ನನ್ನ ಜೀವನದ ಹೀರೋ: ಸುಶಾಂತ್ ಕೊನೆಯ ಸಿನಿಮಾದ ಬಗ್ಗೆ ಪ್ರೇಯಸಿಯ ಭಾವನಾತ್ಮಕ ಪೋಸ್ಟ್

ಬಾಲಿವುಡ್ ನಟ ಸುಶಾಂತ್ ಸಿಂಗ್ ಅಭಿನಯದ ಕೊನೆಯ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಜುಲೈ 24ರಂದು ಒಟಿಟಿಯಲ್ಲಿ ಸುಶಾಂತ್ ಅಭಿನಯದ ಕೊನೆಯ ಸಿನಿಮಾ ದಿಲ್ ಬೆಚಾರ ಸಿನಿಮಾ ಬಿಡುಗಡೆಯಾಗುತ್ತಿದೆ. ಸುಶಾಂತ್ ಕೊನೆಯ ಸಿನಿಮಾ ನೋಡಲು ಕೊಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೆ ರಿಲೀಸ್ ಆಗಿರುವ ಟ್ರೈಲರ್ ಮತ್ತು ಹಾಡುಗಳು ದಾಖಲೆ ಮಟ್ಟಕ್ಕೆ ಹಿಟ್ ಆಗಿವೆ.

Recommended Video

Rangayana Raghu ಜೊತೆ OTT , French Biryani , Lockdown ಕುರಿತು ಚರ್ಚೆ | Filmmibeat Kannada

ಯೂ ಟ್ಯೂಬ್ ನಲ್ಲಿ ದಿಲ್ ಬೆಚಾರ ಟ್ರೈಲರ್ ದಾಖಲೆ ನಿರ್ಮಿಸಿದೆ. ಎಲ್ಲಾ ಸಿನಿಮಾಗಳ ದಾಖಲೆಯನ್ನು ಸುಶಾಂತ್ ಕೊನೆಯ ಸಿನಿಮಾದ ಟ್ರೈಲರ್ ಬ್ರೇಕ್ ಮಾಡಿದೆ. ಭಾರಿ ನಿರೀಕ್ಷೆಯ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಸುಶಾಂತ್ ಕೊನೆಯ ಸಿನಿಮಾದ ಬಗ್ಗೆ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಮುಂದೆ ಓದಿ..

ರಿಯಾ ಚಕ್ರವರ್ತಿ ಭಾವನಾತ್ಮಕ ಮಾತು

ರಿಯಾ ಚಕ್ರವರ್ತಿ ಭಾವನಾತ್ಮಕ ಮಾತು

ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಕೊನೆಯ ಸಿನಿಮಾದ ಬಗ್ಗೆ ಮತ್ತು ಸುಶಾಂತ್ ಇಲ್ಲದೆ ಸಿನಿಮಾವನ್ನು ವೀಕ್ಷಿಸುವುದು ಎಷ್ಟು ಕಷ್ಟಕರವಾಗಿದೆ ಎನ್ನುವ ಬಗ್ಗೆ ರಿಯಾ ಬರೆದುಕೊಂಡಿದ್ದಾರೆ. "ನಿನ್ನನ್ನು ವೀಕ್ಷಿಸಲು ನನ್ನಲ್ಲಿರುವ ಪ್ರತಿ ಶಕ್ತಿಯನ್ನು ತೆಗೆದುಕೊಳ್ಳುತ್ತೇನೆ. ನೀನು ನನ್ನೊಂದಿಗೆ ಇದ್ದೀಯಾ ಎಂದು ನನಗೆ ಗೊತ್ತಿದೆ. ನಾನು ನಿನ್ನನ್ನು ಮತ್ತು ನಿನ್ನ ಪ್ರೀತಿಯನ್ನು ಆಚರಿಸುತ್ತೇನೆ. ನನ್ನ ಜೀವನದ ಹೀರೋ ನೀನು. ನನ್ನೊಂದಿಗೆ ನಾನು ನೋಡುತ್ತೀಯಾ ಎಂದು ನನಗೆ ತಿಳಿದಿದೆ." ಎಂದು ಬರೆದುಕೊಂಡಿದ್ದಾರೆ.

ದಿಲ್ ಬೆಚಾರ ಸಿನಿಮಾ ಪ್ರಮೋಷನ್ ನಲ್ಲಿ ಸ್ಟಾರ್ಸ್

ದಿಲ್ ಬೆಚಾರ ಸಿನಿಮಾ ಪ್ರಮೋಷನ್ ನಲ್ಲಿ ಸ್ಟಾರ್ಸ್

ಬಾಲಿವುಡ್ ನ ಅನೇಕರ ಕಲಾವಿದರು ಈ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ನಟಿ ಸಾರಾ ಅಲಿಖಾನ್, ರಾಜ್ ಕುಮಾರ್ ರಾವ್, ಕೃತಿ ಸನೂನ್ ಸೇರಿದ್ದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ದಿಲ್ ಬೆಚಾರ ಪೋಸ್ಟರ್ ಹಂಚಿಕೊಂಡಿದ್ದಾರೆ. ಸುಶಾಂತ್ ಇಲ್ಲದ ನೊವಿನಲ್ಲಿಯೆ ಅವರ ಕೊನೆಯ ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ.

ಸುಶಾಂತ್ ಬಗ್ಗೆ ರಿಯಾ ಚಕ್ರವರ್ತಿ ಪೋಸ್ಟ್

ಸುಶಾಂತ್ ಬಗ್ಗೆ ರಿಯಾ ಚಕ್ರವರ್ತಿ ಪೋಸ್ಟ್

ರಿಯಾ ಚಕ್ರವರ್ತಿ ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಬಗ್ಗೆ ಪೋಸ್ಟ್ ಮಾಡುತ್ತಿದ್ದಾರೆ. ಮೊದಲ ಬಾರಿಗೆ ರಿಯಾ, ಸುಶಾಂತ್ ಬಗ್ಗೆ 'ಪ್ರೀತಿಯಲ್ಲಿ ನಂಬಿಕೆ ಬರುವಂತೆ ಮಾಡಿದ್ದೆ ನೀನು' ಎಂದು ದೀರ್ಘವಾಗಿ ಬರೆದುಕೊಂಡಿದ್ದರು. ಆನಂತರ ಸುಶಾಂತ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ಮನವಿ ಮಾಡಿಕೊಂಡಿದ್ದರು. ಇದಾದ ಬಳಿಕ ರಿಯಾ ಬೆದರಿಕೆ ಕರೆ ಬರುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಸೈಬರ್ ಕ್ರೈಮ್ ಗೆ ದೂರು ನೀಡಿದ್ದರು. ಇದಾದ ಬಳಿಕ ಈಗ ಸುಶಾಂತ್ ಕೊನೆಯ ಸಿನಿಮಾದ ಬಗ್ಗೆ ಭಾವನಾತ್ಮಕ ಪೋಸ್ಟ್ ಹಾಕಿಕೊಂಡಿದ್ದಾರೆ.

ಡಿಸ್ನಿ ಹಾಟ್ ಸ್ಟಾರ್ ನಲ್ಲಿ ರಿಲೀಸ್

ಡಿಸ್ನಿ ಹಾಟ್ ಸ್ಟಾರ್ ನಲ್ಲಿ ರಿಲೀಸ್

ಸುಶಾಂತ್ ಸಿಂಗ್ ಅಭಿನಯದ ಕೊನೆಯ ಸಿನಿಮಾ ದಿಲ್ ಬೆಚಾರ ಮುಖೇಶ್ ಚಾಬ್ರ ನಿರ್ದೇಶನ ಮಾಡಿದ್ದಾರೆ. ಸುಶಾಂತ್ ಸಿಂಗ್ ಗೆ ನಾಯಕಿಯಾಗಿ ಸಂಜನಾ ಸಾಂಘಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ಹಾಲಿವುಡ್ ನ 'ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್' ಸಿನಿಮಾದ ರಿಮೇಕ್. ಇಂದು ಈ ಸಿನಿಮಾ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗುತ್ತಿದೆ.

More from Filmibeat

English summary
Rhea Chakraborty emotional post about Sushant Singh last movie Dil Bechara.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X