ಅಮಿತಾಬ್ ಮತ್ತು ಇಮ್ರಾನ್ ಹಶ್ಮಿ ನಟನೆಯ 'ಚೆಹ್ರೆ' ಪೋಸ್ಟರ್ ನಲ್ಲಿ ರಿಯಾ ಚಕ್ರವರ್ತಿ ಮಿಸ್ಸಿಂಗ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ನಟನೆಯ ಚೆಹ್ರೆ ಸಿನಿಮಾದ ಪ್ರಮೋಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಇತ್ತೀಚಿಗಷ್ಟೆ ಸಿನಿಮಾದಿಂದ ಪೋಸ್ಟರ್ ರಿಲೀಸ್ ಆಗಿದ್ದು, ಈ ಪೋಸ್ಟರ್ ಈಗ ಚರ್ಚೆಗೆ ಕಾರಣವಾಗಿದೆ.

ಚೆಹ್ರೆ ಪೋಸ್ಟರ್ ನಲ್ಲಿ ನಟಿ ರಿಯಾ ಚಕ್ರವರ್ತಿ ಮಿಸ್ಸಿಂಗ್ ಆಗಿದ್ದಾರೆ. ರೂಮಿ ಜಾಫ್ರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೆಹ್ರೆ ಸಿನಿಮಾದಲ್ಲಿ ನಟಿ ರಿಯಾ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಆದರೆ ಇತ್ತೀಚಿಗೆ ರಿಲೀಸ್ ಆದ ಪೋಸ್ಟರ್ ನಲ್ಲಿ ರಿಯಾ ನಾಪತ್ತೆ ಆಗಿರುವುದು ಕುತೂಹಲ ಕಾರಣವಾಗಿದೆ.

ಅಂದಹಾಗೆ ರಿಯಾ, ಬಾಯ್ ಫ್ರೆಂಡ್ ಸುಶಾಂತ್ ಸಿಂಗ್ ಸಿಂಗ್ ಸಾವಿಗೀಡಾಗುವ ಮೊದಲು ಚೆಹ್ರೆ ಸಿನಿಮಾ ಪೋಸ್ಟರ್ ಹಂಚಿಕೊಂಡಿದ್ದರು. ಬಳಿಕ ಸುಶಾಂತ್ ಆತ್ಮಹತ್ಯೆ ರಿಯಾ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಡ್ರಗ್ ಮಾಫಿಯಾ ವಿಚಾರವಾಗಿ ಜೈಲು ವಾಸ ಅನುಭವಿಸಿ ಹೊರಬಂದ ಬಳಿಕ ರಿಯಾ ಸಿನಿಮಾದ ಬಗ್ಗೆ ಎಲ್ಲೂ ಮಾತನಾಡಿಲ್ಲ.

Rhea Chakraborty missing From Chehre poster

ಆದರೆ ಈ ಬಗ್ಗೆ ರಿಯಾ ಚಕ್ರವರ್ತಿ ಸ್ನೇಹಿತೆ ಆಂಗ್ಲ ಪೋರ್ಟಲ್ ಗೆ ಪ್ರತಿಕ್ರಿಯೆ ನೀಡಿದ್ದು, ರಿಯಾ ಮಿಸ್ ಆಗಿರುವುದು ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ. 2020 ಕಳೆದ ಬಳಿಕ ರಿಯಾ ಮತ್ತೆ ತನ್ನ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಾಲಿವುಡ್ ಅವಳನ್ನು ಸ್ವಾಗತಿಸುತ್ತಿಲ್ಲ' ಎಂದು ಹೇಳಿದ್ದಾರೆ.

ಬಾಲಿವುಡ್ ಅವಳನ್ನು ತಿರಸ್ಕರಿಸಿದೆ ಅವಳಿಗೆ ಎಲ್ಲಾ ಬಾಗಿಲು ಮುಚ್ಚಿದೆ ಅಂತಲ್ಲ. ಕಳೆದ ವರ್ಷದಿಂದ ಅನೇಕ ಅಡೆತಡೆಗಳನ್ನು ಎದುರಿಸಿ ಬಂದಿದ್ದಾಳೆ. ಇದರ ವಿರುದ್ಧವು ಹೋರಾಡುತ್ತಾಳೆ' ಎಂದು ಹೇಳಿದ್ದಾರೆ.

Rhea Chakraborty missing From Chehre poster

ಸದ್ಯ ಪೋಸ್ಟರ್ ನಲ್ಲಿ ರಿಯಾ ಕಾಣೆಯಾಗಿರುವುದರಿಂದ ಸಿನಿಮಾದಿಂದ ರಿಯಾ ಅವರನ್ನು ಹೊರಗಿಡಲಾಗಿದೆಯಾ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಸಿನಿಮಾತಂಡ ಯಾವುದೇ ಸ್ಪಷ್ಟನೆ ನೀಡಿಲ್ಲ. ರಿಯಾ ಚಕ್ರವರ್ತಿಯನ್ನು ಬಾಲಿವುಡ್ ಮತ್ತೆ ಸ್ವೀಕಾರ ಮಾಡುತ್ತಾ? ಮತ್ತೆ ಬಾಲಿವುಡ್ ನಲ್ಲಿ ರಿಯಾ ಬ್ಯುಸಿಯಾಗುತ್ತಾರಾ ಎಂದು ಕಾದು ನೋಡಬೇಕು.

ಚೆಹ್ರೆ ಥ್ರಿಲ್ಲರ್ ಸಿನಿಮಾವಾಗಿದ್ದು, ಬಾಲಿವುಡ್ ನ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ ಏಪ್ರಿಲ್ 30ಕ್ಕೆ ತೆರೆಗೆ ಬರುತ್ತಿದೆ.

More from Filmibeat

English summary
Sushant Singh girlfriend Rhea Chakraborty missing From Chehre poster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X