ಖ್ಯಾತ ನೃತ್ಯ ನಿರ್ದೇಶಕ ರೆಮೊ ಡಿಸೋಜಾಗೆ ಹೃದಯಾಘಾತ

ಖ್ಯಾತ ನೃತ್ಯ ನಿರ್ದೇಶಕ, ಸಿನಿಮಾ ನಿರ್ದೇಶಕ ರೆಮೊ ಡಿಸೋಜಾ ಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೆಮೊ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಅವರನ್ನು ಮುಂಬೈನ ಕೊಕಿಲಾಬೇನ್ ಆಸ್ಪತ್ರೆಯ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ರೆಮೊ ಆರೋಗ್ಯದ ಕುರಿತು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ, ಕೊಕಿಲಾಬೇನ್ ಆಸ್ಪತ್ರೆ ವೈದ್ಯರು, 'ಹೃದಯದಲ್ಲಿ ಬ್ಲಾಕೇಜ್ ಆಗಿತ್ತು, ವೈದ್ಯರು ಆಂಜಿಯೋಪ್ಲಾಸ್ಟಿ ಮಾಡಿದ್ದಾರೆ. ಅವರನ್ನು ಐಸಿಯು ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು 24 ಗಂಟೆ ಅತ್ಯಂತ ಮಹತ್ವದ್ದಾಗಿದ್ದು, ಅವರಿಗಾಗಿ ಪ್ರಾರ್ಥಿಸಿ' ಎಂದಿದ್ದಾರೆ.

Remo DSouza Suffers From Heart Attack Admitted To Hospital

ಭಾರತದ ಸೆಲೆಬ್ರಿಟಿ ನೃತ್ಯಗಾರ ಹಾಗೂ ನೃತ್ಯ ನಿರ್ದೇಶಕ ಆಗಿರುವ ರೆಮೊ ಡಿಸೋಜಾ, ಸ್ಟ್ರೀಟ್ ಡಾನ್ಸರ್, ಎಬಿಸಿಡಿ, ಎಬಿಸಿಡಿ 2, ದಿ ಫ್ಲೈಯಿಂಗ್ ಜಟ್, ರೇಸ್ 3 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಇದು ಮಾತ್ರವಲ್ಲದೆ, ಡಾನ್ಸ್‌ ರಿಯಾಲಿಟಿ ಶೋ ಗಳ ಜಡ್ಜ್ ಸಹ ಆಗಿರುವ ರೆಮೊ ಡಿಸೋಜಾ, ಡಾನ್ಸ್ ಇಂಡಿಯಾ ಡಾನ್ಸ್, ಝಲಕ್ ದಿಕ್‌ಲಾಜಾ, ಡಾನ್ಸ್‌ ಪ್ಲಸ್‌ ಡಾನ್ಸ್‌ ಶೋ ಗಳ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಭಾಜಿರಾವ್ ಮಸ್ತಾನಿ ಸಿನಿಮಾದ 'ದೀವಾನಿ ಮಸ್ತಾನಿ' ಹಾಡಿಗೆ ನೃತ್ಯ ನಿರ್ದೇಶಿಸಿದ್ದ ರೆಮೊ ಡಿಸೋಜಾ ಗೆ ಅತ್ಯುತ್ತಮ ಕೊರಿಯೋಗ್ರಾಫರ್ ರಾಷ್ಟ್ರೀಯ ಪ್ರಶಸ್ತಿ ಸಹ ದೊರೆತಿದೆ.

More from Filmibeat

English summary
Choreographer, Movie director Remo D'Souza had heart attack. He admitted in Kokilaben hospital in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X