ರಿಯಾ ಚಕ್ರವರ್ತಿ ಜಾಮೀನು ಅರ್ಜಿ ವಿಚಾರಣೆಗೆ ಮಳೆರಾಯ ಅಡ್ಡಿ

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಿಯಾ ಚಕ್ರವರ್ತಿಯ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಬೇಕಿತ್ತು. ಮುಂಬೈನ ನಗರದಲ್ಲಿ ತೀವ್ರ ಮಳೆ ಬರುತ್ತಿರುವ ಕಾರಣ ಇಂದು ನಡೆಯಬೇಕಿದ್ದ ನ್ಯಾಯಾಲಯದ ಕಲಾಪಗಳನ್ನು ಹೈ ಕೋರ್ಟ್ ನಾಳೆಗೆ ಮುಂದೂಡಿದೆ.

ಜಾಮೀನಿನ ನಿರೀಕ್ಷೆಯಲ್ಲಿರುವ ರಿಯಾ ಚಕ್ರವರ್ತಿ ಮತ್ತು ಸಹೋದರ ಶೌವಿಕ್ ಚಕ್ರವರ್ತಿಗೆ ಇದು ನಿರಾಸೆ ತಂದಿದೆ. ಮಂಗಳವಾರ ಎನ್‌ಡಿಪಿಎಸ್ ಕೋರ್ಟ್‌ನಲ್ಲಿ ರಿಯಾ ಚಕ್ರವರ್ತಿ ಮತ್ತು ಇತರೆ ಆರೋಪಿಗಳಿಗೆ ಹದಿನಾಲ್ಕು ದಿನ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಆದೇಶವಾಗಿತ್ತು.

ಬಾಂಬೆ ಹೈ ಕೋರ್ಟ್‌ನಲ್ಲಿ ಇಂದು ಜಾಮೀನು ಅರ್ಜಿ ವಿಚಾರಣೆಗೆ ದಿನಾಂಕ ಸಹ ನಿಗದಿಯಾಗಿತ್ತು. ಬಹುಶಃ ಬೇಲ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರಿಯಾ ಚಕ್ರವರ್ತಿ ನಿರಾಸೆಯಾಗಿದೆ.

Rhea Chakraborty bail hearing pushed to tomorrow due to heavy rains

ಮತ್ತೊಂದೆಡೆ ಮುಂಬೈ ಮಹಾನಗರ ಪಾಲಿಕೆ ವಿರುದ್ಧ ಕಂಗನಾ ರಣಾವತ್ ದಾಖಲಿಸಿರುವ ಅರ್ಜಿ ಸಹ ಇಂದು ವಿಚಾರಣೆಗೆ ಬರಬೇಕಿತ್ತು. ಈ ಅರ್ಜಿಯೂ ನಾಳೆಗೆ ಮುಂದೂಡಿಕೆಯಾಗಿದೆ ಎಂದು ತಿಳಿದು ಬಂದಿದೆ.

Recommended Video

ಮಗಳಿಗೆ ಮುದ್ದೆ, ಬಸ್ಸಾರು, ಸಪ್ಪಿನ ಪಲ್ಯ ತಿನ್ನಿಸಿದ Shwetha Srivatsav | Filmibeat Kannada

More from Filmibeat

English summary
Rhea Chakraborty's bail hearing has now been pushed to tomorrow due to heavy rains in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X