For Quick Alerts
  ALLOW NOTIFICATIONS  
  For Daily Alerts

  ಮದುವೆ ಸಂಭ್ರಮದಲ್ಲಿ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ನಟಿ, ದಿವಂಗತ ನಟ ಸುಶಾಂತ್ ಸಿಂಗ್ ಚಕ್ರವರ್ತಿ ಪ್ರೇಯಸಿ ರಿಯಾ ಚಕ್ರವರ್ತಿ ವರ್ಷಗಳ ಬಳಿಕ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಸುಶಾಂತ್ ಸಿಂಗ್‌ನನ್ನು ಕಳೆದುಕೊಂಡ ಬಳಿಕ ರಿಯಾ ಜೀವನದಲ್ಲಿ ಸಂತೋಷ ಮಾಯವಾಗಿತ್ತು. ಇದೀಗ ಮತ್ತೆ ರಿಯಾ ಸಹಜ ಸ್ಥಿತಿಗೆ ಬರುತ್ತಿದ್ದಾರೆ. ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

  ಇದೀಗ ರಿಯಾ ಮದುವೆ ಸಂಭ್ರಮದಲ್ಲಿದ್ದಾರೆ. ಅಂದ ಹಾಗೆ ರಿಯಾಗೆ ಮದುವೆನಾ ಅಂತ ಯೋಚಿಸಬೇಡಿ, ರಿಯಾ ತನ್ನ ಗೆಳತಿಯ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ರೂಮಿ ಜಾಫ್ರಿ ಪುತ್ರಿ ಆಲ್ಫಿಯಾ ಜಾಫ್ರಿ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

  ರೂಮಿ ಜಾಫ್ರಿ ಮನೆಯಲ್ಲಿ ಭಾನುವಾರ ಮೆಹಂದಿ ಸಮಾರಂಭ ನೆರವೇರಿದೆ. ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ರೂಮಿ ಜಾಫ್ರಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. ಸಮಾರಂಭದಲ್ಲಿ ರಿಯಾ ಮತ್ತು ನಟಿ ಕ್ರಿಸ್ಟಲ್ ಡಿಸೋಜಾ ಭಾಗಿಯಾಗಿ ಮತ್ತಷ್ಟು ಸಂಭ್ರಮ ಹೆಚ್ಚಿಸಿದರು. ರಿಯಾ ಚಕ್ರವರ್ತಿ ಹಳದಿ ಬಣ್ಣದ ಉಡುಪಿನಲ್ಲಿ ಕಂಗೊಳಿಸುತ್ತಿದ್ದರು. ಮದುಮಗಳು ಆಲ್ಫಿಯಾ ಮತ್ತು ಗೆಳತಿ ಕ್ರಿಸ್ಟಲ್ ಸಹ ಹಳದಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದಿದ್ದರು.

  ಮೂವರು ಕ್ಯಾಮರಾ ಕಣ್ಣಿಗೆ ಸೆರೆಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟಿ ರಿಯಾ ಚಕ್ರವರ್ತಿ ವರ್ಷಗಳ ಬಳಿಕ ಸಂಭ್ರಮದಲ್ಲಿ ಭಾಗಿಯಾಗಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಮದುವೆ ಶಾಸ್ತ್ರಗಳ ಸಂಭ್ರಮದಲ್ಲಿ ರಿಯಾ ಮತ್ತು ಗೆಳತಿಯರು ಮಸ್ತ್ ಮಜಾ ಮಾಡಿದ್ದಾರೆ.

  ರೂಮಿ ಕುಟುಂಬದ ಜೊತೆ ರಿಯಾ ಮತ್ತು ಗೆಳತಿಯರು ಸಹ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಹಿಂದಿ ಹಾಡುಗಳಿಗೆ ಸಖತ್ ಹೆಜ್ಜೆ ಹಾಕಿರುವ ರಿಯಾ ಮತ್ತು ಗೆಳತಿಯರ ವಿಡಿಯೋ ತುಣುಕುಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಳೆದ ತಿಂಗಳು ಆಲ್ಫಿಯಾ ಬ್ಯಾಚುಲರ್ ಪಾರ್ಟಿಯ ಫೋಟೋವನ್ನು ಶೇರ್ ಮಾಡಿದ್ದರು. ಜೊತೆಗೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು.

  ನಟಿ ರಿಯಾ ಚಕ್ರವರ್ತಿ ಸದ್ಯ ನಿರ್ದೇಶಕ ರೂಮಿ ಜಾಫ್ರಿ ನಿರ್ದೇಶನದ ಚಹ್ರೆ ಸಿನಿಮಾದಲ್ಲಿ ನಟಿಸಿದ್ದಾರೆ. ರೂಮಿ ಜಾಫ್ರಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಹಾಗೂ ಅವರ ಮಗಳು ಆಲ್ಫಿಯಾ ರಿಯಾಗೆ ಗೆಳತಿ. ಹಾಗಾಗಿ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಚಹ್ರೆ ಸಿನಿಮಾದಲ್ಲಿ ನಟ ಅಮಿತಾಬ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ರಿಯಾ ಮತ್ತು ಕ್ರಿಸ್ಟಲ್ ಡಿಸೋಜ ಕಾಣಿಸಿಕೊಂಡಿದ್ದಾರೆ.

  Rhea Chakraborty and Krystle D’Souza attended Rumi Jaffery’s daughter Alfia Jaffery’s mehendi ceremony

  ಚಹ್ರೆ ಸುಶಾಂತ್ ಸಿಂಗ್ ನಿಧನ ಹೊಂದುವ ಮೊದಲೇ ರಿಯಾ ನಟಿಸಿರುವ ಸಿನಿಮಾ. ಈ ಸಿನಿಮಾ ಬಳಿಕ ರಿಯಾ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಸದ್ಯ ಎಲ್ಲಾ ಕೆಲಸಗಳನ್ನು ಚಹ್ರೆ ಬಿಡುಗಡೆಗೆ ಸಿದ್ಧಾವಾಗಿದೆ. ಇತ್ತೀಚಿಗಷ್ಟೆ ಟೀಸರ್ ಆಗಿದೆ. ಆದರೆ ಟೀಸರ್‌ನಲ್ಲಿ ರಿಯಾ ದರ್ಶನವಾಗಿಲ್ಲ. ಹಾಗಾಗಿ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

  ನಟಿ ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್ ನಿಧನದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಸುಶಾಂತ್ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದ ರಿಯಾ ಗೆಳೆಯನ ಸಾವಿಗೂ ಎರಡು ದಿನಗಳ ಮುಂದೆ ಮನೆಯಿಂದ ಹೊರನಡೆದಿದ್ದರು. ಸುಶಾಂತ್ ಸಾವಿಗೆ ಕಾರಣರಾದವರಲ್ಲಿ ರಿಯಾ ಕೂಡ ಒಬ್ಬರು ಎನ್ನುವ ಆರೋಪವಿದೆ. ಆದರೆ ಸತ್ಯಾಸತ್ಯತೆ ತನಿಖೆ ಬಳಿಕವೇ ಬಹಿರಂಗವಾಗಲಿದೆ.

  ಇನ್ನು ಡ್ರಗ್ಸ್ ಪ್ರಕರಣ ತನಿಖೆ ವೇಳೆ ರಿಯಾ ಚಕ್ರವರ್ತಿ ಸೇರಿದಂತೆ ಅನೇಕರು ಜೈಲು ಸೇರಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ರಿಯಾ ಸಹಜ ಜೀವನಕ್ಕೆ ಮರಳಿದ್ದಾರೆ. ಸದ್ಯ ಸುಶಾಂತ್ ಸಾವಿನ ಪ್ರಕರಣ ಸಿಬಿಐ ಅಂಗಳದಲ್ಲಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಸಿಬಿಐ ಸಲ್ಲಿಸುವ ಅಂತಿಮ ವರದಿಗೆ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ.

  English summary
  Sushanth Singh Girl Friend Rhea Chakraborty and Krystle D’Souza attended Rumi Jaffery’s daughter Alfia Jaffery’s mehendi ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X