ದಿಗ್ಗಜ ನೃತ್ಯ ಸಂಯೋಜಕಿ ಸರೋಜ್ ಖಾನ್ ಬಯೋಪಿಕ್!
ರಾಷ್ಟ್ರ ಪ್ರಶಸ್ತಿ ನೃತ್ಯ ಸಂಯೋಜಕ ಹಾಗು ನಿರ್ದೇಶಕ ರೆಮೋ ಡಿಸೋಜಾ ಅವರು ಸರೋಜ್ ಖಾನ್ ಬಯೋಪಿಕ್ ಮಾಡುವ ಕುರಿತು ಸುಳಿವು ನೀಡಿದ್ದಾರೆ.
''ನನ್ನ ಬಯೋಪಿಕ್ ಮಾಡಲು ಯಾರಾದರೂ ಚಿಂತಿಸಿದರೆ ಅದು ರೆಮೋ ಡಿಸೋಜಾ ಮಾತ್ರ ಆಗಿರಬೇಕು'' ಎಂದು ಸ್ವತಃ ಸರೋಜ್ ಖಾನ್ ಈ ಹಿಂದೆಯೊಮ್ಮೆ ಹೇಳಿದ್ದರು ಎಂದು ರೆಮೋ ಡಿಸೋಜಾ ಬಹಿರಂಗಪಡಿಸಿದ್ದಾರೆ.
ಈ ಕುರಿತು ಮಾಧ್ಯಮವೊಂದರಲ್ಲಿ ಸ್ಮರಿಸಿಕೊಂಡಿರುವ ರೆಮೋ ಡಿಸೋಜಾ '' ಒಂದು ವೇಳೆ ನನ್ನ ಬಯೋಪಿಕ್ ತಯಾರಿಸುವ ಸಾಧ್ಯತೆ ಇದ್ದರೆ ಅದು ನೀನೇ ಮಾಡಬೇಕು, ಏಕಂದ್ರೆ, ನೃತ್ಯದ ಬಗ್ಗೆ ಅದರ ಕಷ್ಟದ ಬಗ್ಗೆ ನಿನಗೆ ಚೆನ್ನಾಗಿ ತಿಳಿದಿದೆ'' ಎಂದು ಚರ್ಚಿಸಿದ್ದರಂತೆ.

ಸರೋಜ್ ಖಾನ್ ಅವರಿಂದ ತನ್ನ ಜೀವನಕ್ಕೆ ಬೇಕಾದ ಪಾಠ ಕಲಿತಿರುವೆ, ಇಂಡಸ್ಟ್ರಿಯಲ್ಲಿ ಹೇಗೆ ಇರಬೇಕು, ಯಾರ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಅವರಿಂದಲೇ ತಿಳಿದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ರೆಮೋ ಡಿಸೋಜಾ ಅವರ ಕಷ್ಟದ ದಿನಗಳನ್ನು ಸರೋಜ್ ಖಾನ್ ಅವರು ಬಹಳ ಹತ್ತಿರದಿಂದ ನೋಡಿದ್ದಾರೆ. ರೆಮೋ ಬೆಳೆದ ರೀತಿಯ ಬಗ್ಗೆ ಅವರಿಗೆ ಖುಷಿ ಇತ್ತು. ಖಳಂಕ್ ಚಿತ್ರ ಹಾಡೊಂದರಲ್ಲಿ ಕೊನೆಯದಾಗಿ ಸರೋಜ್ ಖಾನ್ ಜೊತೆ ರೆಮೋ ಕೆಲಸ ಮಾಡಿದ್ದರು.
ವರ್ಷದ ಸರೋಜ್ ಖಾನ್ ಇದೇ ವರ್ಷ ನಿಧನರಾದರು. ಜೂನ್ 17 ರಂದು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸರೋಜ್ ಖಾನ್ ಅವರು ಜುಲೈ 3 ರಂದು ಹೃದಯಾಘಾತದಿಂದ ನಿಧನರಾದರು.


Click it and Unblock the Notifications











