For Quick Alerts
  ALLOW NOTIFICATIONS  
  For Daily Alerts

  ಮತ್ತೊಬ್ಬ ಪ್ರೀತಿ ಪಾತ್ರರನ್ನು ಕಳೆದುಕೊಂಡ ನಟಿ ರಿಯಾ ಚಕ್ರವರ್ತಿ

  |

  ನಟಿ ರಿಯಾ ಚಕ್ರವರ್ತಿ ಕಳೆದ ವರ್ಷ ಅತಿ ಹೆಚ್ಚು ಸುದ್ದಿಯಲ್ಲಿದ್ದ ನಟಿ. ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಹೆಸರು ಅತಿಯಾಗಿ ಕೇಳಿಬಂದಿತ್ತು. ಆ ನಂತರ ಹೊರಬಂದ ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾರನ್ನು ಬಂಧಿಸಲಾಗಿತ್ತು.

  ಸುಶಾಂತ್ ಸಿಂಗ್ ರಜಪೂತ್‌ರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಈಗಾಗಲೇ ಸುಶಾಂತ್ ಸಿಂಗ್ ಅನ್ನು ಕಳೆದುಕೊಂಡಿದ್ದಾರೆ. ಇದೀಗ ಮತ್ತೊಬ್ಬ ಪ್ರೀತಿ ಪಾತ್ರರನ್ನೂ ಕಳೆದುಕೊಂಡಿದ್ದಾರೆ ರಿಯಾ.

  ರಿಯಾ ಚಕ್ರವರ್ತಿ ಅವರ ಚಿಕ್ಕಪ್ಪ ಕೋವಿಡ್‌ನಿಂದಾಗಿ ನಿಧನ ಹೊಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ರಿಯಾ ಚಕ್ರವರ್ತಿ, 'ನನ್ನ ಚಿಕ್ಕಪ್ಪ ನಿಜ ಜೀವನದಲ್ಲಿ ಹೀರೋ ಆಗಿದ್ದರು. ಕೋವಿಡ್‌ಗೆ ತುತ್ತಾಗಿದ್ದ ಅವರು ಮೇ 1 ರಂದು ಕೊನೆ ಉಸಿರೆಳೆದಿದ್ದಾರೆ. ಕೋವಿಡ್‌ಗೆ ಒಳ್ಳೆಯವರು, ಕೆಟ್ಟವರೆಂಬ ಬೇಧವಿಲ್ಲ' ಎಂದಿದ್ದಾರೆ.

  ರಿಯಾ ಚಕ್ರವರ್ತಿ ಚಿಕ್ಕಪ್ಪ ಕರ್ನಲ್ ಎಸ್.ಸುರೇಶ್ ಕುಮಾರ್ ಮಾಜಿ ಸೈನ್ಯಾಧಿಕಾರಿ ಆಗಿದ್ದರು. ಜೊತೆಗೆ ಅವರೊಬ್ಬ ಮೂಳೆ ವೈದ್ಯರು ಸಹ ಆಗಿದ್ದರು. ಹಲವು ವರ್ಷಗಳ ಕಾಲ ಸೇನೆಯಲ್ಲಿ ಅವರು ಸೇವೆ ಸಲ್ಲಿಸಿದ್ದರು. 'ಕೋವಿಡ್‌ ನಿಮ್ಮನ್ನು ಕರೆದುಕೊಂಡು ಹೋಗಿರಬಹುದು ನಿಮ್ಮ ನೆನಪು ಸದಾ ಇರಲಿದೆ. ನೀವೊಬ್ಬ ಅದ್ಭುತ ಮನುಷ್ಯರಾಗಿದ್ದಿರಿ' ಎಂದು ರಿಯಾ ಚಕ್ರವರ್ತಿ ಬರೆದುಕೊಂಡಿದ್ದಾರೆ.

  ಚಿಕ್ಕಪ್ಪನ ಸಾವಿನ ವಿಷಯ ಹಂಚಿಕೊಳ್ಳುವ ಜೊತೆಗೆ ಅಭಿಮಾನಿಗಳಿಗೆ ಸಂದೇಶ ನೀಡಿರುವ ರಿಯಾ ಚಕ್ರವರ್ತಿ, 'ಎಲ್ಲರೂ ಮನೆಯಲ್ಲಿರಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿ ಕೊರೊನಾ ಅನ್ನು ಹೋಗಲಾಡಿಸಲು ಅದೊಂದೆ ಅಸ್ತ್ರ' ಎಂದಿದ್ದಾರೆ ರಿಯಾ.

  ಸುಶಾಂತ್ ಸಾವಿನ ನಂತರ ಹಲವಾರು ಆಪಾದನೆಗಳು, ನಿಂದನೆ, ಜೈಲು ವಾಸ ಅನುಭವಿಸಿದ್ದ ರಿಯಾ ಚಕ್ರವರ್ತಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆರಂಭದ ಹಲವು ದಿನ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ನಟಿ ರಿಯಾ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು ಇತರೆ ಸೇವಾಕರ್ತರಿಗೆ ನಮಿಸಿದ್ದರು ರಿಯಾ.

  ಶಂಖನಾದ ಅರವಿಂದ್ ಸಾವಿಗೆ ಭಾವುಕರಾದ ಪುನೀತ್ ರಾಜಕುಮಾರ್ | Filmibeat Kannada

  ರಿಯಾ ಚಕ್ರವರ್ತಿ ಅವರು ಸುಶಾಂತ್ ಸಿಂಗ್ ಪ್ರಿಯತಮೆ ಆಗಿದ್ದರು. ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ರಿಯಾ ಹೆಸರು ಗಟ್ಟಿಯಾಗಿ ಕೇಳಿಬಂದಿತ್ತು. ಹಲವು ಮಾಧ್ಯಮಗಳು ರಿಯಾ ಅವರೇ ಸುಶಾಂತ್ ಸಾವಿಗೆ ಕಾರಣ ಎಂದು ನೇರ ಆರೋಪ ಮಾಡಿದ್ದವು. ಸುಶಾಂತ್ ಸಿಂಗ್ ಸಾವಿನ ನಂತರ ಹೊರಬಿದ್ದ ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಅವರನ್ನು ಎನ್‌ಸಿಬಿಯು ಬಂಧಿಸಿ ಜೈಲಿಗೆ ಅಟ್ಟಿತು. ಒಂದು ತಿಂಗಳು ಜೈಲಿನಲ್ಲಿದ್ದ ರಿಯಾ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.

  English summary
  Actress Rhea Chakraborty lost her uncle col S Suresh Kumar. He died due to coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X