twitter
    For Quick Alerts
    ALLOW NOTIFICATIONS  
    For Daily Alerts

    ಈ ಎರಡು ಭೀಕರ ಕಾಯಿಲೆಗಳಿಂದ ಬಳಲುತ್ತಿದ್ದರೇ ಸುಶಾಂತ್ ಸಿಂಗ್ ರಜಪೂತ್?

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಅವರು ಅನುಭವಿಸುತ್ತಿದ್ದ ಮಾನಸಿಕ ಖಿನ್ನತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಅದರ ಸುತ್ತಲೂ ಹುಟ್ಟಿಕೊಂಡಿರುವ ಅನುಮಾನಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Recommended Video

    ಅವತ್ತು ಶಿವಣ್ಣನ ಹೆಸರು ಹೇಳಿ ಎಲೆಕ್ಷನ್ ನಲ್ಲಿ ಗೆದ್ದಿದ್ದೆ | Filmibeat Kannada

    ಸುಶಾಂತ್ ಅವರದ್ದು ಆತ್ಮಹತ್ಯೆ ಎಂದು ಮೊದಲ ದಿನವೇ ತೀರ್ಮಾನಕ್ಕೆ ಬಂದ ಮುಂಬೈ ಪೊಲೀಸರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿರುವ ಜನರು, ಇದರ ಬಗ್ಗೆ ಸಿಬಿಐ ತನಿಖೆ ನಡೆಸಬೇಕಿದೆ. ಇದರಿಂದ ಮಾತ್ರವೇ ಸತ್ಯ ಹೊರಬೀಳುತ್ತದೆ ಎಂದು ಒತ್ತಾಯಿಸಿದ್ದಾರೆ. ಆದರೆ, ಸುಶಾಂತ್ ಅವರ ಸಾವಿಗೆ ಬಲವಾದ ಕಾರಣ ಅವರು ಅನುಭವಿಸುತ್ತಿದ್ದ ಆರೋಗ್ಯ ಸಮಸ್ಯೆಗಳು. ಸಾವಿಗೂ ಕೆಲವು ದಿನ ಮುನ್ನ ಅವರು ಅದಕ್ಕಾಗಿ ಚಿಕಿತ್ಸೆ ಕೂಡ ಪಡೆದಿದ್ದರು ಎಂದು ತನಿಖಾ ತಂಡದಲ್ಲಿರುವ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಮುಂದೆ ಓದಿ...

    ಎರಡು ಗಂಭೀರ ಸಮಸ್ಯೆ

    ಎರಡು ಗಂಭೀರ ಸಮಸ್ಯೆ

    ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವೃತ್ತಿಪರ ಸಂಚು ನಡೆದಿದೆ ಎನ್ನುವುದಕ್ಕೆ ಇದುವರೆಗೂ ಯಾವುದೇ ಬಲವಾದ ಪುರಾವೆ ಸಿಕ್ಕಿಲ್ಲ. ಇಡಿ ಪ್ರಕರಣ ಆತ್ಮಹತ್ಯೆಗೆ ಸಂಬಂಧಿಸಿದೆ. ಸುಶಾಂತ್ ಆತ್ಮಹತ್ಯೆಯಿಂದಲೇ ಮೃತಪಟ್ಟಿದ್ದಾರೆ ಎಂಬ ಅಂತಿಮ ತೀರ್ಮಾನಕ್ಕೆ ಬಹುತೇಕ ಬಂದಿದ್ದೇವೆ. ಸುಶಾಂತ್ ಸಿಂಗ್ ಪರೋನಿಯಾ ಮತ್ತು ಬೈಪೊಲಾರ್ ಡಿಸಾರ್ಡರ್ ಎಂಬ ಎರಡು ಗಂಭೀರ ಸಮಸ್ಯೆಗಳ ಅಪಾಯಕಾರಿ ಹಂತದಲ್ಲಿದ್ದರು. ಲಾಕ್ ಡೌನ್‌ಗೂ ಮುನ್ನ ಅವರು ಈ ಕಾಯಿಲೆಗಳ ಚಿಕಿತ್ಸೆಗಾಗಿ ಹಿಂದುಜಾ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಿದ್ದಾರೆ.

    ತಾಯಿಗೂ ಖಿನ್ನತೆ ಇತ್ತು

    ತಾಯಿಗೂ ಖಿನ್ನತೆ ಇತ್ತು

    ಸುಶಾಂತ್ 16ನೇ ವಯಸ್ಸಿನಲ್ಲಿರುವಾಗಲೇ ತಾಯಿಯನ್ನು ಕಳೆದುಕೊಂಡಿದ್ದರು. ಅವರು ಕೂಡ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನುವುದು ತನಿಖೆಯಿಂದ ಗೊತ್ತಾಗಿದೆ. ಸುಶಾಂತ್‌ಗೆ ನಾಲ್ವರು ಅಕ್ಕಂದಿರು. ಅವರೆಲ್ಲರಿಗೂ ಮದುವೆಯಾಗಿತ್ತು. ತಂದೆ ಬಿಹಾರದಲ್ಲಿಯೇ ವಾಸಿಸುತ್ತಿದ್ದರು. ಬಾಲಿವುಡ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರೂ ಬಿಡುವಿನ ಅವಧಿಯಲ್ಲಿ ಸುಶಾಂತ್ ಅವರಿಗೆ ಒಂಟಿತನ ಕಾಡುತ್ತಿತ್ತು. ಇದು ಕೆಲವು ಸಾಕ್ಷಿಗಳ ಹೇಳಿಕೆಯಿಂದ ದೃಢಪಟ್ಟಿದೆ. ಆದರೆ ಸುಶಾಂತ್ ಅವರಿಗೆ ಯಾವುದೇ ಹಣಕಾಸು ಸಮಸ್ಯೆ ಉಂಟಾಗಿರಲಿಲ್ಲ.

    ಸುಶಾಂತ್ ಸಿಂಗ್ ಸಾವಿಗೆ ಸಲ್ಮಾನ್ ಖಾನ್ ಪರೋಕ್ಷ ಕಾರಣ?: ಪ್ರಕರಣಕ್ಕೆ ಟ್ವಿಸ್ಟ್ಸುಶಾಂತ್ ಸಿಂಗ್ ಸಾವಿಗೆ ಸಲ್ಮಾನ್ ಖಾನ್ ಪರೋಕ್ಷ ಕಾರಣ?: ಪ್ರಕರಣಕ್ಕೆ ಟ್ವಿಸ್ಟ್

    ತನ್ನನ್ನು ಕೊಲೆ ಮಾಡುತ್ತಾರೆ ಎನಿಸುತ್ತಿತ್ತು

    ತನ್ನನ್ನು ಕೊಲೆ ಮಾಡುತ್ತಾರೆ ಎನಿಸುತ್ತಿತ್ತು

    ಸುಶಾಂತ್ ಅವರು ಪರಾನೊಯಾದಿಂದ ಬಳಲುತ್ತಿದ್ದರು. ಈ ಸಮಸ್ಯೆ ಬಂದರೆ ಮನುಷ್ಯ ತನ್ನ ಸುತ್ತಲು ಇರುವವರೆಲ್ಲರೂ ತನ್ನನ್ನು ದ್ವೇಷಿಸುತ್ತಾರೆ, ತನ್ನ ವಿರುದ್ಧ ಯಾರೋ ಪಿತೂರಿ ಮಾಡುತ್ತಿದ್ದಾರೆ ಎಂದು ಭಾವಿಸುತ್ತಾನೆ. ತನ್ನನ್ನು ಯಾರೋ ಕೊಲೆ ಮಾಡುತ್ತಾರೆ ಎಂದು ಸುಶಾಂತ್ ಅವರಿಗೂ ಕೆಲವು ಬಾರಿ ಅನಿಸಿತ್ತು ಎಂದು ಅಧಿಕಾರಿ ಹೇಳಿದ್ದಾರೆ ಎನ್ನಲಾಗಿದೆ

    ಪದೇ ಪದೇ ಬದಲಾಗುತ್ತದೆ ಮೂಡ್

    ಪದೇ ಪದೇ ಬದಲಾಗುತ್ತದೆ ಮೂಡ್

    ಬೈಪೊಲಾರ್ ಡಿಸಾರ್ಡರ್‌ನಲ್ಲಿ ವ್ಯಕ್ತಿಯ ಮೂಡ್ ಪದೇ ಪದೇ ಬದಲಾಗುತ್ತಿರುತ್ತದೆ. ಎರಡು ವಿರುದ್ಧವಾದ ಸ್ಥಿತಿಗೆ ಮೂಡ್ ಬದಲಾಗಬಹುದು. ಇದ್ದಕ್ಕಿದ್ದಂತೆ ಒತ್ತಡದ ಸ್ಥಿತಿಗೆ ಹೋದರೆ, ಮತ್ತೊಮ್ಮೆ ಅವರ ಆತ್ಮವಿಶ್ವಾಸ ವೃದ್ಧಿಯಾಗಿರುತ್ತದೆ. ಇದರ ಬಳಿಕ ಹಠಾತ್ತಾಗಿ ಮೌನಿಯಾಗುತ್ತಾರೆ ಅಥವಾ ಸೋತು ಹೋದಂತೆ ಬಸವಳಿಯುತ್ತಾರೆ. ಈ ಕಾಯಿಲೆಯುಳ್ಳವರು ಅನೇಕ ಬಾರಿ ತಮ್ಮ ವರ್ತನೆಯನ್ನು ನಿಯಂತ್ರಿಸಿಕೊಳ್ಳಲು ಬಯಸಿದರೂ ಅದು ಅವರಿಗೆ ಸಾಧ್ಯವಾಗುವುದಿಲ್ಲ.

    ಸುಶಾಂತ್ ಸಿಂಗ್ ಸಾವಿನ ಹಿಂದೆ ದಾವೂದ್ ಗ್ಯಾಂಗ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ರಾ ಅಧಿಕಾರಿಸುಶಾಂತ್ ಸಿಂಗ್ ಸಾವಿನ ಹಿಂದೆ ದಾವೂದ್ ಗ್ಯಾಂಗ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ರಾ ಅಧಿಕಾರಿ

    ಸಿವಿಐ ತನಿಖೆ ಏಕಿಲ್ಲ?

    ಸಿವಿಐ ತನಿಖೆ ಏಕಿಲ್ಲ?

    ಆದರೆ ಸುಶಾಂತ್ ಒಳಗಾಗಿದ್ದ ಕಾಯಿಲೆಗಳ ಬಗ್ಗೆ ಅವರ ಕುಟುಂಬದವರಿಗೆ ತಿಳಿದಿತ್ತೇ? ಬಾಲಿವುಡ್‌ನಲ್ಲಿರುವ ಅವರ ಯಾವುದಾದರೂ ಸ್ನೇಹಿತರಿಗೆ ಅವರ ಮಾನಸಿಕ ಆರೋಗ್ಯದ ಕುರಿತು ಅರಿವಿತ್ತೇ? ಗೊತ್ತಿದ್ದರೆ ಅವರು ಏಕೆ ಈ ಬಗ್ಗೆ ಇದುವರೆಗೂ ಬಹಿರಂಗವಾಗಿ ಮಾತನಾಡಿಲ್ಲ? ಇಷ್ಟೆಲ್ಲ ಒತ್ತಾಯ ಕೇಳಿಬಂದರೂ ಸಿಬಿಐ ತನಿಖೆಗೆ ಏಕೆ ಒಪ್ಪಿಸುತ್ತಿಲ್ಲ? ಮುಂತಾದ ಪ್ರಶ್ನೆಗಳಿವೆ.

    ವರದಿ ಸುಳ್ಳೆಂದ ನಿರ್ದೇಶಕ ಅಪೂರ್ವ

    ವರದಿ ಸುಳ್ಳೆಂದ ನಿರ್ದೇಶಕ ಅಪೂರ್ವ

    ಸುಶಾಂತ್ ಅವರಿಗೆ ಬೈಪೊಲಾರ್ ಡಿಸಾರ್ಡರ್ ಇತ್ತು ಎಂಬ ವರದಿಗಳನ್ನು ಸಿನಿಮಾ ನಿರ್ದೇಶಕ ಅಪೂರ್ವ ಅಸ್ರಾಣಿ ತಳ್ಳಿಹಾಕಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಸುಶಾಂತ್ ಕುರಿತಾದ ಅಭಿಪ್ರಾಯವನ್ನು ಬದಲಿಸುವ ಉದ್ದೇಶಪೂರ್ವಕ ಪ್ರಯತ್ನ. ಸುಶಾಂತ್ ಅವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಅವರಲ್ಲಿ ವಿಚಿತ್ರ ಅಲೋಚನೆಗಳು ಬರುತ್ತಿದ್ದವು ಎಂಬ ವರದಿಗಳನ್ನು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಮನೋವೈದ್ಯ ಕೇರ್ಸಿ ಚಾವ್ಡಾ ಅಲ್ಲಗಳೆದಿದ್ದರು. ಈಗ ಹೊಸ ಕಥೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅಪೂರ್ವ ಟೀಕಿಸಿದ್ದಾರೆ.

    English summary
    Reports says claiming Mumbai police statement that, Sushant Singh Rajput was suffering from Paronoia and Bipolar disorder.
    Wednesday, July 15, 2020, 12:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X