ಸುಶಾಂತ್ ಪ್ರೇಯಸಿಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನಿಗೆ ಮೊರೆ ಸಾಧ್ಯತೆ
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಸುಶಾಂತ್ ತಂದೆ ಕೆಕೆ ಸಿಂಗ್, ಸುಶಾಂತ್ ಪ್ರೇಯಸಿ ರೆಹಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದಾರೆ.
Recommended Video
ದೂರಿನನ್ವಯ ರಿಯಾ ಚಕ್ರವರ್ತಿ ಹಾಗೂ ಅವರ ಕುಟುಂಬದವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಕಳ್ಳತನ ಇನ್ನೂ ಕೆಲವು ಆರೋಪಗಳನ್ನು ಹೇರಿ ಎಫ್‌ಐಆರ್ ಸಹ ದಾಖಲಿಸಲಾಗಿದ್ದು, ರಿಯಾ ಚಕ್ರವರ್ತಿಗೆ ಬಂಧನ ಭೀತಿ ಎದುರಾಗಿದೆ.
ಬಿಹಾರ ಪೊಲೀಸರು ರಿಯಾ ಚಕ್ರವರ್ತಿ ಹಾಗೂ ಕುಟುಂಬ ಸದಸ್ಯರ ವಿರುದ್ಧ ತನಿಖೆ ಕೈಗೊಂಡಿದ್ದು, ಎಫ್‌ಐಆರ್ ಆಧರಿಸಿ ರೆಹಾ ಚಕ್ರವರ್ತಿಯನ್ನು ಬಂಧಿಸುವ ಸಾಧ್ಯತೆಯೂ ಇದೆ. ಇದು ರಿಯಾ ಚಕ್ರವರ್ತಿಗೆ ಭೀತಿ ಉಂಟು ಮಾಡಿದೆ. ರಿಯಾ ಪರ ವಕೀಲರು ಪೊಲೀಸರ ವಿಚಾರಣೆಯನ್ನು ಬಿಹಾರದಿಂದ ಮುಂಬೈಗೆ ವರ್ಗಾಯಿಸುವಂತೆ ಆದೇಶಿಸಲು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಆರೋಗ್ಯ ಸಮಸ್ಯೆಯಿಂದಾಗಿ ತಡವಾಗಿ ದೂರು
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸುಶಾಂತ್ ತಂದೆ ಕೆಕೆ ಸಿಂಗ್, ಆರೋಗ್ಯ ಸಮಸ್ಯೆ ಇದ್ದ ಕಾರಣ ಮುಂಬೈನಲ್ಲಿ ದೂರು ದಾಖಲಿಸಲಾಗಿರಲಿಲ್ಲ. ಹಾಗಾಗಿ ಪಟ್ನಾದಲ್ಲಿ ಈಗ ದೂರು ದಾಖಲಿಸಿದ್ದೇನೆ ಎಂದಿದ್ದಾರೆ. ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈಗಾಗಲೇ ವಕೀಲರನ್ನು ಭೇಟಿಯಾಗಿರುವ ರಿಯಾ
ಮುಂಚೂಣಿಯ ಬಾಲಿವುಡ್ ಸಿನಿಮಾ ಪತ್ರಿಕೆಯೊಂದು ವರದಿ ಮಾಡಿರುವಂತೆ, ರಿಯಾ ಚಕ್ರವರ್ತಿ ಈಗಾಗಲೇ ಆನಂದಿ ಫರ್ನಾಂಡೀಸ್ ಎಂಬ ವಕೀಲರನ್ನು ಭೇಟಿ ಮಾಡಿದ್ದು ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರಂತೆ.

ಹಣ, ಆಭರಣ ಹೊತ್ತೊಯ್ದಿರುವ ರೆಹಾ!?
ಸುಶಾಂತ್ ತಂದೆ, ರೆಹಾ ಮೇಲೆ ಸರಣಿ ಆರೋಪಗಳನ್ನು ಮಾಡಿದ್ದು, ರೆಹಾ ಜೂನ್ 8 ರಂದು ಸಾಕಷ್ಟು ಆಭರಣ, ಹಣ, ಲ್ಯಾಪ್‌ಟಾಪ್, ಸುಶಾಂತ್‌ನ ಆರೋಗ್ಯ ಸಂಬಂಧಿ ದಾಖಲೆಗಳನ್ನು ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದರು. ಸುಶಾಂತ್ ನಂಬರ್ ಅನ್ನು ಸಹ ಬ್ಲಾಕ್ ಮಾಡಿದ್ದರು ಎಂದು ಹೇಳಿದ್ದಾರೆ.

ಹುಚ್ಚನೆಂದು ಸಾಬೀತು ಮಾಡುವುದಾಗಿ ಬೆದರಿಕೆ
ಸುಶಾಂತ್‌ನ ಮೆಡಿಕಲ್ ದಾಖಲೆಗಳನ್ನು ಬಹಿರಂಗಪಡಿಸಿ ಆತನೊಬ್ಬ ಹುಚ್ಚ ಎಂದು ಸಾಬೀತು ಮಾಡುವುದಾಗಿ ಬೆದರಿಕೆ ಹಾಕಿದ್ದ ರಿಯಾ, ಸುಶಾಂತ್‌ನ ನಂಬಿಕಸ್ಥ ಕೆಲಸದವರು, ಬಾಡಿಗಾರ್ಡ್ ಅನ್ನು ಕೆಲಸದಿಂದ ತೆಗೆದಿದ್ದರು. ಸುಶಾಂತ್‌ಗೆ ಯಾವುದೇ ಸಿನಿಮಾ ಒಪ್ಪಿಕೊಳ್ಳಲು ಬಿಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.


Click it and Unblock the Notifications











