Republic Day 2024: ಭಾರತೀಯ ಸೇನೆ ಸೇರಲು ಬಯಸಿದ್ದ ಈ ಸ್ಟಾರ್‌ಗಳು ಸೇರಿದ್ದು ಬಾಲಿವುಡ್ ಅಂಗಳ!
ಬದುಕು ಎಂದರೇ ಹೀಗೆ ಹಲವು ಬಾರಿ ನಾವಂದುಕೊಂಡಂತೆ, ನಾವು ಬಯಸಿದಂತೆ ಜೀವನ ಮಾಡಲು ಸಾಧ್ಯವಾಗುದಿಲ್ಲ. ನಾವು ಕಂಡ ಕನಸುಗಳು ಸಾಕಾರಗೊಳ್ಳುವುದಿಲ್ಲ. ನಾವೊಂದು ಬಯಸಿದರೇ ಅದೃಷ್ಟ ಮತ್ತೆಲ್ಲಿಗೋ ಸೇರಿಸಿಬಿಡುತ್ತದೆ. ಹೀಗೆ ನಟನಾ ರಂಗಕ್ಕೆ ಬಂದವರು ಅನೇಕರಿದ್ದಾರೆ. ಬಹುತೇಕ ನಟ ನಟಿಯರು ಹೇಳುವುದು ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದೆ ಎಂಬುದನ್ನೇ.
ಹೀಗೆ ಎಲ್ಲಿಯೇ ಸೇರಲು ಬಯಸಿದವರು ಮತ್ತೇಲಿಗೋ ಸೇರಿರುತ್ತಾರೆ. ಬಾಲಿವುಡ್ ಅಂಗಳದಲ್ಲಿಯೂ ಇಂತಹ ಅದೃಷ್ಟದಿಂದ ಬಮದು ಇಮದು ಸ್ಟಾರ್ ನಟರಾಗಿದ್ದಾರೆ. ಅವರಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್, ಕಿಲಾಡಿ ಅಕ್ಷಯ್ ಕುಮಾರ್, ನಟ ಸೋನು ಸೂದ್ ಕೂಡ ಸೇರಿದ್ದಾರೆ.

ಸೇನೆ ಸೇರಲು ಬಯಸಿ ಬಾಲಿವುಡ್ ಅಂಗಳಕ್ಕೆ ಬಿದ್ದ ತಾರೆಯರು!
ಈಗಾಗಲೇ ದೇಶದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಗಣರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇದರ ಜೊತೆಗೆ ಬಾಲಿವುಡ್‌ನಲ್ಲಿ ಬಂದ ದೇಶಭಕ್ತಿ ಸಿನಿಮಾಗಳು, ಗೀತೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಸೇರಿ ದೇಶದ ಸೇವೆ ಮಾಡಲು ಬಯಸಿದ್ದ ನಟರ ಪಟ್ಟಿ ಇಲ್ಲಿದೆ.
ಅಕ್ಷಯ್ ಕುಮಾರ್:
ಬಾಲಿವುಡ್‌ನ ಕಿಲಾಡಿ ಅಂದರೆ ಅಕ್ಷಯ್ ಕುಮಾ. ಕಳೆದ ಹಲವು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಅವರ ತಂದೆ ಭಾರತೀಯ ಸೇನೆಯಲ್ಲಿದ್ದರು ಎಂಬುದು ಈಗಾಗಲೇ ಹಲವು ಜನರಿಗೆ ತಿಳಿದಿರುತ್ತದೆ. ಇದೆ ಕಾರಣಕ್ಕೆ ಅವರು ಕೂಡ ಭಾರತೀಯ ಸೈನ್ಯ ಸೇರುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಇದು ಸಾಧ್ಯವಾಗಲಿಲ್ಲ. ಸದ್ಯ ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರ 'ಬಡೆ ಮಿಯಾನ್ ಛೋಟೆ ಮಿಯಾನ್' ನಲ್ಲಿ ಟೈಗರ್ ಶ್ರಾಫ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಶಾರುಖ್ ಖಾನ್:
ಈ ಪಟ್ಟಿಯಲ್ಲಿ ಎರಡನೇ ಹೆಸರು ಬಿ-ಟೌನ್‌ನ ಕಿಂಗ್ ಆಫ್ ರೋಮ್ಯಾನ್ಸ್ ಶಾರುಖ್ ಖಾನ್. ತಾನು ಭಾರತೀಯ ಸೇನೆಗೆ ಸೇರಲು ಬಯಸುತ್ತಿದ್ದೆ ಎಂದು ಶಾರುಖ್ ಖಾನ್ ಸಂದರ್ಶನಗಳಲ್ಲಿ ಹಲವು ಬಾರಿ ಬಹಿರಂಗಪಡಿಸಿದ್ದಾರೆ. ಆದರೆ ತಾಯಿಯ ಕಾರಣದಿಂದ ಅವರು ಸೇನೆ ಸೇರಲು ಸಾಧ್ಯವಾಗಲಿಲ್ಲ. ಇನ್ನು, ನಟ ಶಾರುಖ್ ಖಾನ್ ಕೊನೆಯದಾಗಿ 'ಡಿಂಕಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಸೋನು ಸೂದ್
ಕೊರೊನಾ ಕಾಲದಲ್ಲಿ ಬಡವರ ಆಪತ್ಭಾಂದವ ಎಂದು ಹೆಸರು ಪಡೆದ ಬಹುಭಾಷಾ ನಟ ಸೋನು ಸೂದ್ ಅವರ ಹೆಸರೂ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಸೋನು ಸೂದ್ ಈ ಹಿಂದೆ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ನಾನು ಭಾರತೀಯ ಸೇನೆಗೆ ಸೇರಲು ಬಯಸಿದ್ದೆ. ಆದರೆ ನಾನು ನನ್ನ ಎಂಜಿನಿಯರಿಂಗ್ ಅಧ್ಯಯನವನ್ನು ಮುಂದುವರೆಸಿದೆ. ಆದಾದ ನಂತರ ಚಲನಚಿತ್ರಗಳ ಕಡೆಗೆ ಬಂದಿದ್ದೇನೆ ಎಂದು ಸೋನು ಸೂದ್ ಹೇಳಿದ್ದರು.
ರಣವಿಜಯ್ ಸಿಂಗ್
ನಟ ಮತ್ತು ಟಿವಿ ರಿಯಾಲಿಟಿ ಶೋ ಎಂಟಿವಿ ರೋಡೀಸ್ ಖ್ಯಾತಿಯ ರಣವಿಜಯ್ ಸಿಂಗ್ ಅವರ ಹೆಸರೂ ಈ ಪಟ್ಟಿಯಲ್ಲಿದೆ. ರಣವಿಜಯ್ ಕೂಡ ಸೇನೆ ಸೇರಲು ಬಯಸಿದ್ದರು. ಆದರೆ ಎಂಟಿವಿ ರೋಡೀಸ್‌ನಲ್ಲಿ ಆಯ್ಕೆಯಾದಾಗ ಅವರ ಮನಸ್ಸು ಬದಲಾಗಿ ಗ್ಲಾಮರ್ ಜಗತ್ತಿಗೆ ಕಾಲಿಟ್ಟರು ಎಂಬುದನ್ನು ಅವರೇ ಹೇಳಿದ್ದಾರೆ. ಹೀಗೆ ಹಲವು ನಟನ ನಟಿಯರು ತಾವು ಬೇರೆ ಕೆಲಸಗಳಲ್ಲಿ ಆಸಕ್ತಿ ಹೊಂದಿದ್ದರು ಕೊನೆಗೆ ಈ ಮನರಂಜನಾ ಉದ್ಯಮಕ್ಕೆ ಕಾಲಿಟ್ಟಿದ್ದಾರೆ ಎಂಬುದನ್ನು ಹೇಳಿಕೊಂಡಿದ್ದಾರೆ.


Click it and Unblock the Notifications










