ಅಮಿತ್ ಶಾ ಗೆ ಕೈಮುಗಿದು ಮನವಿ ಮಾಡಿದ ಸುಶಾಂತ್ ಸಿಂಗ್ ಪ್ರೇಯಸಿ
ಸುಶಾಂತ್ ಸಿಂಗ್ ಅವರ ಸಾವಿನ ನಂತರ ಸುಶಾಂತ್ ಪ್ರೇಯಸಿ ರೆಹಾ ಚಕ್ರವರ್ತಿ ಮೇಲೆ ನೆಟ್ಟಿಗರು ಅಕ್ಷರ ದಾಳಿ ನಡೆಸಿದ್ದರು.
Recommended Video
ಸುಶಾಂತ್ ಸಿಂಗ್ ಅಕಾಲಿಕ ಮರಣದಿಂದ ಘಾಸಿಗೊಳಗಾಗಿದ್ದ ಅವರು ಇತ್ತೀಚೆಗೆ ಸುಶಾಂತ್ ಸಿಂಗ್ ಬಗ್ಗೆ ಭಾವನಾತ್ಮಕ ಪೋಸ್ಟ್ ಒಂದನ್ನು ಹಾಕಿದ್ದರು. ಆಗಿನಿಂದಲೂ ಅವರ ಮೇಲೆ ದಾಳಿ ಹೆಚ್ಚಾಗಿದ್ದು, ಕೊಲೆ ಬೆದರಿಕೆ, ಅತ್ಯಾಚಾರ ಬೆದರಿಕೆ ಹೆಚ್ಚಾಗುತ್ತಲೇ ಇವೆ.
ಆದರೆ ಇದೆಲ್ಲದರ ಬಗ್ಗೆ ಮೌನ ಮುರಿದಿರುವ ನಟಿ ರೆಹಾ ಚಕ್ರವರ್ತಿ ಅಂತಿಮವಾಗಿ ತಮ್ಮ ವಿರುದ್ಧ ಅಕ್ಷರ ದಾಳಿ ನಡೆಸಿದ ನೆಟ್ಟಿಗರ ವಿರುದ್ಧ ಕ್ರಮಕ್ಕೆ ನಿಂತಿದ್ದಾರೆ. ಅಷ್ಟೆ ಅಲ್ಲದೆ ನೇರವಾಗಿ ಗೃಹ ಸಚಿವರ ಅಮಿತ್ ಶಾ ಅವರ ಬಳಿ ಸಹಾಯ ಕೇಳಿದ್ದಾರೆ ರೆಹಾ.

ನಾನು ಸುಶಾಂತ್ ಸಿಂಗ್ ಪ್ರೇಯಸಿ ಎಂದ ರೆಹಾ
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಗೆ ಟ್ವೀಟ್ ಮಾಡಿರುವ ರೆಹಾ ಚಕ್ರವರ್ತಿ, 'ನಾನು ಸುಶಾಂತ್ ಸಿಂಗ್ ಅವರ ಪ್ರೇಯಸಿ' ಎಂದೇ ಪರಿಚಯ ಮಾಡಿಕೊಂಡಿದ್ದಾರೆ. ಮುಂದುವರೆದು, ಸುಶಾಂತ್ ಸಿಂಗ್ ಅಕಾಲಿಕ ಮರಣಕ್ಕೆ ತುತ್ತಾಗಿ ಒಂದು ತಿಂಗಳಾಗಿದೆ ಎಂದು ಹೇಳಿದ್ದಾರೆ.

ಅಮಿತ್ ಶಾ ಗೆ ಕೈಮುಗಿದ ರೆಹಾ ಚಕ್ರವರ್ತಿ
ನನಗೆ ನಮ್ಮ ನ್ಯಾಯಾಂಗ ಮತ್ತು ಸರ್ಕಾರದ ಮೇಲೆ ಪೂರ್ಣ ವಿಶ್ವಾಸವಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನು ಸಿಬಿಐ ಗೆ ವಹಿಸಿ ಎಂದು ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ರೆಹಾ, ಅಮಿತ್ ಶಾ ಬಳಿ ಮನವಿ ಮಾಡಿದ್ದಾರೆ.

'ಸುಶಾಂತ್ ಸಾವಿಗೆ ಕಾರಣ ತಿಳಿದುಕೊಳ್ಳಬೇಕಿದೆ'
'ಯಾವ ಒತ್ತಡ ಸುಶಾಂತ್ ಸಿಂಗ್ ಇಂಥಹಾ ಒಂದು ನಿರ್ಧಾರ (ಆತ್ಮಹತ್ಯೆ) ಮಾಡಿಕೊಳ್ಳುವಂತೆ ಪ್ರೇರೇಪಿಸಿತು ಎಂದು ನಾನೂ ಸಹ ತಿಳಿದುಕೊಳ್ಳಲೇ ಬೇಕಿದೆ' ಎಂದು ರೆಹಾ ಚಕ್ರೊವರ್ತಿ ಅಮಿತ್ ಶಾ ಬಳಿ ಮನವಿ ಮಾಡಿದ್ದಾರೆ. ಕೊನೆಯಲ್ಲಿ 'ಸತ್ಯಮೇವ ಜಯತೆ' ಎಂದು ಬರೆದಿದ್ದಾರೆ.

ಸೈಬರ್ ಪೊಲೀಸರಿಗೆ ದೂರು
ರೆಹಾ ಅವರು ತಮಗೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಅತ್ಯಾಚಾರ ಬೆದರಿಕೆ, ಕೊಲೆ ಬೆದರಿಕೆಗಳ ವಿರುದ್ಧ ಗಟ್ಟಿ ದನಿ ಎತ್ತಿದ್ದು, ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿ ದೂರು ನೀಡುವುದಾಗಿ ಹೇಳಿದ್ದಾರೆ. ಬೆದರಿಕೆಯ ಕೆಲವು ಸ್ಕ್ರೀನ್ ಶಾಟ್‌ಗಳನ್ನು ಸಹ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











