twitter
    For Quick Alerts
    ALLOW NOTIFICATIONS  
    For Daily Alerts

    ಕಾರ್ಗಿಲ್ ವಿಜಯ ದಿವಸ: ನೆನಪಾಗುತ್ತಿದೆ ಈ ಐದು ಚಿತ್ರಗಳು

    |

    ದೇಶಾದ್ಯಂತ ಇಂದು (ಜುಲೈ 26) ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುತ್ತಿದೆ. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ವಿರುದ್ಧ ಹೋರಾಡಿ ಗೆದ್ದ ಹಾಗೂ ವೀರಮರಣ ಹೊಂದಿದೆ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ವಿಶೇಷ ದಿನ ಇದಾಗಿದೆ. ಈ ಸಂಭ್ರಮಕ್ಕೆ ಈಗ 20 ವರ್ಷ.

    ಕಾರ್ಗಿಲ್ ಯುದ್ಧ ವಿಜಯ ದಿವಾಸವನ್ನ ಬಾಲಿವುಡ್ ಚಿತ್ರರಂಗ ಕೂಡ ವಿಶೇಷವಾಗಿ ಆಚರಿಸಿದೆ. ಕಾರ್ಗಿಲ್ ಯುದ್ಧದ ಕುರಿತು ಅನೇಕ ಸಿನಿಮಾ ಮಾಡಿ, ಭಾರತೀಯ ಯೋಧರನ್ನ ಸ್ಮರಿಸಿದೆ.

    ಕಾರ್ಗಿಲ್ ವಿಜಯ್ ದಿವಸಕ್ಕೆ ಇಪ್ಪತ್ತು; ದೇಶ ಕಾಯುವ ಯೋಧರಿಗೆ ವಂದೇ

    ಕಾರ್ಗಿಲ್ ವಿಜಯ ದಿವಾಸವನ್ನ ಸಂಭ್ರಮಿಸುವ ಈ ಸಂತಸದ ಕ್ಷಣದಲ್ಲಿ ಕೆಲವು ಚಿತ್ರಗಳು ನೆನಪಾಗುತ್ತೆ. ಕಾರ್ಗಿಲ್ ಕ್ಷಣವನ್ನ ಪ್ರತ್ಯಕ್ಷವಾಗಿ ನೋಡದವರಿಗೆ, ಈ ಚಿತ್ರಗಳು ಉದಾಹರಣೆಯಾಗಿವೆ. ಅಷ್ಟಕ್ಕೂ, ಬೆಳ್ಳಿತೆರೆಯಲ್ಲಿ ವೀರ ಯೋಧರ ಸಾಧನೆಯನ್ನ ಸ್ಮರಿಸಿದ ಚಿತ್ರಗಳ ಪೈಕಿ ಪ್ರಮುಖವಾದ ಐದು ಚಿತ್ರಗಳ ಪಟ್ಟಿ ಇಲ್ಲಿದೆ. ಮುಂದೆ ಓದಿ....

    ಲಾಕ್ ಕಾರ್ಗಿಲ್

    ಲಾಕ್ ಕಾರ್ಗಿಲ್

    ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಕಾರ್ಗಿಲ್ ಯುದ್ಧದ ಆಧಾರಿತ ಕಥೆಯಲ್ಲಿ ಮೂಡಿಬಂದಿದ್ದ ಚಿತ್ರ 'ಲಾಕ್ ಕಾರ್ಗಿಲ್'. 2003ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರದಲ್ಲಿ ಸಂಜಯ್ ದತ್, ಸುನೀಲ್ ಶೆಟ್ಟಿ, ಅಭಿಷೇಕ್ ಬಚ್ಚನ್, ಅಜಯ್ ದೇವಗನ್, ನಾಗಾರ್ಜುನ, ಸೈಫ್ ಅಲಿ ಖಾನ್, ಕರೀನಾ ಕಪೂರ್, ಹೀಗೆ ದೊಡ್ಡ ತಾರಬಳಗವೇ ಇತ್ತು. ಈ ಚಿತ್ರವನ್ನ ನೋಡಿದ್ರೆ ಕಾರ್ಗಿಲ್ ಯುದ್ಧವನ್ನ ನೋಡಿದ ಅನುಭವ ಸಿಗುತ್ತೆ.

    'ಲಕ್ಷ್ಯ' 2004

    'ಲಕ್ಷ್ಯ' 2004

    ಅಮಿತಾಬ್ ಬಚ್ಚನ್, ಹೃತಿಕ್ ರೋಷನ್, ಪ್ರೀತಿ ಜಿಂಟಾ, ಶರದ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ 'ಲಕ್ಷ್ಯ' ಸಿನಿಮಾ ಈ ದಿನ ನೆನಪಾಗುತ್ತೆ. 1999ರಲ್ಲಿ ನಡೆದ ಕಾರ್ಗಿಲ್ ವಾರ್ ಹಿನ್ನಲೆಯಲ್ಲಿ ಈ ಕಥೆಯೂ ಸಾಗುವುದರಿಂದ ಈ ಸಿನಿಮಾವನ್ನ ಒಮ್ಮೆ ನೋಡಬೇಕು.

    ಕಾರ್ಗಿಲ್ ವಿಜಯ್ ದಿವಸ್: ಭಾರತೀಯ ವೀರಯೋಧರ ಸಾಹಸಗಾಥೆ

    'ಮೌಸಮ್' 2011

    'ಮೌಸಮ್' 2011

    ಶಾಹೀದ್ ಕಪೂರ್, ಸೋನಮ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಮೌಸಮ್ (Mausam) ಚಿತ್ರವೂ ಈ ದಿನ ಕಣ್ಣ ಮುಂದೆ ಬರುತ್ತೆ. ಏರ್ ಆಫೀಸರ್ ಹ್ಯಾರಿ ಅವರ ಬಯೋಗ್ರಫಿ ಆಗಿದ್ದ ಈ ಚಿತ್ರದಲ್ಲಿ ಕಾರ್ಗಿಲ್ ವಾರ್ ಗೆ ಸಂಬಂಧಿಸಿದ ಕಥೆಯನ್ನ ವಿವರವಾಗಿ ತೋರಿಸಲಾಗಿದೆ.

    'ಬಾರ್ಡರ್' 1997

    'ಬಾರ್ಡರ್' 1997

    ಭಾರತ ಮತ್ತು ಪಾಕಿಸ್ತಾನದ ನಡುವೆ 1971ರಲ್ಲಿ ನಡೆದ Longewala ಯುದ್ಧ ಆಧರಿತ ಕಥಯಾಗಿತ್ತು. 1997ರಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ, ಸನ್ನಿ ಡಿಯೋಲ್, ಅಕ್ಷೇಯಾ ಖನ್ನಾ, ರಾಖಿ, ಜಾಕಿ ಶ್ರಾಫ್ ಸೇರಿದಂತೆ ಹಲವರು ನಟಿಸಿದ್ದರು.

    'ಕಾರ್ಗಿಲ್ ವಿಜಯೋತ್ಸವ'ವನ್ನ ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್'ಕಾರ್ಗಿಲ್ ವಿಜಯೋತ್ಸವ'ವನ್ನ ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್

    ಟ್ಯಾಂಗೋ ಚಾರ್ಲಿ

    ಟ್ಯಾಂಗೋ ಚಾರ್ಲಿ

    2005ರಲ್ಲಿ ಬಿಡುಗಡೆಯಾಗಿದ್ದ 'ಟ್ಯಾಂಗೋ ಚಾರ್ಲಿ' ಸಿನಿಮಾ ಕೂಡ ಈ ಕ್ಷಣದಲ್ಲಿ ನೆನಪಾಗುತ್ತೆ. ಅಜಯ್ ದೇವಗನ್, ಬಾಬಿ ಡಿಯಲ್, ಸಂಜಯ್ ದತ್, ಸುನೀಲ್ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದರು. ಬಾರ್ಡರ್ ನಲ್ಲಿ ಯುವ ಯೋಧರ ಪರಾಕ್ರಮದ ಬಗ್ಗೆ ಈ ಸಿನಿಮಾ ಮೂಡಿ ಬಂದಿದತ್ತು.

    English summary
    India celebrates 20 years of victory in Kargil War in the name of Kargil Vijay Diwas. here is the 5 bollywood war movies.
    Friday, July 26, 2019, 12:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X