For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ತೆಗೆದುಕೊಳ್ಳಲು ಸೂಚಿಸಿದ್ದು ಸಾರಾ: ಸೈಫ್ ಮಗಳ ವಿರುದ್ಧ ರಿಯಾ ಗಂಭೀರ ಆರೋಪ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್‌ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಹೊಂದಿ ಒಂದು ವರ್ಷ ಸಮೀಪಿಸುತ್ತಿದೆ. ಇನ್ನೂ ಕೂಡ ಸುಶಾಂತ್ ಸಾವಿನ ಹಿಂದಿನ ರಹಸ್ಯ ಬಯಲಾಗಿಲ್ಲ. ಸುಶಾಂತ್ ಸಾವು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು.

  ಸುಶಾಂತ್ ಸಾವು ಡ್ರಗ್ಸ್ ಜಾಲದ ನಂಟು ದೇಶದಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿತ್ತು. ಡ್ರಗ್ಸ್ ಜಾಲದ ಹಿಂದೆ ಬಿದ್ದಿದ್ದ ಎನ್ ಸಿ ಬಿ ಬಾಲಿವುಡ್ ನ ಅನೇಕರನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಇನ್ನೂ ಕೂಡ ಸುಶಾಂತ್ ಸಾವಿನ ಅಂತಿಮ ವರದಿ ಬಂದಿಲ್ಲ. ವಿಚಾರಣೆ ಇನ್ನೂ ಮುಂದುವರೆದಿದ್ದು, ಇತ್ತೀಚಿಗಷ್ಟೆ ಸುಶಾಂತ್ ಫ್ಲಾಟ್ ಮೇಟ್ ಸಿದ್ಧಾರ್ಥ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  ಮೋಸ್ಟ್ ಡಿಸೈರೆಬಲ್ ವುಮನ್: ರಿಯಾ ಚಕ್ರವರ್ತಿ ಮುಂದೆ ಸ್ಟಾರ್ ನಟಿಯರು ಠುಸ್ಮೋಸ್ಟ್ ಡಿಸೈರೆಬಲ್ ವುಮನ್: ರಿಯಾ ಚಕ್ರವರ್ತಿ ಮುಂದೆ ಸ್ಟಾರ್ ನಟಿಯರು ಠುಸ್

  ಇದರ ಬೆನ್ನಲ್ಲೇ ನಟಿ ರಿಯಾ ಚಕ್ರವರ್ತಿ ಎನ್ ಸಿ ಬಿ ವಿಚಾರಣೆ ವೇಳೆ ಸೈಫ್ ಅಲಿ ಖಾನ್ ಪುತ್ರಿ, ಸಾರಾ ಅಲಿ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಎನ್ ಸಿ ಬಿ ಈಗಾಗಲೇ ಸಾರಾ ಅಲಿ ಖಾನ್ ಅವರನ್ನು ವಿಚಾರಣೆ ನಡೆಸಿತ್ತು.

  ವಿಚಾರಣೆ ವೇಳೆ ಡ್ರಗ್ಸ್ ತೆಗೆದುಕೊಳ್ಳಲು ಸೂಚಿಸಿದ್ದು ಸಾರಾ ಅಲಿ ಎಂದು ರಿಯಾ ಬಾಯ್ಬಿಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಕೇದಾರನಾಥ್ ಚಿತ್ರೀಕರಣ ವೇಳೆ ಸುಶಾಂತ್ ಸಿಂಗ್ ಗಾಂಜಾ ಚಟಕ್ಕೆ ತುತ್ತಾಗಿದ್ದರು ಎಂದು ರಿಯಾ ಹೇಳಿದ್ದಾರಂತೆ. ಮಾದಕವಸ್ತು ತೆಗೆದುಕೊಳ್ಳಲು ಸಾರಾ ಅಲಿ ಖಾನ್ ಅವರೇ ಸುಶಾಂತ್‌ಗೆ ಸೂಚಿಸಿದ್ದು, ಕೇದಾರನಾಥ್ ಶೂಟಿಂಗ್ ಬೆಟ್ಟಗಳಲ್ಲಿ ನಡೆದಿದ್ದು, ಆ ಸಮಯದಲ್ಲಿ ಸಿಬ್ಬಂದಿ ಕೂಡ ಗಾಂಜಾ ಸೇವಿಸಿದ್ದರು ಎಂದು ರಿಯಾ ಎನ್ ಸಿ ಬಿಗೆ ಮಾಹಿತಿ ನೀಡಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

  ಸಾರಾ ಅಲಿ ಖಾನ್, ರಿಯಾಗೂ ಡ್ರಗ್ಸ್ ತೆಗೆದುಕೊಳ್ಳಲು ಸೂಚಿಸಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ನೋವಿಗೆ ಡ್ರಗ್ಸ್ ಉತ್ತಮ ಔಷಧಿ ಎಂದು ಸಾರಾ ಹೇಳಿದ್ದರಂತೆ. ಸಾರಾ ಜೊತೆಗೆ ತಾನು ಕೂಡ ಮಾದಕವಸ್ತು ಪಡೆಯುತ್ತಿದ್ದ ಬಗ್ಗೆ ರಿಯಾ NCB ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

  ಸುಶಾಂತ್, ರಿಯಾ ಚಕ್ರವರ್ತಿ ಜೊತೆ ಪ್ರೀತಿಯಲ್ಲಿ ಬೀಳುವ ಮೊದಲು ಸಾರಾ ಅಲಿ ಖಾನ್ ಜೊತೆ ಕೆಲವು ತಿಂಗಳು ಡೇಟಿಂಗ್ ನಲ್ಲಿದ್ದರು. ಬಳಿಕ ದೂರ ಆದರು ಎನ್ನುವ ಮಾಹಿತಿ ಗುಟ್ಟಾಗಿ ಉಳಿದಿಲ್ಲ. ರಿಯಾ ಹೇಳಿಕೆ ಸಾರಾಗೆ ಮುಳುವಾಗಿತ್ತಾ? ಎನ್ ಸಿ ಬಿ ಸಾರಾರನ್ನು ಅರೆಸ್ಟ್ ಮಾಡುತ್ತಾ ಎಂದು ಕಾದು ನೋಡಬೇಡು.

  ಚಿರು ಸಾವಿಗೆ ಒಂದು ವರ್ಷ, ಅಣ್ಣನಿಗೆ ಪತ್ರ ಬರೆದು ನೋವನ್ನು ಹಂಚಿಕೊಂಡ ಧ್ರುವ | Filmibeat Kannada

  ಅಂದಹಾಗೆ ಸುಶಾಂತ್ ಸಿಂಗ್ 2020, ಜೂನ್ 14ರಂದು ಬಾಂದ್ರಾದ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸುಶಾಂತ್ ಸಾವು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪ್ರಾರಂಭದಲ್ಲಿ ಈ ಪ್ರಕರಣ ತನಿಕೆ ಮುಂಬೈ ಪೊಲೀಸರು ನಡೆಸಿದ್ದು, ಬಳಿಕ ಸಿಬಿಐಗೆ ಹಸ್ತಾಂತರ ಮಾಡಲಾಯಿತು.

  English summary
  Rhea Chakraborty makes shocking allegations on Sara Ali Khan in NCB statement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X