Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಶಾಂತ್ ನನ್ನ ಕೈಗೊಂಬೆ ಎಂದಿದ್ದ ರಿಯಾ: ಹಳೆ ವಿಡಿಯೋ ವೈರಲ್
ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಪ್ರೇಯಸಿ ರಿಯಾ ಕಾರಣವೆಂದು ಆರೋಪಿಸಿ ಸುಶಾಂತ್ ತಂದೆ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ರಿಯಾ ವಿರುದ್ಧ ದೂರು ದಾಖಲಾದ ಬೆನ್ನಲ್ಲೆ ಸುಶಾಂತ್ ಖಾತೆಯ ಹಣವನ್ನು ರಿಯಾ ಖರ್ಚು ಮಾಡಿದ್ದ ವಿಷಯ. ಸುಶಾಂತ್ ಸಾಯುವ ಕೆಲ ದಿನಗಳ ಹಿಂದಷ್ಟೆ ರಿಯಾ ಸುಶಾಂತ್ ಜೊತೆ ಬ್ರೇಕ್ಅಪ್ ಮಾಡಿಕೊಂಡ ವಿಷಯಗಳು ಹೊರಬಂದಿವೆ.
ಇದೀಗ ರಿಯಾಳ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋದಲ್ಲಿ 'ನನ್ನ ಬಾಯ್ಫ್ರೆಂಡ್ ನನ್ನ ಕೈಗೊಂಬೆ, ಆತನನ್ನು ಹೇಗೆ ಬೇಕಾದರೂ ಆಟವಾಡಿಸುತ್ತೇನೆ' ಎಂದು ಹೇಳಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಈ ವಿಡಿಯೋ ಚಿತ್ರೀಕರಿಸಿದ್ದು ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲ.
'ನನ್ನ ಬಾಯ್ಫ್ರೆಂಡ್ ತನ್ನನ್ನು ಗೂಂಡಾ ಎಂದುಕೊಂಡಿದ್ದಾನೆ'
ಕಪ್ಪು ಬಣ್ಣದ ಬಟ್ಟೆ ಧರಿಸಿ ರಿಯಾ ಚೇರ್ ಮೇಲೆ ಕುಳಿತು, 'ನನಗೆ ಜನರನ್ನು ಮ್ಯಾನ್ಯುಪಲೇಟ್ (ಅವಕಾಶಕ್ಕೆ ತಕ್ಕಂತೆ ಬಳಸಿಕೊಳ್ಳುವುದು) ಗೊತ್ತು. ನನ್ನ ಬಾಯ್ಫ್ರೆಂಡ್ ತಾನೊಬ್ಬ ದೊಡ್ಡ ಡಾನ್ ಎಂದುಕೊಂಡಿದ್ದಾನೆ, ಆದರೆ ನಾನೂ ಅವನನ್ನೂ ಹ್ಯಾಂಡಲ್ ಮಾಡುತ್ತೇನೆ' ಎನ್ನುತ್ತಾರೆ ರಿಯಾ.
'ರೌಡಿಗಳಿಂದಲೇ ಗೂಂಡಾಗಿರಿ ಮಾಡಿಸುವವಳು ನಾನು'
ನನ್ನ ಬಾಯ್ಫ್ರೆಂಡ್ ತಾನೊಬ್ಬ ರೌಡಿ ಎಂದುಕೊಂಡಿದ್ದಾನೆ. ಆದರೆ ನಾನು 'ತಾಯ್' ಇದ್ದಂತೆ. ನಾನು ಅಂಥಹಾ ರೌಡಿಗಳಿಗಳಿಂದ ಗೂಂಡಾಗಿರಿ ಮಾಡಿಸುವ ಛಾತಿ ಉಳ್ಳವಳು. ನನ್ನ ಬಾಯ್ಫ್ರೆಂಡ್ ಅನ್ನು ಕರೆಯುತ್ತೇನೆ. ನೋಡು ಆ ನಿರ್ಮಾಪಕನಿಂದ ಹಫ್ತಾ ವಸೂಲಿ ಮಾಡಿಕೊಂಡು ಬಾ ಎಂದು ಕಳಿಸುತ್ತೀನಿ. ಅವನು ಮಾಡಿಕೊಂಡು ಬರುತ್ತಾನೆ' ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ ರಿಯಾ.
ಯಾವಾಗ ರೆಕಾರ್ಡ್ ಮಾಡಿರುವ ವಿಡಿಯೋ?
ರಿಯಾ ಅವರ ಈ ವಿಡಿಯೋ ಸುಶಾಂತ್ ಸಾವಿಗೆ ಮುಂಚಿನದ್ದಾ ಅಥವಾ ಸುಶಾಂತ್ ಸಿಂಗ್ ಸಾವಿನ ನಂತರದ್ದಾ ಗೊತ್ತಿಲ್ಲ. ವಿಡಿಯೋದಲ್ಲಿ ಜೋರಾಗಿ ನಗುತ್ತಿರುವ ಧ್ವನಿ ಹಿನ್ನೆಲೆಯಲ್ಲಿ ಕೇಳುತ್ತದೆ. ಆ ಧ್ವನಿ ಸುಶಾಂತ್ರದ್ದೇ ಎನ್ನಲಾಗುತ್ತಿದೆ. ವಿಡಿಯೋದ ಕೊನೆಯಲ್ಲಿ ವಿಡಿಯೋ ರೆಕಾರ್ಡ್ ಮಾಡಬೇಡ ಎಂದು ರಿಯಾ ಹೇಳುತ್ತಾರೆ ಕೂಡಲೇ ವಿಡಿಯೋ ಬಂದ್ ಆಗುತ್ತದೆ.
ವೈರಲ್ ವಿಡಿಯೋ ಬಗ್ಗೆ ರಿಯಾ ಪ್ರತಿಕ್ರಿಯೆ
ವೈರಲ್ ಆಗಿರುವ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಯಾ, ಅದು ನಾನು ಸ್ಟಾಂಡಪ್ ಕಾಮಿಡಿ ಮಾಡುತ್ತಿರುವ ವಿಡಿಯೋ. ನನಗೆ ಸ್ಟ್ಯಾಂಡ್ ಅಪ್ ಕಾಮಿಡಿ ಇಷ್ಟ. ನಾನು 'ತಾಯ್' ಎಂದಿರುವುದು ಅದು ನಾನೇ ಸ್ಟಾಂಡ್ ಅಪ್ ಕಾಮಿಡಿಗೆ ಸೃಷ್ಟಿಸಿರುವ ಪಾತ್ರ ಎಂದಿದ್ದಾರೆ.