For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ನನ್ನ ಕೈಗೊಂಬೆ ಎಂದಿದ್ದ ರಿಯಾ: ಹಳೆ ವಿಡಿಯೋ ವೈರಲ್

    |

    ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಪ್ರೇಯಸಿ ರಿಯಾ ಕಾರಣವೆಂದು ಆರೋಪಿಸಿ ಸುಶಾಂತ್ ತಂದೆ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ.

    ರಿಯಾ ವಿರುದ್ಧ ದೂರು ದಾಖಲಾದ ಬೆನ್ನಲ್ಲೆ ಸುಶಾಂತ್ ಖಾತೆಯ ಹಣವನ್ನು ರಿಯಾ ಖರ್ಚು ಮಾಡಿದ್ದ ವಿಷಯ. ಸುಶಾಂತ್ ಸಾಯುವ ಕೆಲ ದಿನಗಳ ಹಿಂದಷ್ಟೆ ರಿಯಾ ಸುಶಾಂತ್ ಜೊತೆ ಬ್ರೇಕ್‌ಅಪ್ ಮಾಡಿಕೊಂಡ ವಿಷಯಗಳು ಹೊರಬಂದಿವೆ.

    ಇದೀಗ ರಿಯಾಳ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋದಲ್ಲಿ 'ನನ್ನ ಬಾಯ್‌ಫ್ರೆಂಡ್ ನನ್ನ ಕೈಗೊಂಬೆ, ಆತನನ್ನು ಹೇಗೆ ಬೇಕಾದರೂ ಆಟವಾಡಿಸುತ್ತೇನೆ' ಎಂದು ಹೇಳಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಈ ವಿಡಿಯೋ ಚಿತ್ರೀಕರಿಸಿದ್ದು ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲ.

    'ನನ್ನ ಬಾಯ್‌ಫ್ರೆಂಡ್ ತನ್ನನ್ನು ಗೂಂಡಾ ಎಂದುಕೊಂಡಿದ್ದಾನೆ'

    'ನನ್ನ ಬಾಯ್‌ಫ್ರೆಂಡ್ ತನ್ನನ್ನು ಗೂಂಡಾ ಎಂದುಕೊಂಡಿದ್ದಾನೆ'

    ಕಪ್ಪು ಬಣ್ಣದ ಬಟ್ಟೆ ಧರಿಸಿ ರಿಯಾ ಚೇರ್‌ ಮೇಲೆ ಕುಳಿತು, 'ನನಗೆ ಜನರನ್ನು ಮ್ಯಾನ್ಯುಪಲೇಟ್ (ಅವಕಾಶಕ್ಕೆ ತಕ್ಕಂತೆ ಬಳಸಿಕೊಳ್ಳುವುದು) ಗೊತ್ತು. ನನ್ನ ಬಾಯ್‌ಫ್ರೆಂಡ್ ತಾನೊಬ್ಬ ದೊಡ್ಡ ಡಾನ್ ಎಂದುಕೊಂಡಿದ್ದಾನೆ, ಆದರೆ ನಾನೂ ಅವನನ್ನೂ ಹ್ಯಾಂಡಲ್ ಮಾಡುತ್ತೇನೆ' ಎನ್ನುತ್ತಾರೆ ರಿಯಾ.

    'ರೌಡಿಗಳಿಂದಲೇ ಗೂಂಡಾಗಿರಿ ಮಾಡಿಸುವವಳು ನಾನು'

    'ರೌಡಿಗಳಿಂದಲೇ ಗೂಂಡಾಗಿರಿ ಮಾಡಿಸುವವಳು ನಾನು'

    ನನ್ನ ಬಾಯ್‌ಫ್ರೆಂಡ್ ತಾನೊಬ್ಬ ರೌಡಿ ಎಂದುಕೊಂಡಿದ್ದಾನೆ. ಆದರೆ ನಾನು 'ತಾಯ್' ಇದ್ದಂತೆ. ನಾನು ಅಂಥಹಾ ರೌಡಿಗಳಿಗಳಿಂದ ಗೂಂಡಾಗಿರಿ ಮಾಡಿಸುವ ಛಾತಿ ಉಳ್ಳವಳು. ನನ್ನ ಬಾಯ್‌ಫ್ರೆಂಡ್ ಅನ್ನು ಕರೆಯುತ್ತೇನೆ. ನೋಡು ಆ ನಿರ್ಮಾಪಕನಿಂದ ಹಫ್ತಾ ವಸೂಲಿ ಮಾಡಿಕೊಂಡು ಬಾ ಎಂದು ಕಳಿಸುತ್ತೀನಿ. ಅವನು ಮಾಡಿಕೊಂಡು ಬರುತ್ತಾನೆ' ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ ರಿಯಾ.

    ಯಾವಾಗ ರೆಕಾರ್ಡ್ ಮಾಡಿರುವ ವಿಡಿಯೋ?

    ಯಾವಾಗ ರೆಕಾರ್ಡ್ ಮಾಡಿರುವ ವಿಡಿಯೋ?

    ರಿಯಾ ಅವರ ಈ ವಿಡಿಯೋ ಸುಶಾಂತ್ ಸಾವಿಗೆ ಮುಂಚಿನದ್ದಾ ಅಥವಾ ಸುಶಾಂತ್ ಸಿಂಗ್ ಸಾವಿನ ನಂತರದ್ದಾ ಗೊತ್ತಿಲ್ಲ. ವಿಡಿಯೋದಲ್ಲಿ ಜೋರಾಗಿ ನಗುತ್ತಿರುವ ಧ್ವನಿ ಹಿನ್ನೆಲೆಯಲ್ಲಿ ಕೇಳುತ್ತದೆ. ಆ ಧ್ವನಿ ಸುಶಾಂತ್‌ರದ್ದೇ ಎನ್ನಲಾಗುತ್ತಿದೆ. ವಿಡಿಯೋದ ಕೊನೆಯಲ್ಲಿ ವಿಡಿಯೋ ರೆಕಾರ್ಡ್‌ ಮಾಡಬೇಡ ಎಂದು ರಿಯಾ ಹೇಳುತ್ತಾರೆ ಕೂಡಲೇ ವಿಡಿಯೋ ಬಂದ್ ಆಗುತ್ತದೆ.

    ವೈರಲ್ ವಿಡಿಯೋ ಬಗ್ಗೆ ರಿಯಾ ಪ್ರತಿಕ್ರಿಯೆ

    ವೈರಲ್ ವಿಡಿಯೋ ಬಗ್ಗೆ ರಿಯಾ ಪ್ರತಿಕ್ರಿಯೆ

    ವೈರಲ್ ಆಗಿರುವ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಯಾ, ಅದು ನಾನು ಸ್ಟಾಂಡಪ್ ಕಾಮಿಡಿ ಮಾಡುತ್ತಿರುವ ವಿಡಿಯೋ. ನನಗೆ ಸ್ಟ್ಯಾಂಡ್ ಅಪ್ ಕಾಮಿಡಿ ಇಷ್ಟ. ನಾನು 'ತಾಯ್' ಎಂದಿರುವುದು ಅದು ನಾನೇ ಸ್ಟಾಂಡ್ ಅಪ್‌ ಕಾಮಿಡಿಗೆ ಸೃಷ್ಟಿಸಿರುವ ಪಾತ್ರ ಎಂದಿದ್ದಾರೆ.

    English summary
    Sushant Singh's girlfriend Rhea Chakraborthy's old video viral on social media in which she talking funnily about her boyfriend.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X