ತಾಳ್ಮೆ ಕಳೆದುಕೊಂಡ ರಿಯಾ ಚಕ್ರವರ್ತಿ: ಕಾರಿನ ಗ್ಲಾಸ್ ಗೆ ಗುದ್ದಿ ಮಾಧ್ಯಮದ ವಿರುದ್ಧ ಆಕ್ರೋಶ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯನ್ನು ಮುಂದುವರೆಸಿದೆ. ಈಗಾಗಲೇ ಸುಶಾಂತ್ ಸಿಂಗ್ ಮನೆಯ ಸಿಬ್ಬಂದಿ ಮತ್ತು ಸ್ನೇಹಿತರನ್ನು ವಿಚಾರಣೆ ಮಾಡಿರುವ ಸಿಬಿಐ, ಇಂದು (ಆಗಸ್ಟ್ 28) ರಿಯಾ ಚಕ್ರವರ್ತಿಯನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಈ ಸಂಬಂಧ ರಿಯಾ ಇಂದು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
Recommended Video
6 ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ರಿಯಾ ಮುಂಬೈನ ಡಿ ಆರ್ ಡಿ ಒ ಅತಿಥಿಗೃಹಕ್ಕೆ ವಿಚಾರಣೆಗೆ ತೆರಳಿದ್ದರು. ಇದೇ ಮೊದಲ ಬಾರಿಗೆ ರಿಯಾ ಸಿಬಿಐ ಅಧಿಕಾರಿಗಳ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಡಿ ಆರ್ ಡಿ ಒ ಅತಿಥಿಗೃಹಕ್ಕೆ ಆಗಮಿಸುತ್ತಿದ್ದಂತೆ ಮಾಧ್ಯಮದವರ ವಿರುದ್ಧ ರಿಯಾ ಫುಲ್ ಗರಂ ಆಗಿದ್ದಾರೆ. ಮುಂದೆ ಓದಿ..

ಕಾರಿನ ಗ್ಲಾಸ್ ಗೆ ಗುದ್ದಿ ಕೋಪ ಪ್ರದರ್ಶಿಸಿದ ರಿಯಾ
ಡಿ ಆರ್ ಡಿ ಒ ಅತಿಥಿಗೃಹಕ್ಕೆ ರಿಯಾ ಕಾರಿನಲ್ಲಿ ಬರುತ್ತಿದ್ದಂತೆ ಮಾಧ್ಯಮದವರು, ಪ್ರತಿಕ್ರಿಯೆ ಕೇಳಲು ಮುಂದಾದರು. ಮಾಧ್ಯಮದವರನ್ನು ನೋಡುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ರಿಯಾ, ಕೋಪಗೊಂಡು ಮುಂಗೈನಿಂದ ಕಾರಿನ ಗ್ಲಾಸ್ ಗೆ ಗುದ್ದಿದ್ದಾರೆ. ರಿಯಾ ಸಿಟ್ಟಿನಿಂದ ಕಾರಿನ ಗ್ಲಾಸ್ ಗೆ ಗುದ್ದುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಡಿ, ಸಿಬಿಐ, ಮಾದಕ ವಸ್ತು ನಿಯಂತ್ರಣ ಇಲಾಖೆಯಿಂದ ವಿಚಾರಣೆ
ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್, ರಿಯಾ ಚಕ್ರವರ್ತಿ ವಿರುದ್ಧ ಆತ್ಮಹತ್ಯೆ ಪ್ರಚೋದನೆ, ಕೋಟ್ಯಂತರ ರೂಪಾಯಿ ಅಕ್ರಮ ವರ್ಗಾವಣೆ, ಮಾನಸಿಕ ಹಿಂಸೆ ನೀಡಿದ ಆರೋಪ ಮಾಡಿದ್ದಾರೆ. ಈ ಸಂಬಂಧ ರಿಯಾ ಚಕ್ರವರ್ತಿಯನ್ನು ಇಡಿ ಅಧಿಕಾರಿಗಳು, ಸಿಬಿಐ ಮತ್ತು ಮಾದಕ ವಸ್ತು ನಿಯಂತ್ರಣ ಇಲಾಖೆ ವಿಚಾರಣೆ ನಡೆಸುತ್ತಿದೆ.

9 ಗಂಟೆ ವಿಚಾರಣೆ ಮಾಡಿದ ಸಿಬಿಐ
ಇಂದು ವಿಚಾರಣೆಗೆ ಹಾಜರಾಗಿದ್ದ ರಿಯಾ ಚಕ್ರವರ್ತಿಯನ್ನು ಸಿಬಿಐ ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮೊದಲು ಮಾಹಿತಿ ನೀಡಿದ್ದು ಯಾರು? ರಿಯಾ ಆಗ ಎಲ್ಲಿದ್ದರು, ಸುಶಾಂತ್ ದೇಹವನ್ನು ನೋಡಿದ್ದು ಎಲ್ಲಿ? ಸುಶಾಂತ್ ಮನೆಯಿಂದ ಹೊರ ಬಂದಿದ್ದೇಕೆ? ಹೀಗೆ ಸಿಬಿಐ 10 ಪ್ರಶ್ನೆಗಳನ್ನು ರಿಯಾಗೆ ಕೇಳಿದೆ ಎನ್ನಲಾಗಿದೆ.

ಮಾಧ್ಯಮಗಳಿಗೆ ಸಂದರ್ಶನ ನೀಡಿದ ರಿಯಾ
ಸುಶಾಂತ್ ಸಾವಿನ ಬಳಿಕ ರಿಯಾ ಮೊದಲ ಬಾರಿಗೆ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಸುಶಾಂತ್ ಸಾವಿನ ಬಗ್ಗೆ, ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಹಾಗೂ ಸುಶಾಂತ್ ಕುಟುಂಬದ ಬಗ್ಗೆ ರಿಯಾ ಮಾತನಾಡಿದ್ದಾರೆ.


Click it and Unblock the Notifications











