twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರ ವ್ಯವಹಾರಕ್ಕೆ ಕಾಲಿಟ್ಟ ಜಿಯೊ: ಮೊದಲ ಓಪನ್ ಥಿಯೇಟರ್

    |

    ಮೊಬೈಲ್ ನೆಟ್‌ವರ್ಕ್ ಮೂಲಕ ಕ್ರಾಂತಿ ಮಾಡಿದ ರಿಲಯನ್ಸ್ ಜಿಯೊ ಇದೀಗ ಚಿತ್ರಮಂದಿರ ವ್ಯವಹಾರಕ್ಕೆ ಕಾಲಿಟ್ಟಿದೆ. ವಿಶ್ವದ ಮೊದಲ ಛಾವಣಿ ಸಹಿತ ಓಪನ್ ಏರ್ ಡ್ರೀವ್ ಇನ್ ಥಿಯೇಟರ್ ಅನ್ನು ಪ್ರಾರಂಭ ಮಾಡುತ್ತಿದೆ.

    ಮುಂಬೈನಲ್ಲಿ ಮೊತ್ತ ಮೊದಲ ಓಪನ್ ಥಿಯೇಟರ್ ಅನ್ನು ಜಿಯೋ ನವೆಂಬರ್ 05 ರಂದು ಉದ್ಘಾಟನೆ ಮಾಡುತ್ತಿದೆ. ಓಪನ್, ಡ್ರೈವ್ ಇನ್ ಥಿಯೇಟರ್ ಆಗಿದ್ದರೂ ಇದು ಮೇಲ್ಛಾವಣಿ ಹೊಂದಿರಲಿದೆ. ಇದೇ ಈ ಓಪನ್ ಥಿಯೇಟರ್‌ನ ವಿಶೇಷತೆ.

    ಜಿಯೋ ವರ್ಡ್ಸ್ ಡ್ರೈವ್ ಹೆಸರಿನ ವಿಶ್ವದರ್ಜೆಯ ಶಾಪಿಂಗ್ ಮಾಲ್ ಅನ್ನು ರಿಲಯನ್ಸ್ ಸಂಸ್ಥೆ ಮುಂಬೈನಲ್ಲಿ ನಿರ್ಮಿಸಿದೆ. ಇದೇ ಶಾಪಿಂಗ್ ಮಾಲ್‌ನಲ್ಲಿ ಡ್ರೈವ್ ಇನ್ ಥಿಯೇಟರ್ ಸಹ ಇದೆ. ಸಿನಿಮಾ ವೀಕ್ಷಿಸುವವರು ಕಾರನ್ನು ಒಳತಂದು, ಸ್ಕ್ರೀನ್‌ ಮುಂದೆ ನಿಗದಿತ ಜಾಗದಲ್ಲಿ, ಅಂತರದಲ್ಲಿ ನಿಲ್ಲಿಸಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ.

    Reliance Announce Opening Date Of Jio Drive In Theater

    ಈ ಡ್ರೈವ್ ಇನ್ ಚಿತ್ರಮಂದಿರದಲ್ಲಿ ಒಟ್ಟಿಗೆ 290 ಕಾರುಗಳನ್ನು ನಿಲ್ಲಿಸಬಹುದಾಗಿದೆ. ಇದು ಇಡೀಯ ಮುಂಬೈನಲ್ಲಿಯೇ ಅತಿ ದೊಡ್ಡ ಸಿನಿಮಾ ಪರದೆಯನ್ನು ಹೊಂದಿದೆ. ಅಷ್ಟೇ ಅಲ್ಲದೆ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಅತ್ಯುತ್ತಮ ಸಿನಿಮಾ ವೀಕ್ಷಣೆ ಅನುಭವ ನೀಡುವ ಭರವಸೆಯನ್ನು ಸಂಸ್ಥೆ ನೀಡಿದೆ.

    ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ''ಜೆಡ್ಬ್ಲುಡಿ' ಮೂಲಕ ವಿಶ್ವದರ್ಜೆಯ ತಂತ್ರಜ್ಞಾನವನ್ನು ಭಾರತೀಯ ಗ್ರಾಹಕರಿಗೆ, ಸಿನಿಮಾ ಪ್ರೇಮಿಗಳಿಗೆ ಪರಿಚಯಿಸುತ್ತಿದ್ದೇವೆ. ಜೆಡ್ಬ್ಲುಡಿ ಅತ್ಯುತ್ತಮ ದರ್ಜೆಯ ವ್ಯಾಪಾರ ಹಾಗೂ ಮನರಂಜನೆಯ ಸ್ಥಳವಾಗಿದೆ. ಮಾಲ್‌ಗೆ ಆಗಮಿಸುವವರು ಅತ್ಯುತ್ತಮ ಅನುಭವವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಮುಂಬೈ ನಿವಾಸಿಗಳು ವಿಶ್ವದರ್ಜೆಯ ಶಾಪಿಂಗ್ ಅನುಭವವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ'' ಎಂದಿದ್ದಾರೆ. ಇಶಾ ಅಂಬಾನಿ ರಿಲಯನ್ಸ್ ರೀಟೇಲ್‌ನ ನಿರ್ದೇಶಕಿಯೂ ಆಗಿದ್ದಾರೆ.

    ಓಪನ್ ಏರ್ ಅಥವಾ ಡ್ರೈವ್ ಇನ್ ಚಿತ್ರಮಂದಿರಗಳು ಭಾರತಕ್ಕೆ ಹೊಸದೇನೂ ಅಲ್ಲ. ಬ್ರಿಟೀಷರ ಕಾಲದಲ್ಲಿಯೇ ಮುಂಬೈನಲ್ಲಿ ಓಪನ್ ಏರ್ ಥಿಯೇಟರ್‌ಗಳಿದ್ದವು. ಅದಾದ ಬಳಿಕ ಕತ್ತಲ ಕೋಣೆಯ ಚಿತ್ರಮಂದಿರಗಳು ಬಹಳ ಜನಪ್ರಿಯತೆ ಗಳಿಸಿಕೊಂಡವು ಆದರೆ ಈಗಲೂ ಕೆಲವು ಓಪನ್ ಏರ್ ಚಿತ್ರಮಂದಿರಗಳು ಭಾರತದಲ್ಲಿವೆ.

    ಹೈದರಾಬಾದ್, ಚೆನ್ನೈ, ಅಹಮದಾಬಾದ್‌ಗಳಲ್ಲಿ ಡ್ರೈವ್ ಇನ್ ಥಿಯೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ 'ಅಂಡರ್‌ ದಿ ಸ್ಟಾರ್ಸ್' ಹೆಸರಿನ ಡ್ರೈವ್ ಇನ್ ಥಿಯೇಟರ್‌ ಇದೆ.

    ರಿಲಯನ್ಸ್‌ ಹಲವು ವರ್ಷಗಳಿಂದಲೂ ಮನರಂಜನಾ ಕ್ಷೇತ್ರದಲ್ಲಿದೆ ರಿಲಯನ್ಸ್ ಎಂಟರ್ಟೈನ್‌ಮೆಂಟ್ ಮೂಲಕ ರಿಲಯನ್ಸ್‌ ಸಂಸ್ಥೆಯು 90 ಹಿಂದಿ ಸಿನಿಮಾಗಳು, 12 ಬೆಂಗಾಳಿ, ಹದಿಮೂರು ತಮಿಳು ಸಿನಿಮಾ, 12 ತೆಲುಗು ಸಿನಿಮಾ, ಎರಡು ಕನ್ನಡ ಸಿನಿಮಾ, ಒಂದು ಪಂಜಾಬಿ, ಒಂದು ಮಲಯಾಳಂ ಸಿನಿಮಾ, 24 ಇಂಗ್ಲೀಷ್ ಸಿನಿಮಾಗಳನ್ನು ನಿರ್ಮಾಣ ಹಾಗೂ ಸಹ ನಿರ್ಮಾಣ ಮಾಡಿದೆ. ನೆಟ್‌ವರ್ಕ್ 18 ಹಾಗೂ ವೈಯೋಕಾಮ್ ಮೂಲಕ ಟಿವಿ ಜಗತ್ತಿನಲ್ಲೂ ಹಲವು ವರ್ಷಗಳಿಂದ ಸಕ್ರಿಯವಾಗಿದೆ.

    English summary
    Reliance opening its first open air drive in theater in Mumbai on November 05. Isha Ambani said it will give the best experience to viewers.
    Wednesday, November 3, 2021, 9:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X