ಬಾಲಿವುಡ್‌ನ ಭೋಲಾ, ಶೆಹ್ಜಾದಾ ಟೀಸರ್ ಬಿಡುಗಡೆ; ಎರಡೂ ಚಿತ್ರಗಳು ಸೌತ್ ರಿಮೇಕ್!
ಭಾರತದ ಎಲ್ಲಾ ಪ್ರಮುಖ ಚಿತ್ರರಂಗಗಳೂ ಸಹ ಕೊರೊನಾ ನಂತರ ಒಳ್ಳೆಯ ಗಳಿಕೆ ಮಾಡುವುದರ ಮೂಲಕ ಕಮ್ ಬ್ಯಾಕ್ ಮಾಡಿವೆ. ಅದರಲ್ಲಿಯೂ ದಕ್ಷಿಣ ಭಾರತ ಚಿತ್ರರಂಗಗಳು ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿವೆ. ವಿಶೇಷವಾಗಿ ಈ ವರ್ಷ ಕನ್ನಡದಲ್ಲಿ ಮೂರು ಇಂಡಸ್ಟ್ರಿ ಹಿಟ್ ಚಿತ್ರಗಳು, ತಮಿಳಿನಲ್ಲಿ ಎರಡು ಇಂಡಸ್ಟ್ರಿ ಹಿಟ್ ಚಿತ್ರಗಳು ಹಾಗೂ ತೆಲುಗಿನಲ್ಲಿ ಒಂದು ಇಂಡಸ್ಟ್ರಿ ಹಿಟ್ ದಾಖಲಾಗಿವೆ. ಆದರೆ ಬಾಲಿವುಡ್‌ನಲ್ಲಿ ಹೀಗಿಲ್ಲ. ಮುನ್ನೂರು ಕೋಟಿ ಗಳಿಕೆ ಮಾಡಿದ ಹಿಂದಿಯ ಏಕೈಕ ಚಿತ್ರ ಬ್ರಹ್ಮಾಸ್ತ್ರ ಮಾತ್ರ. ಅದೂ ಸಹ ಅನುಮಾನ ಎಂಬ ವಾದವೂ ಸಹ ಇದೆ.
ಇನ್ನು ಇತ್ತೀಚೆಗಷ್ಟೆ ಬಿಡುಗಡೆಗೊಂಡಿರುವ ಅಜಯ್ ದೇವಗನ್ ಅಭಿನಯದ ದೃಶ್ಯಂ 2 ಚಿತ್ರ ಒಳ್ಳೆಯ ಓಪನಿಂಗ್ ಪಡೆದುಕೊಂಡು ಬಾಲಿವುಡ್‌ಗೆ ಮರುಜೀವ ನೀಡಿದೆ ಎಂದೇ ಹೇಳಬಹುದು. ಹೀಗೆ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಈ ಬಾಲಿವುಡ್ ಚಿತ್ರ ಮಲಯಾಳಂ ಚಿತ್ರದ ರಿಮೇಕ್ ಎಂಬುದು ತಿಳಿದಿರುವ ವಿಷಯವೇ.

ಈ ಮೂಲಕ ಸೌತ್ ಚಿತ್ರವೊಂದರ ರಿಮೇಕ್ ಸಹಾಯದಿಂದ ಕಮ್ ಬ್ಯಾಕ್ ಮಾಡಿರುವ ಬಾಲಿವುಡ್‌ನಲ್ಲಿ ಇದೀಗ ಮತ್ತೆರೆಡು ರಿಮೇಕ್ ಚಿತ್ರಗಳು ಬಿಡುಗಡೆಗೆ ತಯಾರಾಗಿವೆ. ಹೌದು, ಇದೇ ಅಜಯ್ ದೇವಗನ್ ಅಭಿನಯದ ಭೋಲಾ ಹಾಗೂ ಕಾರ್ತಿಕ್ ಆರ್ಯನ್ ಅಭಿನಯದ ಶೆಹ್ಜಾದಾ ಚಿತ್ರಗಳ ಟೀಸರ್‌ಗಳು ಇಂದು ( ನವೆಂಬರ್ 22 ) ಯುಟ್ಯೂಬ್‌ನಲ್ಲಿ ಬಿಡುಗಡೆಗೊಂಡಿದ್ದು, ಬಾಲಿವುಡ್ ಸಿನಿ ಪ್ರೇಕ್ಷಕರು ಟೀಸರ್‌ಗಳನ್ನು ಮೆಚ್ಚಿಕೊಂಡಿದ್ದರೆ, ದಕ್ಷಿಣ ಭಾರತ ಚಿತ್ರರಂಗದ ಪ್ರೇಕ್ಷಕರು ಈ ಎರಡೂ ಟೀಸರ್‌ಗಳನ್ನು ಟ್ರೋಲ್ ಮಾಡಿದ್ದಾರೆ.
ಇನ್ನು ಭೋಲಾ ಚಿತ್ರ ಕಾರ್ತಿ ಅಭಿನಯದ ತಮಿಳಿನ ಖೈದಿ ಚಿತ್ರದ ರಿಮೇಕ್ ಆಗಿದ್ದು, ಟೀಸರ್‌ನಲ್ಲಿರುವ ಆಕ್ಷನ್ ದೃಶ್ಯಗಳು ಟೀಕೆಗೆ ಒಳಪಟ್ಟಿವೆ. ಅದರಲ್ಲಿಯೂ ಖೈದಿ ಚಿತ್ರದಲ್ಲಿ ಇರದಿದ್ದ ತ್ರಿಶೂಲದ ಫೈಟ್ ದೃಶ್ಯ ಕಂಡ ಸೌತ್ ಸಿನಿ ಪ್ರೇಮಿಗಳು ನಗತೊಡಗಿದ್ದಾರೆ. ಅತ್ತ ಕಾರ್ತಿಕ್ ಆರ್ಯನ್ ಅಭಿನಯದ ಶೆಹ್ಜಾದಾ ಚಿತ್ರ ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ 'ಅಲಾ ವೈಕುಂಠಪುರಂಲೋ'ನ ರಿಮೇಕ್ ಆಗಿದ್ದು, ಈ ಚಿತ್ರದ ಟೀಸರ್ ಕೂಡ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.


Click it and Unblock the Notifications











