11 ತಿಂಗಳಿಂದ ಸುಶಾಂತ್ ಸಿಂಗ್ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದ ರಿಯಾ ಚಕ್ರವರ್ತಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಒತ್ತಡ ಕೇಳಿಬರುತ್ತಿದೆ. ಮುಂಬೈ ಪೊಲೀಸರು ತನಿಖೆ ಮುಂದುವರೆಸಿದ್ದು ಈಗಾಗಲೆ ಸಾಕಷ್ಟು ಮಂದಿಯನ್ನು ವಿಚಾರಣೆ ಮಾಡಲಾಗಿದೆ. ಶನಿವಾರವಷ್ಟೆ ನಿರ್ಮಾಪಕ ಆದಿತ್ಯ ಚೋಪ್ರಾ ವಿಚಾರಣೆಗೆ ಒಳಗಾಗಿದ್ದರು.

Recommended Video

ತಾಯಿಯನ್ನು ಕಳೆದುಕೊಂಡ ಜೋಗಿ ಪ್ರೇಮ್! | Filmibeat Kannada

ಮುಂದಿನ ಸರದಿ ರಿಯಾ ಚಕ್ರವರ್ತಿ ಎಂದು ಹೇಳಲಾಗುತ್ತಿದೆ. ಈಗಾಗಲೆ ರಿಯಾ ಚಕ್ರವರ್ತಿನ್ನು ಒಮ್ಮೆ ವಿಚಾರಣೆ ಮಾಡಲಾಗಿದೆ. ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಕಾರಣ ಸುಶಾಂತ್ ಸಿಂಗ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಅನ್ನು 11ತಿಂಗಳಿಂದ ರಿಯಾ ಬಳಸುತ್ತಿದ್ದರಂತೆ. ಹಾಗಾಗಿ ರಿಯಾ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ರಿಯಾ ಚಕ್ರವರ್ತಿ ಜಾಹಿರಾತು ಚಿತ್ರೀಕರಣಕ್ಕೆಂದು ಯೂರೋಪ್ ಗೆ ಹೋಗಿದ್ದರು. ಅದರ ವೆಚ್ಚವನ್ನು ಸುಶಾಂತ್ ಸಿಂಗ್ ಅವರೆ ಭರಿಸಿದ್ದಂತೆ. ಅಲ್ಲದೆ ವಿಮಾನ ಟಿಕೆಟ್ ಕೂಡ ಸುಶಾಂತ್ ಖಾತೆಯಿಂದ ಬಳಕೆಯಾಗಿದೆಯಂತೆ. ಕಳೆದ 11 ತಿಂಗಳಿಂದ ಸುಶಾಂತ್ ಬ್ಯಾಂಕ್ ಖಾತೆಯನ್ನು ರಿಯಾ ಬಳಸುತ್ತಿದ್ದು ಹಣವನ್ನು ಚಕ್ರವರ್ತಿ ಅವರೆ ಖರ್ಚು ಮಾಡುತ್ತಿದ್ದರಂತೆ.

Rhea Chakraborty Expenses Using Sushant Finance In Last 11 Months

ಹಾಗಾಗಿ ಸುಶಾಂತ್ ಖಾತೆಯಿಂದ ರಿಯಾ ಎಷ್ಟು ಹಣ ಖರ್ಚು ಮಾಡಿದ್ದಾರೆ. ಹಾಗೂ ಸುಶಾಂತ್ ಬ್ಯಾಂಕ್ ಖಾತೆಯಲ್ಲಿದ್ದ ಹಣದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ರಿಯಾ ಚಕ್ರವರ್ತಿಯನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸುಶಾಂತ್ ನಿಧನ ಹೊಂದುವ 6 ತಿಂಗಳ ಮುಂಚೆಯಿಂದ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಕೌನ್ಸಿಲಿಂಗ್ ಅವಧಿಯಲ್ಲಿ ಪ್ರೇಯಸಿ ರಿಯಾ ಕೂಡ ಜೊತೆಯಲ್ಲಿಯೆ ಇರುತ್ತಿದ್ದರಂತೆ. ಈ ಎಲ್ಲಾ ವಿಚಾರವಾಗಿ ನಟಿ ರಿಯಾ ಅವರನ್ನು ಮತ್ತೊಮ್ಮೆ ತನಿಖೆಗೆ ಒಳಪಡಿಸಲಾಗುತ್ತಿದೆ.

ಸುಶಾಂತ್ ನಿಧನಹೊಂದಿ 1 ತಿಂಗಳ ಬಳಿಕ ರಿಯಾ ಚಕ್ರವರ್ತಿ, ಸುಶಾಂತ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಅದೆ ಮೊದಲ ಬಾರಿಗೆ ಸುಶಾಂತ್ ಪ್ರೇಯಸಿ ಎಂದು ಹೇಳಿಕೊಂಡಿದ್ದಾರೆ. ರಿಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಸುಶಾಂತ್ ನಿಧನ ಹೊಂದಿ ಒಂದು ತಿಂಗಳ ಬಳಿಕ ಈಗ ಸಿಬಿಐಗೆ ಒಪ್ಪಿಸಿ ಎಂದು ಹೇಳುತ್ತಿದ್ದೀರಲ್ಲಾ ಎಂದು ಪ್ರಶ್ನಿಸುತ್ತಿದ್ದಾರೆ.

More from Filmibeat

English summary
Sushant Singh girlfriend Rhea Chakraborty Expenses using Sushant Finance in last 11 months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X