ಮುಸ್ಲಿಂ ಧರ್ಮಗುರು ಕೈ ಹಿಡಿದು ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ ಗೋಲ್ಡನ್ ಸ್ಟಾರ್ ನಾಯಕಿ
ಕೆಲ ನಟ-ನಟಿಯರು ಚಿತ್ರರಂಗಕ್ಕೆ ಹೀಗೆ ಬಂದು ಹಾಗೆ ಮಾಯವಾಗಿಬಿಡ್ತಾರೆ. ನಟಿಯರಂತೂ ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸೋದು. ಕೆಲವರು ಮಾತ್ರ ಮದುವೆ, ಮಗು ಅಂತೆಲ್ಲಾ ದೊಡ್ಡದಾಗಿ ಬ್ರೇಕ್ ಪಡೆಯದೇ ಚಿತ್ರರಂಗದಲ್ಲಿ ಮುಂದುವರೆಯುತ್ತಾರೆ.
ಅಂದಹಾಗೆ ಈ ಫೋಟೊದಲ್ಲಿ ಮಗುವನ್ನು ಎತ್ತಿಕೊಂಡು ಪತಿಯ ಜೊತೆ ಪೋಸ್ ಕೊಟ್ಟಿರುವ ನಟಿ ಯಾರು ಎನ್ನುವುದು ಗೊತ್ತಾಯ್ತಾ? ಈಕೆ ಕನ್ನಡ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು. ನಟಿಯಾಗಿ ಮಾತ್ರವಲ್ಲದೇ ಕೆಲ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್, ಗೆಸ್ಟ್ ಅಪಿಯರೆನ್ಸ್ ಸಹ ಮಾಡಿದ್ದರು.

ಹಿಂದಿ ಬಿಗ್‌ಬಾಸ್ ಸೀಸನ್-6ರಲ್ಲಿ ಸ್ಪರ್ಧಿಯಾಗಿ ಈಕೆ ದೊಡ್ಮನೆ ಒಳಗೆ ಹೋಗಿದ್ದರು. ಸೆಕೆಂಡ್ ರನ್ನರ್ ಅಪ್ ಆಗಿ ಗಮನ ಸೆಳೆದಿದ್ದರು. ಅತ್ತ ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್ ಸಿನಿಮಾಗಳಲ್ಲಿ ಕೂಡ ಈಕೆ ಕಾಣಿಸಿಕೊಂಡಿದ್ದರು. ಚಿತ್ರರಂಗದಲ್ಲಿ ನಟಿಯಾಗಿ ಉತ್ತುಂಗಕ್ಕೆ ಏರಿದ್ದ ಸಮಯದಲ್ಲೇ ಮದುವೆಯಾಗಿ ಸಿನಿಮಾಗಳಿಗೆ ಗುಡ್‌ಬೈ ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದರೂ ಗ್ಲಾಮರ್ ಪ್ರಪಂಚದಿಂದ ದೂರಾಗಿದ್ದರು.
ಮದುವೆ ವೇಳೆಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಿನಿಮಾಗಳ ಫೋಟೊ, ವಿಡಿಯೋ ಡಿಲೀಟ್ ಮಾಡಿದ್ದರು. ಮದುವೆ ಬಳಿಕ ಆಧ್ಯಾತ್ಮಿಕದತ್ತ ಹೆಚ್ಚು ಗಮನ ಹರಿಸಿದರು. ಅಂದಹಾಗೆ ಈಕೆ ಮತ್ಯಾರೂ ಅಲ್ಲ, ನಟಿ ಸನಾ ಖಾನ್. ಕನ್ನಡದ 'ಕೂಲ್.. ಸಖತ್ ಹಾಟ್ ಮಗಾ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯಾಗಿ ನಟಿಸಿದ್ದರು.
ಮುಂಬೈನಲ್ಲಿ ಹುಟ್ಟಿ ಬೆಳೆದ ಸನಾ ಖಾನ್ ತಂದೆ ಕನ್ನೂರು ಮೂಲದ ಮಲಯಾಳಿ ಮುಸ್ಲಿಂ. ತಾಯಿ ಸಯೀದಾ ಮುಂಬೈನವರು. 21 ನವೆಂಬರ್ 2020 ರಂದು, ಸನಾ ಖಾನ್ ಸೂರತ್‌ನಲ್ಲಿ ಮುಸ್ಲಿಂ ಧರ್ಮಗುರು ಮುಫ್ತಿ ಅನಾಸ್ ಸಯದ್ ಅವರ ಕೈ ಹಿಡಿದರು. ದಂಪತಿಗೆ ಕಳೆದ ವರ್ಷ ಮೊದಲ ಮಗು ಹುಟ್ಟಿತ್ತು. ಆತನಿಗೆ ಸೈಯದ್ ತಾರಿಕ್ ಜಮಿಲ್ ಎಂದು ಹೆಸರಿಟ್ಟಿದ್ದಾರೆ.
ಇಷ್ಟುದಿನ ಮಗನ ಮುಖವನ್ನು ದಂಪತಿ ರಿವೀಲ್ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಗನನ್ನು ತೋರಿಸಿ ಸನಾ ಖಾನ್ ಪೋಸ್ಟ್ ಮಾಡಿದ್ದಾರೆ. ಸೈಯದ್ ತಾರಿಕ್ ಜಮಿಲ್ ಮನೆಯಲ್ಲಿ ಆಟ ಆಡುತ್ತಿರುವ ವೀಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸನಾ ಖಾನ್ 'ಯೇಹಿ ಹೇ ಹೈ ಸೊಸೈಟಿ' ಎನ್ನುವ ಬಾಲಿವುಡ್ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ ತಮಿಳಿನ 'ಈ' ಸಿನಿಮಾ ಮೂಲಕ ಸೌತ್ ಸಿನಿ ಇಂಡಸ್ಟ್ರಿಗೆ ಬಂದರು. 'ಗಗನಂ', 'ಪಯಣಂ', 'ಕ್ಲೈಮ್ಯಾಕ್ಸ್', 'ಜೈಹೋ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಿಂಚಿದರು. 'ಕೂಲ್' ಚಿತ್ರದಲ್ಲಿ ಕಾಜಲ್ ಎನ್ನುವ ಪಾತ್ರದಲ್ಲಿ ಗಣಿಗೆ ಜೋಡಿ ಆಗಿದ್ದರು.
ಶಿಲ್ಪಾ ಗಣೇಶ್ ನಿರ್ಮಾಣದ 'ಕೂಲ್' ಚಿತ್ರಕ್ಕೆ ಸ್ವತಃ ಗಣೇಶ್ ಆಕ್ಷನ್ ಆಕ್ಷನ್ ಕಟ್ ಹೇಳಿದ್ದರು. 2011ರಲ್ಲಿ ಈ ಸಿನಿಮಾ ತೆರೆಕಂಡು ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಬಳಿಕ ಸನಾ ಖಾನ್ ಕನ್ನಡದ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ತಮಿಳಿನ 'ಅಯೋಗ್ಯ' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಆಕೆ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಮುಸ್ಲಿಂ ಧಾರ್ಮಿಕ ವಿಚಾರಗಳ ಹಂಚಿಕೊಳ್ಳುತ್ತಿರುತ್ತಾರೆ.


Click it and Unblock the Notifications











