ಸುಶಾಂತ್ ಮತ್ತು ನಾನು ಮದುವೆಯಾಗಲಿದ್ದೇವೆ ಎಂದು ಹೇಳಿಕೊಂಡಿದ್ದರು ರಿಯಾ

By Avani Malnad

ಸುಶಾಂತ್ ಸಿಂಗ್ ರಜಪೂತ್ ಮತ್ತು ಅವರ ಧಾರಾವಾಹಿ ಸಹ ನಟ ಅಂಕಿತಾ ಲೋಖಂಡೆ ಹಲವು ವರ್ಷ ಲಿವಿಂಗ್ ಟುಗೆದರ್ ನಡೆಸಿದ್ದರು. ನಂತರ ಇಬ್ಬರ ನಡುವೆ ಏನು ನಡೆಯಿತೋ, ಪರಸ್ಪರ ಬೇರ್ಪಟ್ಟಿದ್ದರು. ನಂತರ ಕೆಲವು ಸಮಯ ಕೃತಿ ಸನನ್ ಹಾಗೂ ಸುಶಾಂತ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಸುಶಾಂತ್ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುವ ಹಿಂದಿನ ದಿನದವರೆಗೂ ಅವರೊಂದಿಗೆ ಇದ್ದವರು ರಯಾ ಚಕ್ರಬೊರ್ತಿ.

Recommended Video

ನಮ್ಮಲ್ಲಿ ನೆಪೊಟಿಸಮ್ ಭೂತ ಇಲ್ಲ ಎಂದು ತೋರಿಸಿಕೊಟ್ಟ ಅಪ್ಪು | Puneeth Rajkumar | Sandalwood

ರಿಯಾ ಮತ್ತು ಸುಶಾಂತ್ ಒಟ್ಟಿಗೆ ಸುತ್ತಾಡುತ್ತಿದ್ದದ್ದು, ಇಬ್ಬರ ನಡುವೆಯೂ ಪ್ರೀತಿ ಇದೆ ಎಂಬ ವದಂತಿಗೆ ಕಾರಣವಾಗಿತ್ತು. ಸುಶಾಂತ್ ನವೆಂಬರ್‌ನಲ್ಲಿ ಮದುವೆಯಾಗಬೇಕಿತ್ತು. ಅದಕ್ಕಾಗಿ ಮಾತುಕತೆಗಳು ನಡೆದಿದ್ದವು ಎಂಬುದು ಅವರ ಸಾವಿನ ಬಳಿಕ ಬಹಿರಂಗವಾಗಿತ್ತು. ಸುಶಾಂತ್ ಸಂಬಂಧಿಯೊಬ್ಬರು ಇದರ ಬಗ್ಗೆ ಖಚಿತಪಡಿಸಿದ್ದರೂ, ಮದುವೆಯಾಗಲಿದ್ದ ಹುಡುಗಿ ಯಾರು ಎಂಬುದನ್ನು ತಿಳಿಸಲು ಅವರು ಒಪ್ಪಿರಲಿಲ್ಲ. ಮುಂದೆ ಓದಿ...

ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು

ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು

ಕೆಲವು ತಿಂಗಳಿಂದ ಸುಶಾಂತ್ ಹಾಗೂ ರಿಯಾ ಚಕ್ರಬೊರ್ತಿ ಡೇಟಿಂಗ್ ನಡೆಸುತ್ತಿದ್ದು, ಗಂಭೀರವಾಗಿ ಸಂಬಂಧ ಬೆಳೆಸಿಕೊಂಡಿದ್ದಾರೆ ಎಂಬ ರೂಮರ್ ಹರಿದಾಡುತ್ತಿತ್ತು. ಆದರೆ ಇದರ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಇತ್ತೀಚಿನ ವರದಿಗಳ ಪ್ರಕಾರ ಸುಶಾಂತ್ ಮತ್ತು ರಿಯಾ ವೈವಾಹಿಕ ಬದುಕಿಗೆ ಕಾಲಿರಿಸಲು ಸಿದ್ಧತೆ ನಡೆಸಿದ್ದರು.

ಮನೆ ಹುಡುಕುತ್ತಿದ್ದ ರಿಯಾ

ಮನೆ ಹುಡುಕುತ್ತಿದ್ದ ರಿಯಾ

ರಿಯಾ ಮತ್ತು ಸುಶಾಂತ್ ಇಬ್ಬರೂ ಒಟ್ಟಿಗೆ ಮನೆ ಹುಡುಕಾಟ ನಡೆಸಿದ್ದರು. ಬಾಂದ್ರಾದಲ್ಲಿ ನನಗೆ ಮನೆ ಬೇಕು. ಸುಶಾಂತ್ ಸಿಂಗ್ ರಜಪೂತ್ ಜತೆ ನಾನು ಇರಲಿದ್ದೇನೆ. ಶೀಘ್ರದಲ್ಲಿಯೇ ಇಬ್ಬರೂ ಮದುವೆಯಾಗಲಿದ್ದೇವೆ ಎಂದು ರಿಯಲ್ ಎಸ್ಟೇಟ್ ಡೀಲರ್ ಒಬ್ಬರ ಬಳಿ ರಿಯಾ ಹೇಳಿಕೊಂಡಿದ್ದರು ಎಂದು ವರದಿಯಾಗಿದೆ.

ತಡ ರಾತ್ರಿ ಪಾರ್ಟಿ ಮಾಡುತ್ತಿದ್ದ ಸುಶಾಂತ್

ತಡ ರಾತ್ರಿ ಪಾರ್ಟಿ ಮಾಡುತ್ತಿದ್ದ ಸುಶಾಂತ್

ಸುಶಾಂತ್ ಎಂದಿಗೂ ಬಾಡಿಗೆ ಕಟ್ಟುವ ವಿಚಾರದಲ್ಲಿ ತಡ ಮಾಡುತ್ತಿರಲಿಲ್ಲ. ಆದರೆ ಅವರಿಂದ ಆಗುತ್ತಿದ್ದ ಒಂದೇ ಒಂದು ಸಮಸ್ಯೆಯೆಂದರೆ ತಡರಾತ್ರಿ ಪಾರ್ಟಿಗಳು. ಇದಕ್ಕೂ ಮೊದಲು ಸುಶಾಂತ್ ನೆಲೆಸಿದ್ದ ಮನೆಯ ಸುತ್ತಮುತ್ತಲಿನವರೂ ಅವರ ತಡ ರಾತ್ರಿ ಪಾರ್ಟಿಗಳ ಬಗ್ಗೆ ಆರೋಪಿಸಿದ್ದರು ಎಂದು ಆ ಡೀಲರ್ ತಿಳಿಸಿದ್ದಾರೆ.

ಇಬ್ಬರೂ ಒಟ್ಟಿಗೆ ನಟಿಸಬೇಕಿತ್ತು

ಇಬ್ಬರೂ ಒಟ್ಟಿಗೆ ನಟಿಸಬೇಕಿತ್ತು

ಹೀಗಾಗಿ ಸುಶಾಂತ್ ಮತ್ತು ರಿಯಾ ಒಟ್ಟಾಗಿ ಸಾಂಸಾರಿಕ ಜೀವನಕ್ಕೆ ಕಾಲಿರಿಸಲು ತಯಾರಿ ನಡೆಸಿದ್ದರು ಎನ್ನುವುದು ದೃಢಪಟ್ಟಿದೆ. ಸುಶಾಂತ್ ಅವರ ಅಂತ್ಯಸಂಸ್ಕಾರದಲ್ಲಿ ರಿಯಾ ಭಾಗವಹಿಸಿದ್ದರು. ಲಾಕ್ ಡೌನ್ ಅಂತ್ಯಗೊಂಡ ಬಳಿಕ ಚಿತ್ರೀಕರಣ ಆರಂಭವಾದರೆ ಇಬ್ಬರೂ ಜತೆಗೆ ರೊಮ್ಯಾಂಟಿಕ್ ಕಾಮಿಡಿ ಚಿತ್ರವೊಂದರಲ್ಲಿ ನಟಿಸಬೇಕಾಗಿತ್ತು.

ಆನಂದ್ ರೈ ಜತೆ ಸುಶಾಂತ್ ಸಿನಿಮಾ

ಆನಂದ್ ರೈ ಜತೆ ಸುಶಾಂತ್ ಸಿನಿಮಾ

'ರಾಂಝಾನಾ' ಚಿತ್ರದ ನಿರ್ದೇಶಕ ಆನಂದ್ ಎಲ್ ರೈ ಬ್ಯಾನರ್‌ನಲ್ಲಿ ಸುಶಾಂತ್ ಸಿನಿಮಾ ಮಾಡಬೇಕಿತ್ತು. ಅದರ ಬಗ್ಗೆ ಚರ್ಚೆ ಕೂಡ ನಡೆದಿತ್ತು. ಸುಶಾಂತ್ ಅವರಿಗೆ ಸೂಕ್ತವಾಗುವ ಕಥೆ ಸಿದ್ಧಪಡಿಸಿದ್ದ ಆನಂದ್, ಅವರನ್ನು ಭೇಟಿಯಾಗಿ ಅದನ್ನು ವಿವರಿಸಿದ್ದರು. ಅದಕ್ಕೆ ಸುಶಾಂತ್ ಕೂಡ ಒಪ್ಪಿಗೆ ಸೂಚಿಸಿದ್ದರು.

More from Filmibeat

English summary
A Property dealer has said, Rhea Chakraborty confirmed wedding with Sushant Singh Rajput to him a few days ago.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X