''ನಾನು ಜೈಲಿನಲ್ಲಿ ಕೊಳೆಯುತ್ತಿದ್ದಾಗ ನನ್ನ ತಂದೆ ನನ್ನ ಸ್ನೇಹಿತೆಯರ ಜೊತೆ ಪಾರ್ಟಿ ಮಾಡುತ್ತಿದ್ದರು'' ಎಂದ ಖ್ಯಾತ ನಟಿ..!

ಬದುಕಿ ಬಾಳಬೇಕಿದ್ದ ಸುಶಾಂತ್ ಸಿಂಗ್ ರಜಪೂತ್ ನೇಣಿಗೆ ಕೊರಳೊಡ್ಡಿದ ನಂತರ ಮುನ್ನೆಲೆಗೆ ಬಂದವರು ರಿಯಾ ಚಕ್ರವರ್ತಿ. ಸುಶಾಂತ್ ಸಿಂಗ್ ರಜಪೂತ್ ಹಣದಲ್ಲಿ ಮೋಜು ಮಸ್ತಿ ಮಾಡುವುದಲ್ಲದೇ ಯುವ ನಾಯಕನನ್ನು ಮಾದಕ ವ್ಯಸನಿಯನ್ನಾಗಿಸಿದ ಅಪವಾದ ಹೊತ್ತು ಜೈಲು ಪಾಲಾದ ರಿಯಾ 28 ದಿನ ಬೈಕುಲ್ಲಾ ಜೈಲಿನಲ್ಲಿ ನರಕಯಾತನೆಯನ್ನು ಅನುಭವಿಸಿದರು.

ಇನ್ನೂ ಈ ಪ್ರಕರಣದಿಂದ ಮಾನಸಿಕ ಆಘಾತಕ್ಕೊಳಗಾಗಿದ್ದ ರಿಹಾ, ಕೆಲ ದಿನ ಖಿನ್ನತೆಗೆ ಜಾರಿದ್ದರು. ಇದರ ನಡುವೆ ಚಿತ್ರರಂಗದಲ್ಲಿ ಅವಕಾಶಗಳಿಂದ ಕೂಡ ವಂಚಿತರಾದರು. ಸದ್ಯಕ್ಕೆ ರಿಯಾ ಚಾಪ್ಟರ್ 2 ಎಂಬ ಪಾಡ್ ಕಾಸ್ಟ್ ನಡೆಸಿಕೊಡುತ್ತಿದ್ದಾರೆ. ಬಾಲಿವುಡ್‌ನ ಸ್ಟಾರ್‌ಗಳ ಮನದ ಮಾತುಗಳನ್ನೂ ತಮ್ಮ ಈ ಕಾರ್ಯಕ್ರಮದ ಮೂಲಕ ಅವರ ಅವರ ಅಭಿಮಾನಿಗಳಿಗೆ ತಲುಪಿಸುವ ಕೆಲಸವನ್ನು ಈ ಮೂಲಕ ಮಾಡುತ್ತಿದ್ಧಾರೆ.

Rhea Chakraborty revealed that some of her friends drank with her father while she was in jail

ಇಂಥಾ ರಿಯಾ ಚಕ್ರವರ್ತಿ ಸದ್ಯ ತಾವು ಜೈಲಿನಲ್ಲಿದ್ದ ಆ ಕರಾಳ ದಿನಗಳನ್ನು ಮೆಲುಕು ಹಾಕಿದ್ದಾರೆ. ನಾನು ಜೈಲಿನಲ್ಲಿ ಕಣ್ಣೀರು ಹಾಕುವ ಸಮಯದಲ್ಲಿ ನನ್ನ ತಂದೆ ತಾಯಿ ನನ್ನ ಸ್ನೇಹಿತರ ಜೊತೆ ಮಜಾ ಮಾಡುತ್ತಿದ್ದರು ಎಂದಿದ್ದಾರೆ. ಹೌದು ಹುಮನ್ಸ್ ಆಫ್ ಬಾಂಬೆ ಜೊತೆ ನಡೆದ ಮಾತುಕಥೆಯ ಸಮಯದಲ್ಲಿ ಜೈಲಿನ ಅನುಭವ ಹಂಚಿಕೊಂಡಿರುವ ರಿಯಾ ಚಕ್ರವರ್ತಿ, ಜೈಲಿನಲ್ಲಿದ್ದಾಗ ನಾನು ಖಿನ್ನೆತೆಗೆ ಜಾರಿದ್ದೆ ಎಂದಿದ್ದಾರೆ. ಆ ನಂತರ ನೃತ್ಯ ಮತ್ತು ಯೋಗದಿಂದ ಖಿನ್ನತೆಯ ಸಹಾಯದಿಂದ ಹೊರ ಬಂದೆ ಎಂದಿದ್ಧಾರೆ.

ಇನ್ನೂ ಜೈಲಿನಿಂದ ಬಿಡುಗಡೆಯಾದ ನಂತರ ನಾನು ಮನೆಗೆ ಬಂದಾಗ ನನಗೆ ಆಶ್ಚರ್ಯವಾಯಿತು, ಯಾಕೆಂದರೆ ನನ್ನ ತಂದೆ ಮತ್ತು ತಾಯಿಯ ತೂಕ ಚಿಂತೆಯಿಂದ ಕಡಿಮೆಯಾಗಿರಲಿಲ್ಲ ಬದಲಿಗೆ ಇನ್ನೂ ಹೆಚ್ಚಾಗಿತ್ತು ಎಂದಿರುವ ರಿಯಾ, ನಾನು ಜೈಲಿನಲ್ಲಿದ್ದಾಗ ನನ್ನ ಸ್ನೇಹಿತರ ಜೊತೆ ನನ್ನ ತಂದೆ ಎಣ್ಣೆ ಹೊಡೆಯುತ್ತಿದ್ದರು, ಚೆನ್ನಾಗಿ ತಿನ್ನುತ್ತಿದ್ದರು ಎನ್ನುವ ವಿಚಾರ ನನಗೆ ಆ ಮೇಲೆ ಗೊತ್ತಾಯಿತು ಎಂದಿದ್ದಾರೆ. ಈ ವಿಚಾರ ಕೇಳಿ ನಾನು ಅಕ್ಷರಶಃ ಬೆಚ್ಚಿ ಬಿದ್ದಿದೆ ಹೀಗಾಗಿಯೇ ನಾನು ಅಲ್ಲಿ ಜೈಲಿನಲ್ಲಿ ಕೊಳೆಯುತ್ತಿದ್ದೆ ಆದರೆ ನೀವು ಮಾತ್ರ ಇಲ್ಲಿ ನೆಮ್ಮದಿಯಾಗಿ ತಿಂಡಿ ಊಟ ಮಾಡುತ್ತಿದ್ದರಾ, ದಪ್ಪ ಆಗಿದ್ದೀರಾ ಎಂದೆಲ್ಲಾ ನಾನು ರೇಗಿದ್ದೇ ಎಂದಿದ್ಧಾರೆ.

Rhea Chakraborty revealed that some of her friends drank with her father while she was in jail

ಮುಂದುವರೆದು ಮಾತನಾಡಿರುವ ರಿಯಾ ಆದರೆ ಆ ನಂತರ ನನಗೆ ಸತ್ಯ ಗೊತ್ತಾಯಿತು. ನನ್ನ ತಂದೆ-ತಾಯಿಯ ಆರೈಕೆಯನ್ನು ನನ್ನ ಸ್ನೇಹಿತರು ಮಾಡುತ್ತಿದ್ದರು, ಅವರು ಚಿಂತೆ ಮಾಡಬಾರದು, ಆ ಚಿಂತೆಯಲ್ಲಿ ಊಟ ತಿಂಡಿಯೆಲ್ಲ ಮಾಡುವುದನ್ನು ಬಿಟ್ಟು ಸುಮ್ಮನೆ ಕೂರಬಾರದು ಎಂದು ನನ್ನ ಸ್ನೇಹಿತರು ದಿನ ನಿತ್ಯ ನನ್ನ ಮನೆಗೆ ಹೋಗುತ್ತಿದ್ದರು ಎನ್ನುವ ವಿಚಾರ ನನಗೆ ಅರಿವಾಯಿತು ಎಂದಿದ್ದಾರೆ. ಕಷ್ಟಕಾಲದಲ್ಲಿ ಕುಟುಂಬದ ಜೊತೆ ತಮ್ಮ ತಂದೆ ಮತ್ತು ತಾಯಿಯನ್ನು ಚೆನ್ನಾಗಿ ನೋಡಿಕೊಂಡ ತಮ್ಮ ಸ್ನೇಹಿತರಿಗೆ ರಿಯಾ ಚಕ್ರವರ್ತಿ ಧನ್ಯವಾದಗಳನ್ನು ಕೂಡ ಹೇಳಿದ್ದಾರೆ.

More from Filmibeat

Read more about: actress jail bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X