»   » 9 ವರ್ಷದ ಹುಡುಗಿಗೆ 'ಅಪ್ಪ'ನಾದ ಸಲ್ಮಾನ್ ಖಾನ್

9 ವರ್ಷದ ಹುಡುಗಿಗೆ 'ಅಪ್ಪ'ನಾದ ಸಲ್ಮಾನ್ ಖಾನ್

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇನ್ನು ಮದುವೆನೇ ಆಗಿಲ್ಲ. ಅಷ್ಟರೊಳಗೆ ಅಪ್ಪ ಆದ್ರಾ ಅಂತ ಆಶ್ಚರ್ಯವಾಗಬೇಡಿ. ಸಲ್ಲು ಅಪ್ಪ ಆಗುತ್ತಿರುವುದು ನಿಜಾನೇ. ಆದ್ರೆ, ನಿಜ ಜೀವನದಲ್ಲಲ್ಲ. ತಾವು ಅಭಿನಯಿಸಲಿರುವ ಮುಂದಿನ ಚಿತ್ರದಲ್ಲಿ.

ಹೌದು, ನೃತ್ಯ ಸಂಯೋಜಕ ರೆಮೋ ಡಿಸೋಜಾ ಅವರ ಮುಂದಿನ ಚಿತ್ರದಲ್ಲಿ ಸಲ್ಮಾನ್ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ 'ಡ್ಯಾನ್ಸಿಂಗ್ ಡ್ಯಾಡ್' ಎಂದು ಟೈಟಲ್ ಇಡಲಾಗಿದೆ. ಇದೊಂದು ಡ್ಯಾನ್ಸ್ ಕುರಿತಾದ ಚಿತ್ರವಾಗಿದ್ದು, 9 ವರ್ಷದ ಹುಡುಗಿಯ ಅಪ್ಪನಾಗಿ ಸಲ್ಲು ಅಭಿನಯಿಸುತ್ತಿದ್ದಾರೆ.

ಸಲ್ಮಾನ್ ನೆಚ್ಚಿನ ಸಹನಟ ಇಂದರ್ ಈಗ ನೆನಪು ಮಾತ್ರ

Remo D'Souza and Salman Khan Movie titled Dancing Dad

ಈ ಚಿತ್ರದಲ್ಲಿ ಸಲ್ಮಾನ್ ಜೊತೆ ಜಾಕ್ವಲೀನ್ ಫರ್ನಾಂಡಿಸ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಕಿಕ್' ಚಿತ್ರದ ನಂತರ ಮತ್ತೆ ಈ ಜೋಡಿಯನ್ನ ನೋಡಲು ಕಾಯುತ್ತಿರುವ ಬಾಲಿವುಡ್ ಪ್ರೇಕ್ಷಕರಿಗೆ 'ಡ್ಯಾನ್ಸಿಂಗ್ ಡ್ಯಾಡ್' ಸಿಹಿ ಸುದ್ದಿ ನೀಡಿದೆ.

ಸಲ್ಲು ಮಾಡಿದ ಕೆಲಸದಿಂದ ಕತ್ರಿನಾ ಬಗ್ಗೆ ಗುಲ್ಲೆಬ್ಬಿದೆ ಹೊಸ ಸುದ್ದಿ

Remo D'Souza and Salman Khan Movie titled Dancing Dad
Salman Khan, Prabhas to Work Together in One | Filmibeat Kannada

ಸದ್ಯ, 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ನಟಿಸುತ್ತಿರುವ ಸಲ್ಲು ಬಾಯ್, ಅದಾದ ನಂತರ ರೆಮೋ ಡಿಸೋಜಾ ಅವರ ಪ್ರಾಜೆಕ್ಟ್ ಶುರು ಮಾಡಲಿದ್ದಾರೆ.

English summary
Choreographer-filmmaker Remo D'Souza is set to roll out his next dance flick with Salman Khan in the lead. The Movie titled 'Dancing Dad'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada