For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಪುಣ್ಯಸ್ಮರಣೆ; 'ದಯವಿಟ್ಟು ನನ್ನ ಬಳಿ ಬಾ..' ಭಾವುಕಳಾದ ಪ್ರೇಯಸಿ ರಿಯಾ

  |

  ಬಾಲಿವುಡ್‌ನ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಅಗಲಿದ ಕಹಿ ಘಟನೆಗೆ ಒಂದು ವರ್ಷ. 2020 ಜೂನ್ 14 ಭಾರತೀಯ ಸಿನಿಮಾರಂಗದ ಪಾಲಿಗೆ ಕರಾಳ ದಿನ. ದೊಡ್ಡ ಕನಸುಗಳೊಂದಿಗೆ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದ ಅದ್ಭುತ ಪ್ರತಿಭೆ ಸುಶಾಂತ್ ಕಳೆದ ವರ್ಷ ಇದೇ ದಿನ ಬಾಂದ್ರಾದ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.

  ಸುಶಾಂತ್ ಹಠಾತ್ ಸಾವು ಕುಟುಂಬಕ್ಕೆ, ಅಭಿಮಾನಿಗಳಿಗೆ ಭಾರತೀಯ ಸಿನಿಮಾರಂಗಕ್ಕೆ ದೊಡ್ಡ ಶಾಕ್ ನೀಡಿತ್ತು. ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಅನುಮಾನಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಒಂದು ವರ್ಷವಾದರೂ ಸುಶಾಂತ್ ಸಾವಿನ ಹಿಂದಿನ ರಹಸ್ಯದ ಕಾರಣ ಬಹಿರಂಗವಾಗಿಲ್ಲ.

  ಸುಶಾಂತ್ ನಿಧನ ಹೊಂದಿ ವರ್ಷದ ತುಂಬಿದ ಈ ದಿನ ನೆಚ್ಚಿನ ನಟನನ್ನು ನೆನೆದು ಭಾವುಕರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಫೋಟೋ ಶೇರ್ ಮಾಡಿ ಭಾವುಕ ಸಂದೇಶ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಕೂಡ ಎಮೋಷನಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ಮುಂದೆ ಓದಿ..

  ನಿನ್ನನ್ನು ಎಲ್ಲಾ ಕಡೆ ಹುಡುಕುತ್ತಿದ್ದೀನಿ; ರಿಯಾ

  ನಿನ್ನನ್ನು ಎಲ್ಲಾ ಕಡೆ ಹುಡುಕುತ್ತಿದ್ದೀನಿ; ರಿಯಾ

  'ನೀನು ಇನ್ಮುಂದೆ ಇಲ್ಲ ಎಂದು ನಾನು ನಂಬುವ ಒಂದು ಕ್ಷಣವೂ ಇಲ್ಲ. ಸಮಯವೂ ಸರಿಪಡಿಸುತ್ತೆ ಎಂದು ಅವರು ಹೇಳುತ್ತಾರೆ. ಆದರೆ ನೀನೆ ನನ್ನ ಸಮಯ ಮತ್ತು ಎಲ್ಲವೂ. ನನಗೆ ಗೊತ್ತು ನೀನೆ ನನ್ನನ್ನು ಕಾಯುವ ರಕ್ಷಕ. ನೀನು ಚಂದ್ರನಿಂದ ನಿನ್ನ ದೂರದರ್ಶಕದಿಂದ ನನ್ನನ್ನು ನೋಡುತ್ತಿರುತ್ತೀಯಾ ಮತ್ತು ರಕ್ಷಿಸುತ್ತೀಯ. ನನ್ನನ್ನು ಕರೆದುಕೊಂಡು ಹೋಗುತ್ತೀಯ ಎಂದು ಪ್ರತಿದಿನ ಕಾಯುತ್ತಿದ್ದೇನೆ. ನಾನು ನಿನ್ನನ್ನು ಎಲ್ಲಾ ಕಡೆ ಹುಡುಕುತ್ತಿದ್ದೇನೆ. ನೀನು ನನ್ನೊಂದಿಗೆ ಇಲ್ಲೇ ಇದ್ದೀಯಾ ಎಂದು ನನಗೆ ತಿಳಿಸಿದೆ' ಎಂದು ಬರೆದುಕೊಂಡಿದ್ದಾರೆ.

  ದಯವಿಟ್ಟು ನನ್ನ ಬಳಿ ಬಾ; ರಿಯಾ

  ದಯವಿಟ್ಟು ನನ್ನ ಬಳಿ ಬಾ; ರಿಯಾ

  'ನೀನು ಇಲ್ಲದೆ ಜೀವನವೇ ಇಲ್ಲ. ಇದರ ಅರ್ಥವನ್ನು ನೀನೆ ತೆಗೆದುಕೊಂಡಿದ್ದೀರಿ. ನೀನು ಇಲ್ಲದೆ ನಾನು ಇನ್ನೂ ನಿಂತಿದ್ದೇನೆ. ನನ್ನ ಪ್ರೀತಿಯ ಹುಡುಗ, ನಾನು ನಿನಗೆ ಪ್ರತಿದಿನ ಮಲ್ಪುವಾ ಕೊಡುವುದಾಗಿ ಪ್ರಮಾಣ ಮಾಡುತ್ತೇನೆ. ದಯವಿಟ್ಟು ನನ್ನ ಬಳಿ ಬಾ. ಮಿಸ್ ಯು ನನ್ನ ಉತ್ತಮ ಸ್ನೇಹಿತ, ಬೆಬು.' ಎಂದು ದೀರ್ಘವಾಗಿ ಬರೆದಿದ್ದಾರೆ. ಜೊತೆಗೆ ಸುಶಾಂತ್ ಜೊತೆ ಇರುವ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ.

  ಸುಶಾಂತ್ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದ ರಿಯಾ

  ಸುಶಾಂತ್ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದ ರಿಯಾ

  ಸುಶಾಂತ್ ಸಿಂಗ್ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದ ರಿಯಾ ಗೆಳೆಯನ ಸಾವಿಗೂ ಎರಡು ದಿನಗಳ ಮುಂದೆ ಮನೆಯಿಂದ ಹೊರನಡೆದಿದ್ದರು. ಕಿತ್ತಾಡಿಕೊಂಡು ಹೊರಟು ಹೋಗಿದ್ದರು ಎನ್ನುವ ಮಾತು ಕೇಳಿಬರುತ್ತಿದೆ. ಸುಶಾಂತ್ ಸಾವಿಗೆ ಕಾರಣರಾದವರಲ್ಲಿ ರಿಯಾ ಕೂಡ ಒಬ್ಬರು ಎಂದು ಹೇಳಲಾಗುತ್ತಿದೆ. ಆದರೆ ಸತ್ಯಾಸತ್ಯತೆ ನಿಖೆಲ ಬಳಿಕವೇ ಬಹಿರಂಗವಾಗಲಿದೆ.

  ಇಂತಹ ** ಮಕ್ಕಳಿಗೆ ಯಾಕ್ ಸಹಾಯ ಮಾಡ್ಬೇಕು ಅಂತ ಬೈದಿದ್ರು | Filmibeat Kannada
  ಅಂತಿಮ ವರದಿಗೆ ಕಾಯುತ್ತಿರುವ ಅಭಿಮಾನಿಗಳು

  ಅಂತಿಮ ವರದಿಗೆ ಕಾಯುತ್ತಿರುವ ಅಭಿಮಾನಿಗಳು

  ಡ್ರಗ್ಸ್ ಪ್ರಕರಣ ತನಿಖೆ ವೇಳೆ ರಿಯಾ ಚಕ್ರವರ್ತಿ ಸೇರಿದಂತೆ ಅನೇಕರು ಜೈಲು ಸೇರಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಸದ್ಯ ಸುಶಾಂತ್ ಸಾವಿನ ಪ್ರಕರಣ ಸಿಬಿಐ ಅಂಗಳದಲ್ಲಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಸಿಬಿಐ ಸಲ್ಲಿಸುವ ಅಂತಿಮ ವರದಿಗೆ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ.

  English summary
  Rhea Chakraborty pens emotional note for her bebu Sushant Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X