ಸುಶಾಂತ್ ಪ್ರೇಯಸಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ: ಕಾಪಾಡಿ ಎಂದು ಸೈಬರ್ ಪೊಲೀಸರನ್ನು ಕೇಳಿಕೊಂಡ ರಿಯಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ತಿಂಗಳುಮೇಲಾಗಿದೆ. ಸುಶಾಂತ್ ಆತ್ಮಹತ್ಯೆಗೆ ಕಾರಣವೇನು ಎನ್ನುನ ಹುಡುಕಾಟದಲ್ಲಿದ್ದಾರೆ ಪೊಲೀಸರು. ಈಗಾಗಲೆ ಬಾಲಿವುಡ್ ನ ಸಾಕಷ್ಟು ಮಂದಿಯನ್ನು ವಿಚಾರಣೆ ಮಾಡಲಾಗಿದೆ. ಸುಶಾಂತ್ ಸಾವಿನ ಬಳಿಕ ಪ್ರೇಯಸಿ ರಿಯಾ ಚಕ್ರವರ್ತಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ನಿಂದನೆಗೆ ಒಳಗಾಗುತ್ತಿದ್ದಾರೆ. ನೆಟ್ಟಿಗರು ರಿಯಾ ಚಕ್ರವರ್ತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

Recommended Video

Kannad Gothilla :ರಚಿತಾ ರಾಮ್ ಚಾನ್ಸ್ ಮಿಸ್ ಮಾಡ್ಕೊಂಡ್ರು ಹರಿಪ್ರಿಯಾ ಕ್ಯಾಚ್ ಹಾಕೊಂಡ್ರು |Mayuraa Raghavendra

ಈ ಬಗ್ಗೆ ನಟಿ ರಿಯಾ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಮೇಲೆ ಹರಿದುಬರುತ್ತಿರುವ ಟೀಕೆಗಳ ಬಗ್ಗೆ ಮೌನ ಮುರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಕೆಟ್ಟ ಕಾಮೆಂಟ್ ಮತ್ತು ಬೆದರಿಕೆಗಳ ಪೋಸ್ಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಪ್ರಶ್ನೆ ಮಾಡಿದ್ದಾರೆ. ಮುಂದೆ ಓದಿ...

ಕೊಲೆಗಾತಿ ಎಂದರು, ಶೀಲದ ಬಗ್ಗೆ ಮಾತನಾಡಿದರೂ ಸೈಲೆಂಟ್ ಆಗಿದ್ದೆ

ಕೊಲೆಗಾತಿ ಎಂದರು, ಶೀಲದ ಬಗ್ಗೆ ಮಾತನಾಡಿದರೂ ಸೈಲೆಂಟ್ ಆಗಿದ್ದೆ

ರಿಯಾ ಚಕ್ರವರ್ತಿ ಸಾಮಾಜಿಕ ಜಾಲತಾಣದಲ್ಲಿ "ನನ್ನನ್ನು ದುಡ್ಡಿಗಾಗಿ ಸುಶಾಂತ್ ಸಹವಾಸ ಮಾಡಿದ್ದಾಳೆ ಎಂದು ಹೇಳಿದರು. ಸುಮ್ಮನಿದ್ದೆ. ಕೊಲೆಗಾತಿ ಎಂದು ಕರೆದರೂ ಸುಮ್ಮನಿದ್ದೆ. ನನ್ನ ಶೀಲದ ಬಗ್ಗೆ ಮಾತನಾಡಿದ್ರು ಸುಮ್ಮನಿದ್ದೆ. ಆದರೆ ನಾನು ಮೌನವಾಗಿದ್ದೀನಿ ಅಂತ ಆತ್ಮಹತ್ಯೆ ಮಾಡಿಕೊಳ್ಳದಿದ್ದಾರೆ ಅತ್ಯಾಚಾರ ಮಾಡಿ ಕೊಲೆ ಮಾಡುವುದಾಗಿ ಹೇಳಲು ನಿಮಗೆ ಹಕ್ಕು ಕೊಟ್ಟವರು ಯಾರು?" ಎಂದು ಪ್ರಶ್ನಿಸಿದ್ದಾರೆ.

ನೀವು ಹೇಳುತ್ತಿರುವ ಗಂಭೀರತೆ ಅರಿತುಕೊಂಡಿದ್ದೀರಾ?

ನೀವು ಹೇಳುತ್ತಿರುವ ಗಂಭೀರತೆ ಅರಿತುಕೊಂಡಿದ್ದೀರಾ?

"ನೀವು ಹೇಳುತ್ತಿರುವ ಗಂಭೀರತೆಯನ್ನು ನೀವು ಅರಿತುಕೊಂಡಿದ್ದೀರಾ? ಹೀಗೆ ಬೆದರಿಕೆ ಹಾಕುವುದು ಕಾನೂನು ಪ್ರಕಾರ ಅಪರಾಧ. ನಾನು ಮತ್ತೆ ಹೇಳುತ್ತೇನೆ ಯಾರು ಇಷ್ಟು ಕೆಟ್ಟ ಆಲೋಚನೆ ಮಾಡಬಾರದು ಮತ್ತು ಕಿರುಕುಳ ನೀಡಬಾರದು." ಎಂದು ರಿಯಾ ಹೇಳಿದ್ದಾರೆ.

ಸೈಬರ್ ಕ್ರೈಮ್ ಬಳಿ ರಿಯಾ ಮನವಿ

ಸೈಬರ್ ಕ್ರೈಮ್ ಬಳಿ ರಿಯಾ ಮನವಿ

ಇದರಿಂದ ಕಾಪಾಡುವಂತೆ ನಟಿ ರಿಯಾ ಚಕ್ರವರ್ತಿ ಸೈಬರ್ ಕ್ರೈಮ್ ಬಳಿ ಬೇಡಿಕೊಂಡಿದ್ದಾರೆ. ದಯವಿಟ್ಟು ಆಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಸೈಬರ್ ಕ್ರೈಮ್ ಹೆಲ್ಪ್ ಲೈನ್ ಮತ್ತು ಸೈಬರ್ ಕ್ರೈಮ್ ಇಂಡಿಯಾ ಅವರಿಗೆ ಟ್ಯಾಗ್ ಮಾಡಿದ್ದಾರೆ

ಸುಶಾಂತ್ ಬಗ್ಗೆ ಭಾವನಾತ್ಮಕ ಪೋಸ್ಟ್

ಸುಶಾಂತ್ ಬಗ್ಗೆ ಭಾವನಾತ್ಮಕ ಪೋಸ್ಟ್

ಸುಶಾಂತ್ ನನ್ನು ಕಳೆದುಕೊಂಡು 1 ತಿಂಗಳ ಬಳಿಕ ರಿಯಾ ಚಕ್ರವರ್ತಿ ಭಾವುಕ ಮಾತುಗಳನ್ನು ಆಡಿದ್ದರು. "ನನ್ನ ಭಾವನೆಗಳನ್ನು ಎದುರಿಸಲು ಇನ್ನೂ ಕಷ್ಟಪಡುತ್ತಿದ್ದೀನಿ. ನನ್ನ ಹೃದಯದಲ್ಲಿ ಸರಿಪಡಿಸಲಾಗದ ಮರಗಟ್ಟುವಿಕೆ ಇದೆ. ನನ್ನನ್ನು ಪ್ರೀತಿಯಲ್ಲಿ ನಂಬುವಂತೆ ಮಾಡಿದ್ದೆ ನೀನು , ಪ್ರೀತಿಯ ಶಕ್ತಿ ತಿಳಿಸಿಕೊಟ್ಟವನೇ ನೀನು. ನಾನು ನಿಮ್ಮಿಂದ ಪ್ರತೀದಿನ ತುಂಬಾ ಕಲಿತಿದ್ದೇನೆ. ನೀನು ನನ್ನೊಂದಿಗೆ ಇಲ್ಲ ಎಂಬುದನ್ನ ಎಂದಿಗೂ ನನಗೆ ಒಪ್ಪಿಕೊಳ್ಳಲು ಸಾದ್ಯವಿಲ್ಲ." ಎಂದು ದೀರ್ಘವಾಗಿ ಬರೆದುಕೊಂಡಿದ್ದರು.

More from Filmibeat

English summary
Rhea Chakraborty gets rape and murder threat after Sushant Singh suicide. Rhea Chakraborty request to cybercrime to take action.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X