ಬರೋಬ್ಬರಿ 40 ಕೆಜಿ ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ ರೆಮೋ ಡಿಸೋಜಾ ಪತ್ನಿ

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ತನ್ನ ಪತ್ನಿಯ ಫೋಟೋ ಹಂಚಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ರೆಮೋ ಪತ್ನಿ ಲಿಸೆಲ್ ಡಿಸೋಜಾ ಗುರುತು ಸಿಗದ ರೀತಿಯಲ್ಲಿ ಬದಲಾಗಿದ್ದಾರೆ. ದಪ್ಪಗೆ ಗುಂಡಗಿದ್ದ ಲಿಸೆಲ್ ಇದೀಗ ತೆಳ್ಳಗೆ ಬಳಕುವ ಬಳ್ಳಿಯ ಹಾಗೆ ಆಗಿದ್ದಾರೆ. ಭಾರಿ ಪ್ರಮಾಣದಲ್ಲಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಮೂಲಕ ಬೆರಗಗುವಂತೆ ಮಾಡಿದ್ದಾರೆ. ಪತ್ನಿಯ ಈ ಬದಲಾವಣೆ ಕಂಡು ಸ್ವತಃ ರಿಮೋ ಡಿಸೋಜಾ ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಹೆಂಡತಿಯ ಈ ಬದ್ಧತೆ ಮತ್ತು ಪರಿಶ್ರಮಕ್ಕೆ ರೆಮೋ ಹ್ಯಾಟ್ಸ್​ಆಫ್​ ಹೇಳಿದ್ದಾರೆ. ಸದ್ಯ ರೆಮೋ ಪತ್ನಿಯ ಫೋಟೋಗಳು ಎಲ್ಲಾ ಕಡೆ ವೈರಲ್​ ಆಗುತ್ತಿದೆ. ಈ ಬದಲಾವಣೆಯ ಹಿಂದಿನ ಸೀಕ್ರೆಟ್​ ಏನು ಎಂದು ಎಲ್ಲರೂ ಕೇಳುತ್ತಿದ್ದಾರೆ. ಅಂದಹಾಗೆ ಲಿಸೆಲ್ ಮೊದಲು ಬರೋಬ್ಬರಿ 105 ಕೆಜಿ ಇದ್ದರು. ಈಗ ಅವರು 65 ಕೆಜಿ ಆಗಿದ್ದಾರೆ. ಇಷ್ಟ ಪ್ರಮಾಣದಲ್ಲಿ ಅಂದರೆ 40 ಕೆಜಿ ತೂಕ ಕಡಿಮೆ ಮಾಡಿಕೊಳ್ಳುವುದು ಎಂದರೆ ಸುಲಭದ ಕೆಲಸವಲ್ಲ. ಹಾಗಾಗಿಯೇ ಅವರಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪತ್ನಿಯ ಈ ಬದಲಾವಣೆ ಬಗ್ಗೆ ರೆಮೋ ಡಿಸೋಜಾ ಸಾಮಾಜಿಕ ಜಾಲತಾಣದಲ್ಲಿ "ಇದಕ್ಕೆ ತುಂಬ ಪರಿಶ್ರಮ ಬೇಕಾಗುತ್ತದೆ. ಆದರೆ ದೊಡ್ಡ ಹೋರಾಟ ನಡೆಯುವುದು ನಮ್ಮ ಮನಸ್ಸಿನ ಒಳಗೆ. ಆ ರೀತಿ ಲಿಸೆಲ್ ಹೋರಾಡಿದ್ದನ್ನು ನಾನು ನೋಡಿದ್ದೇನೆ. ಅಸಾಧ್ಯವಾಗಿದ್ದನ್ನು ಆಕೆ ಸಾಧಿಸಿ ತೋರಿಸಿದ್ದಾಳೆ. ಇದೆಲ್ಲವೂ ಮನಸ್ಸಿಗೆ ಸಂಬಂಧ ಪಟ್ಟಿದ್ದು" ಎಂದು ರೆಮೋ ಡಿಸೋಜಾ ಬರೆದುಕೊಂಡಿದ್ದಾರೆ.

Remo DSouza’s Wife Lizelle DSouza Lose A Huge 40 Kgs

"ನೀನು ಸಾಧಿಸಿದ್ದೀಯ. ನಿನ್ನ ಬಗ್ಗೆ ಹೆಮ್ಮೆ ಆಗುತ್ತದೆ. ನೀನು ನನಗಿಂತಲೂ ಗಟ್ಟಿಯಾಗಿದ್ದೀಯ. ನನಗೆ ನೀನೇ ಸ್ಫೂರ್ತಿ" ಎಂದು ಹೆಂಡತಿಗೆ ರೆಮೋ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಲಿಸೆಲ್ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಅಂದಹಾಗೆ ತೆಳ್ಳಗಾಗಲು ಲಿಸೆಲ್ 2018ರ ಡಿಸೆಂಬರ್​ನಿಂದ ಅಭ್ಯಾಸ ಮಾಡಿದ್ದಾರೆ. ಒಂದು ವರ್ಷದೊಳಗೆ 15 ರಿಂದ 20 ಕೆಜಿ ಇಳಿಸಿಕೊಂಡರು. ನಂತರ ಜಿಮ್​ನಲ್ಲಿ ಸಿಕ್ಕಾಪಟ್ಟೆ ಕಸರತ್ತು ಮಾಡಲು ಆರಂಭಿಸಿದರು. ಕಟ್ಟುನಿಟ್ಟಿನ ಡಯೆಟ್​ ಮಾಡಿದ ಪರಿಣಾಮ ಉತ್ತಮ ಫಲಿತಾಂಶ ಸಿಕ್ಕಿದೆ.

More from Filmibeat

English summary
Choreographer Remo D'Souza’s Wife Lizelle D'Souza Lose A Huge 40 Kgs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X