ಪ್ರೀತಿಯಲ್ಲಿ ನಂಬಿಕೆ ಬರುವ ಹಾಗೆ ಮಾಡಿದ್ದೇ ನೀನು: ಸುಶಾಂತ್ ಬಗ್ಗೆ ಪ್ರೇಯಸಿ ರಿಯಾ ಭಾವನಾತ್ಮಕ ಮಾತು
ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಒಂದು ತಿಂಗಳಾಗಿದೆ. ಜೂನ್ 14ರಂದು ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದರು. ಸುಶಾಂತ್ ಸಾವು ಇಡೀ ಬಾಲಿವುಡ್ ಅನ್ನೆ ಬೆಚ್ಚಿಬೇಳಿಸಿದೆ. ಸುಶಾಂತ್ ಆತ್ಮಹತ್ಯೆಗೆ ಕಾರಣ ಏನಿರಬಹುದು ಎಂದು ಪೊಲೀಸರು ಹುಡುಕಾಟ ನಡೆಯುತ್ತಿದ್ದಾರೆ. ಈಗಾಗಲೆ ಬಾಲಿವುಡ್ ನ ಸಾಕಷ್ಟು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
Recommended Video
ಸುಶಾಂತ್ ಸಿಂಗ್ ಪ್ರೇಯಸಿ ಎಂದು ಹೇಳಲಾಗುತ್ತಿರುವ ನಟಿ ರಿಯಾ ಚಕ್ರವರ್ತಿ ಮೊದಲ ಬಾರಿಗೆ ಸುಶಾಂತ್ ಬಗ್ಗೆ ಮೌನ ಮುರಿದಿದ್ದಾರೆ. ಇದುವರೆಗೂ ಎಲ್ಲಿಯೂ ಮಾತನಾಡದ ರಿಯಾ ಇಂದು ಸಾಮಾಜಿಕ ಜಾಲತಾಣದಲ್ಲಿ ಪ್ರಿಯತಮನ ಬಗ್ಗೆ ದೀರ್ಘವಾದ ಪೋಸ್ಟ್ ಹಾಕಿದ್ದಾರೆ. ಸುಶಾಂತ್ ಇಲ್ಲದೆ 30 ದಿನಗಳನ್ನು ಕಳೆದ ಬಗ್ಗೆ ರಿಯಾ ಮಾತನಾಡಿದ್ದಾರೆ. ಮುಂದೆ ಓದಿ...

'ಪ್ರೀತಿಯ ಶಕ್ತಿ ತಿಳಿಸಿಕೊಟ್ಟವನೇ ನೀನು...'
"ನನ್ನ ಭಾವನೆಗಳನ್ನು ಎದುರಿಸಲು ಇನ್ನೂ ಕಷ್ಟಪಡುತ್ತಿದ್ದೀನಿ. ನನ್ನ ಹೃದಯದಲ್ಲಿ ಸರಿಪಡಿಸಲಾಗದ ಮರಗಟ್ಟುವಿಕೆ ಇದೆ. ನನ್ನನ್ನು ಪ್ರೀತಿಯಲ್ಲಿ ನಂಬುವಂತೆ ಮಾಡಿದ್ದೆ ನೀನು , ಪ್ರೀತಿಯ ಶಕ್ತಿ ತಿಳಿಸಿಕೊಟ್ಟವನೇ ನೀನು. ನಾನು ನಿಮ್ಮಿಂದ ಪ್ರತೀದಿನ ತುಂಬಾ ಕಲಿತಿದ್ದೇನೆ. ನೀನು ನನ್ನೊಂದಿಗೆ ಇಲ್ಲ ಎಂಬುದನ್ನ ಎಂದಿಗೂ ನನಗೆ ಒಪ್ಪಿಕೊಳ್ಳಲು ಸಾದ್ಯವಿಲ್ಲ."

ಈಗ ತುಂಬಾ ಶಾಂತಿಯುತ ಸ್ಥಳದಲ್ಲಿದ್ದೀಯಾ
"ನೀನು ಈಗ ತುಂಬಾ ಶಾಂತಿಯುತ ಸ್ಥಳದಲ್ಲಿದ್ದೀಯಾ ಎಂದು ನನಗೆ ತಿಳಿದಿದೆ. ಚಂದ್ರ, ನಕ್ಷತ್ರಗಳು, ಗ್ಯಾಲಾಕ್ಸಿ ಶ್ರೇಷ್ಠ ಭೌತಶಾಸ್ತ್ರಜ್ಞನನ್ನು ತೆರೆದ ಬಾವುಗಳಿಂದ ಸ್ವಾಗತಿಸಿವೆ ಎಂದುಕೊಳ್ಳುತ್ತೇನೆ. ನೀನು ಒಬ್ಬ ಸುಂದರ ವ್ಯಕ್ತಿಯಾಗಲು ನಿನ್ನಲ್ಲಿ ಎಲ್ಲ ಗುಣಗಳು ಇದ್ದವು, ಜಗತ್ತು ಕಂಡ ಅತಿ ದೊಡ್ಡ ಅದ್ಭುತ ನೀನು. ನನ್ನ ಮಾತುಗಳು ನಮ್ಮಲ್ಲಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಅಸಮರ್ಥವಾಗಿವೆ. ಅದು ನಮ್ಮಿಬ್ಬರಿಗೂ ಮೀರಿದ್ದು ಅಂತ ಹೇಳಿದ್ದು ನಿಜವಾಗಿತ್ತು ಎಂದು ಎನಿಸುತ್ತಿದೆ."

ನಿನ್ನನ್ನು ಶಾಶ್ವತವಾಗಿ ಪ್ರೀತಿಸುತ್ತೇನೆ
"ನೀನು ಎಲ್ಲವನ್ನೂ ತೆರೆದ ಹೃದಯದಿಂದ ಪ್ರೀತಿಸುತ್ತಿದ್ದೆ. ಈಗ ನಮ್ಮ ಪ್ರೀತಿ ನಿಜಕ್ಕೂ ಹೆಚ್ಚಾಗುತ್ತಲೆ ಇರುತ್ತೆ ಎಂದು ನೀನು ನನಗೆ ತೋರಿಸಿದ್ದೀಯಾ. ಶಾಂತಿಯಿಂದಿರಿ ಸುಶಿ. ನಿಮ್ಮನ್ನು ಕಳೆದುಕೊಂಡು 30 ದಿನಗಳಾಗಿವೆ. ಆದರೆ ನಿಮ್ಮನ್ನು ಪ್ರೀತಿಸುವ ಜೀವಿತಾವಧಿ ಮಾತ್ರ ಶಾಶ್ವತವಾಗಿರುತ್ತೆ."

ಸುಶಾಂತ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ರಿಯಾ
ರಿಯಾ ಮತ್ತು ಸುಶಾಂತ್ ಇಬ್ಬರು ಪ್ರೀತಿಸುತ್ತಿದ್ದರು ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ ಇಬ್ಬರು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಇಬ್ಬರು ಯಾವಾಗಲು ಜೊತೆಯಲ್ಲಿಯೆ ಇರುತ್ತಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ರಜಾದಿನಗಳನ್ನು ಒಟ್ಟಿಗೆ ಕಳೆಯುತ್ತಿದ್ದರು. ಸುಶಾಂತ್ ಸಾವಿನ ನಂತರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಮತ್ತು ನಿಧನದ ನಂತರ ಮೌನವನ್ನು ಕಾಯ್ದುಕೊಂಡಿದ್ದರು.


Click it and Unblock the Notifications











