿದ್ದು ನೋಡಿ ಜನರು ಅಚ್ಚರಿಗೊಂಡಿದ್ದಾರೆ.

'ಅಟೆನ್ಷನ್ ಹಂಗ್ರಿ' ಎಂದ ನೆಟ್ಟಿಗರು...

ಈ ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಸುಮ್ಮನೆ ಕೂತಿಲ್ಲ. ರೇಖಾ ಅವರ ಈ ವರ್ತನೆಯನ್ನು ಕಂಡು ಹಲವರು "ಅಟೆನ್ಷನ್ ಹಂಗ್ರಿ" ಎಂದು ಕರೆದಿದ್ದಾರೆ. ವಯಸ್ಸಿನಲ್ಲಿ ತನಗಿಂತ ತುಂಬಾ ಚಿಕ್ಕವನಾದ ಹುಡುಗನಿಗೆ ಈ ರೀತಿ ಸಾರ್ವಜನಿಕವಾಗಿ ರಿಯಾಕ್ಷನ್ ನೀಡುವ ಅಗತ್ಯವಿರಲಿಲ್ಲ ಎಂಬುದು ಹಲವರ ವಾದ.

ಇನ್ನು ಕೆಲವರು ಅಮಿತಾಬ್ ಬಚ್ಚನ್ ಮೇಲಿರುವ ಹಳೆಯ ಅಭಿಮಾನವನ್ನು ಅವರ ಮೊಮ್ಮಗನ ಮೂಲಕ ತೋರಿಸುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ. ರೇಖಾ ಅವರಿಗೆ ಲೈಮ್ ಲೈಟ್ ನಲ್ಲಿ ಇರುವುದು ಹೇಗೆ ಅನ್ನೋದು ಗೊತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಂಗ್ಯವಾಡುತ್ತಿದ್ದಾರೆ.

ಆದರೆ ರೇಖಾ ಅವರ ಅಭಿಮಾನಿಗಳು ಮಾತ್ರ ಇದು ಕೇವಲ ಹಿರಿಯ ನಟಿಯೊಬ್ಬರು ಕಿರಿಯ ನಟನಿಗೆ ತೋರಿದ ಪ್ರೀತಿ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ರೇಖಾ ಮತ್ತು ಅಗಸ್ತ್ಯ ನಂದಾ ಅವರ ಈ ಕಿರು ವಿಡಿಯೋ ಈಗ ಬಾಲಿವುಡ್ ಪೇಜ್ ಗಳಲ್ಲಿ ಟ್ರೆಂಡ್ ಆಗುತ್ತಿದೆ. ತಾರೆಯರ ಇಂತಹ ವರ್ತನೆಗಳು ಸದಾ ಚರ್ಚೆಗೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X