FIR ದಾಖಲಾದ ಬಳಿಕ ನಾಪತ್ತೆಯಾದ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ
ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೆ ಬಾಲಿವುಡ್ ನಲ್ಲಿ ಸಾಕಷ್ಟು ಮಂದಿಯ ವಿಚಾರಣೆ ನಡೆಸಲಾಗಿದೆ. ಈ ನಡುವೆ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ದೂರ ದಾಖಲಾಗಿದೆ. ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್ ಪಾಟ್ನಾದ ರಾಜೀವ್ ನಗರ ಪೊಲೀಸ್ ಸ್ಟೇಷನ್ ನಲ್ಲಿ ರಿಯಾ ವಿರುದ್ಧ ದೂರು ನೀಡಿದ್ದು, ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕೆಕೆ ಸಿಂಗ್ ದೂರು ನೀಡಿದ ಬಳಿಕ ರಿಯಾ ಕ್ರಿಮಿನಲ್ ಲಾಯರ್ ಮೊರೆ ಹೋಗಿದ್ದಾರೆ. ಪಾಟ್ನಾದಿಂದ ಪ್ರಕರಣವನ್ನು ಮುಂಬೈಗೆ ವರ್ಗಾವಣೆ ಮಾಡುವಂತೆ ಕೋರಿ ಸುಪ್ರಿಂಗೆ ಅರ್ಜಿ ಸಲ್ಲಿಸಿದ್ದಾರೆ.
ಈ ನಡುವೆ ರಿಯಾ ಚಕ್ರವರ್ತಿ ತನ್ನ ಮುಂಬೈ ನಿವಾಸದಿಂದ ಕಾಣೆಯಾಗಿದ್ದಾರಂತೆ. ಬಿಹಾರ ಪೊಲೀಸ್ ತಂಡ ರಿಯಾ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿದಾಗ ರಿಯಾ ಮನೆಯಲ್ಲಿ ಇಲ್ಲದಿರುವುದು ತಿಳಿದುಬಂದಿದೆ. ಮುಂಬೈ ಪೊಲೀಸ್ ರಿಯಾ ಅವರಿಗಾಗಿ ಹುಡುಕಾಟ ನಡೆಸುತ್ತಿದೆ. ರಿಯಾ ಮನೆಯಲ್ಲಿ ಇಲ್ಲದ ಕಾರಣ ವಿಚಾರಣೆಗೆ ಲಭ್ಯರಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ರಿಯಾ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ದೂರು ದಾಖಲಾದ ಬಳಿಕ ರಿಯಾ ತನ್ನ ವಕೀಲರನ್ನು ಭೇಟಿಯಾಗಿ ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರಂತೆ. ಜಾಮೀನು ಪಡೆಯಲು ನ್ಯಾಯಾಲದಲ್ಲಿ ಹಾಜರಾಗಬಹುದು ಎಂದು ಹೇಳಲಾಗುತ್ತಿದೆ.


Click it and Unblock the Notifications











