twitter
    For Quick Alerts
    ALLOW NOTIFICATIONS  
    For Daily Alerts

    'ಡ್ರಗ್ಸ್ ಸಿಕ್ಕಿರಲಿಲ್ಲ, ಪರೀಕ್ಷೆ ಮಾಡಲಿಲ್ಲ, ಆದರೂ ಆಕೆಯನ್ನು ಜೈಲಿಗಟ್ಟಿದಿರಿ'

    |

    ದೇಶದಾದ್ಯಂತ ಸುದ್ದಿಯಾಗಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್‌ಗೆ ಕ್ಲೀನ್ ಚಿಟ್ ದೊರೆತಿದೆ. ಆರ್ಯನ್‌ಗೆ ಮಾತ್ರವೇ ಅಲ್ಲದೆ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇನ್ನೂ ಐವರಿಗೆ ಕ್ಲೀನ್ ಚಿಟ್ ದೊರೆತಿದೆ.

    ಆರ್ಯನ್ ಖಾನ್ ಪ್ರಕರಣದ ವೇಳೆ ಎನ್‌ಸಿಬಿಯು ಕಾರ್ಯನಿರ್ವಹಣೆಯಲ್ಲಿ ಹಲವು ಲೋಪದೋಷಗಳನ್ನು ಎಸಗಿರುವುದು ಬೆಳಕಿಗೆ ಬಂದಿತ್ತು. ಎನ್‌ಸಿಬಿ ಕಾರ್ಯಾಚರಣೆಯಲ್ಲಿ ಬಾಹ್ಯ ವ್ಯಕ್ತಿಗಳ ಕೈವಾಡವಿರುವುದು ಬಹಿರಂಗವಾಗಿತ್ತು. ಅಲ್ಲದೆ, ಎನ್‌ಸಿಬಿ ಮೇಲೆ ಹಣ ವಸೂಲಿ ಆರೋಪವೂ ಬಂದಿತ್ತು. ಇದರಿಂದಾಗಿ ಸಹಜವಾಗಿಯೇ ಎನ್‌ಸಿಬಿ ವಿರುದ್ಧ ಅಪನಂಬಿಕೆ ಉಲ್ಪಬಣವಾಗಿದೆ.

    ಈಗ ಆರ್ಯನ್ ಖಾನ್ ಪ್ರಕರಣದ ಬಳಿಕ, ಈ ಹಿಂದೆ ಎನ್‌ಸಿಬಿಯಿಂದ ತನಿಖೆಗೆ ಒಳಪಟ್ಟಿದ್ದ ಪ್ರತ್ಯೇಕ ಪ್ರಕರಣಗಳ ಆರೋಪಿಗಳು ತಮ್ಮ ಪ್ರಕರಣವನ್ನು ಪುನಃ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಅದರಲ್ಲಿ ಸುಶಾಂತ್ ಸಿಂಗ್ ಗರ್ಲ್‌ಫ್ರೆಂಡ್ ಆಗಿದ್ದ ರಿಯಾ ಚಕ್ರವರ್ತಿ ಸಹ ಒಬ್ಬರು.

    ರಿಯಾ ಪರವಾಗಿ ಅರ್ಜಿ

    ರಿಯಾ ಪರವಾಗಿ ಅರ್ಜಿ

    ಸುಶಾಂತ್ ಸಿಂಗ್ ಸಾವಿನ ಬಳಿಕ ಹೊರಬಿದ್ದ ಡ್ರಗ್ಸ್‌ ಪ್ರಕರಣದ ತನಿಖೆ ನಡೆಸಿದ್ದ ಎನ್‌ಸಿಬಿಯು ಸುಶಾಂತ್‌ ಸಿಂಗ್‌ರ ಗರ್ಲ್‌ಫ್ರೆಂಡ್ ಆಗಿದ್ದ ರಿಯಾ ಚಕ್ರವರ್ತಿಯನ್ನು ಬಂಧಿಸಿತ್ತು. ರಿಯಾ ಚಕ್ರವರ್ತಿಯ ಸಹೋದರನನ್ನೂ ಸಹ ಬಂಧಿಸಿತ್ತು. ರಿಯಾ ಚಕ್ರವರ್ತಿ, ಸುಶಾಂತ್‌ ಮಾದಕ ವಸ್ತು ತೆಗೆದುಕೊಳ್ಳಲು ಸಹಾಯ ಮಾಡಿದ್ದಳು ಎಂಬ ಆರೋಪವನ್ನು ಎನ್‌ಸಿಬಿ, ರಿಯಾ ವಿರುದ್ಧ ಹೊರಿಸಿತ್ತು. ಆರ್ಯನ್ ಖಾನ್ ಪ್ರಕರಣವನ್ನು ವಾದಿಸಿದ್ದ ವಕೀಲ ಸತೀಶ್ ಮಾನೆಶಿಂಧೆ ಇದೀಗ ನಟಿ ರಿಯಾ ಚಕ್ರವರ್ತಿ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ರಿಯಾ ಪ್ರಕರಣವನ್ನು ಪುನಃ ತನಿಖೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಕೇಂದ್ರ ಗೃಹ ಇಲಾಖೆಯನ್ನು ಒತ್ತಾಯಿಸುವುದಾಗಿಯೂ ಮಾನೆಶಿಂಧೆ ಹೇಳಿದ್ದಾರೆ.

    ಆ ಯುವತಿ ಏಕೆ ಕಷ್ಟಪಡಬೇಕು: ಸತೀಶ್ ಮಾನೆಶಿಂಧೆ

    ಆ ಯುವತಿ ಏಕೆ ಕಷ್ಟಪಡಬೇಕು: ಸತೀಶ್ ಮಾನೆಶಿಂಧೆ

    ''ರಿಯಾ ಚಕ್ರವರ್ತಿ ಬಳಿ ಯಾವುದೇ ಡ್ರಗ್ಸ್ ದೊರಕಿರಲಿಲ್ಲ, ಯಾವುದೇ ಟೆಸ್ಟ್ ಸಹ ಮಾಡಲಾಗಿರಲಿಲ್ಲ. ಆದರೂ ಆಕೆ ಶಿಕ್ಷೆ ಅನುಭವಿಸವಂತಾಯಿತು. ಇನ್ನು ಎಷ್ಟು ದಿನ ಆ ಯುವತಿ ಕಷ್ಟಪಡಬೇಕು? ಆಕೆಯ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿ. ಏಕೆಂದರೆ ಆರ್ಯನ್ ಖಾನ್ ಅನ್ನು ಸಾಕ್ಷ್ಯಾಧಾರ ರಹಿತವಾಗಿ, ಕರ್ತವ್ಯಲೋಪ ಎಸಗಿ ಬಂಧಿಸಿದ್ದ ತಂಡವೇ ರಿಯಾ ಚಕ್ರವರ್ತಿ ಪ್ರಕರಣದಲ್ಲಿಯೂ ಕೆಲಸ ಮಾಡಿದೆ'' ಎಂದಿದ್ದಾರೆ.

    ಹಲವು ಬಾಲಿವುಡ್ ನಟಿಯರನ್ನು ಕರೆಸಿಕೊಳ್ಳಲಾಗಿತ್ತು

    ಹಲವು ಬಾಲಿವುಡ್ ನಟಿಯರನ್ನು ಕರೆಸಿಕೊಳ್ಳಲಾಗಿತ್ತು

    ರಿಯಾ ಚಕ್ರವರ್ತಿ ಮಾತ್ರವೇ ಅಲ್ಲ, ಈ ಹಿಂದೆ ಎನ್‌ಸಿಬಿ ತನಿಖೆ ನಡೆಸಿದ್ದ ಎಲ್ಲ ಪ್ರಕರಣಗಳ ಪುನರ್ ತನಿಖೆ ಆಗಬೇಕು ಎಂದು ಸತೀಶ್ ಮಾನೆಶಿಂಧೆ ಒತ್ತಾಯಿಸಿದ್ದಾರೆ. ''ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಎಲ್ಲರೂ ಎನ್‌ಸಿಬಿ ಕಚೇರಿಗೆ ಅಲೆದಿದ್ದರು. ಈ ಎಲ್ಲ ಪ್ರಕರಣಗಳು ಪುನಃ ತನಿಖೆ ಆಗಬೇಕು. ದುರುದ್ದೇಶಪೂರ್ವಕವಾಗಿ ಅವರನ್ನು ಕರೆಸಿಕೊಳ್ಳಲಾಯಿತೆ ಎಂಬುದು ಪತ್ತೆಯಾಗಬೇಕು'' ಎಂದಿದ್ದಾರೆ ಸತೀಶ್ ಮಾನೆಶಿಂಧೆ.

    ಬಯಲಾಯ್ತು ಎನ್‌ಸಿಬಿಯ ಕರ್ತವ್ಯಲೋಪ

    ಬಯಲಾಯ್ತು ಎನ್‌ಸಿಬಿಯ ಕರ್ತವ್ಯಲೋಪ

    ಸಮೀರ್ ವಾಂಖೆಡೆ, ಎನ್‌ಸಿಬಿಯ ಮುಖ್ಯಸ್ಥರಾಗಿದ್ದಾಗ ಹಲವಾರು ಬಾಲಿವುಡ್ ನಟ, ನಟಿಯರನ್ನು ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಮಾಡಿದರು. ಸತತವಾಗಿ ಬಾಲಿವುಡ್‌ ಅನ್ನು ಟಾರ್ಗೆಟ್ ಮಾಡಿ ಹಲವರ ವಿಚಾರಣೆ, ಬಂಧನಗಳನ್ನು ಮಾಡಲಾಯ್ತು. ಅದರ ಭಾಗವಾಗಿಯೇ ಆರ್ಯನ್ ಖಾನ್ ಬಂಧನವೂ ಆಯಿತು. ಆದರೆ ಆರ್ಯನ್ ಪ್ರಕರಣದಲ್ಲಿ ಎಲ್ಲವೂ ಎನ್‌ಸಿಬಿಗೆ ವಿರುದ್ಧವಾಯಿತು. ಆರ್ಯನ್ ಪ್ರಕರಣದಲ್ಲಿ ಎನ್‌ಸಿಬಿ ಎಸಗಿದ್ದ ಕರ್ತವ್ಯಲೋಪಗಳು ಹೊರಬಂದವು. ಆರ್ಯನ್ ಬಂಧನದಲ್ಲಿ ಎನ್‌ಸಿಬಿ ಜೊತೆ ಶಾಮೀಲಾಗಿದ್ದ ಕಿರಣ್ ಗೋಸಾಯಿ, ಶಾರುಖ್ ಖಾನ್ ಮ್ಯಾನೇಜರ್‌ನಿಂದ ಲಕ್ಷಾಂತರ ಹಣ ವಸೂಲಿ ಮಾಡಿದ್ದ ಅಂಶ ಬೆಳಕಿಗೆ ಬಂತು. ಸಮೀರ್ ವಾಂಖಡೆ ವಿರುದ್ಧ ಆರೋಪಗಳು ಹೆಚ್ಚಾದ ಕಾರಣ ಅವರನ್ನು ವರ್ಗಾವಣೆ ಮಾಡಿ, ಆರ್ಯನ್ ಪ್ರಕರಣವನ್ನು ಎನ್‌ಸಿಬಿಯ ವಿಶೇಷ ತನಿಖಾ ದಳಕ್ಕೆ ಒಪ್ಪಿಸಲಾಯ್ತು. ಎನ್‌ಸಿಬಿ ವಿಶೇಷ ತನಿಖಾ ದಳವು ಆರ್ಯನ್ ಸೇರಿದಂತೆ ಆರು ಮಂದಿಯ ವಿರುದ್ಧ ಆರೋಪವನ್ನೇ ಕೈಬಿಟ್ಟಿದೆ. ಅವರ ಬಳಿ ಡ್ರಗ್ಸ್ ದೊರಕಿರಲಿಲ್ಲವೆಂದು, ಅವರ ವಿರುದ್ಧ ಸಾಕ್ಷ್ಯಾಧಾರಗಳೇ ಇಲ್ಲವೆಂದು ಒಪ್ಪಿಕೊಂಡಿದೆ.

    English summary
    Aryan Khan lawyer Satish Maneshindhe said Rhea Chakraborty case should be investigated freshly. No drugs found on her, no test has been done to her, still went to jail.
    Tuesday, May 31, 2022, 18:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X