Rhea Chakraborty: ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಜೈಲಿನಲ್ಲಿ ಕಳೆದ ದಿನಗಳನ್ನು ನೆನೆದ ನಟಿ ರಿಯಾ ಚಕ್ರವರ್ತಿ
ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿಗೆ ಸಂಬಂಧಿಸಿದಂತೆ ಡ್ರಗ್ಸ್ ಖರೀದಿಸಿದ ಆರೋಪದಲ್ಲಿ ನಟಿ ರಿಯಾ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು. ಮೃತ ಗೆಳೆಯ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ತಾವು ಜೈಲಿನಲ್ಲಿ ಕಳೆದ ದಿನಗಳ ಬಗ್ಗೆ ರಿಯಾ ಮಾತನಾಡಿದ್ದು, ಆ ದಿನಗಳು ನರಕ ಎಂದು ಹೇಳಿದ್ದಾರೆ.
ನಟಿ ರಿಯಾ ಚಕ್ರವರ್ತಿ ರಿಯಾ ಸುಮಾರು ಆರು ವಾರಗಳ ಕಾಲ ಬೈಕುಲ್ಲಾ ಜೈಲಿನಲ್ಲಿದ್ದರು. ಜೂನ್ 14, 2020 ರಂದು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿಗೆ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಕಾರಣ ಎಂದು ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಜೊತೆಗೆ ಕೆಟ್ಟ ಮೀಡಿಯಾ ಟ್ರಯಲ್ ಮತ್ತು ಟ್ರೋಲಿಂಗ್‌ಗೆ ಒಳಗಾಗಿದ್ದರು. ದಿವಂಗತ ನಟನಿಗೆ ಡ್ರಗ್ಸ್ ಖರೀದಿಸಿದ ಆರೋಪದ ಮೇಲೆ ಅವರನ್ನು ಬಂಧಿಸಿ 28 ದಿನಗಳ ಕಾಲ ಬೈಕುಲ್ಲಾ ಜೈಲಿನಲ್ಲಿ ಇರಿಸಲಾಗಿತ್ತು.

ಜೈಲಿನ ದಿನಗಳು ಕೆಟ್ಟ ನರಕ ಎಂದ ನಟಿ ರಿಯಾ ಚಕ್ರವರ್ತಿ
ಭಾರಿ ಟ್ರೋಲ್‌ಗಳನ್ನು ಎದುರಿಸಿದ್ದ ನಟಿ ರಿಯಾ ಚಕ್ರವರ್ತಿ ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಕೆಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಮುಕ್ತವಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಆಕೆ ಜೈಲಿನಲ್ಲಿದ್ದ ವೇಳೆಯ ತಮ್ಮ ಅನುಭವವದ ಬಗ್ಗೆ ಮಾತನಾಡಿದ್ದು, ಅವು ತುಂಬಾ ಹತಾಶೆಯ ಸಮಯ ಮತ್ತು ಅದು 'ಕೆಟ್ಟ ನರಕ' ಎಂದು ಕರೆದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ, ರಿಯಾ ಚಕ್ರವರ್ತಿ ಅವರಿಗೆ ಜೈಲಿನಲ್ಲಿನ ಅನುಭವದ ಬಗ್ಗೆ ಕೇಳಲಾಗಿತ್ತು. ಅದರ ವೀಡಿಯೊವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ, " ನಿಮ್ಮನ್ನು ಸಮಾಜದಿಂದ ಹೊರಹಾಕಿ ಜೈಲಿನಲ್ಲಿ ಇರಿಸಿಲಾಗಿದ್ದು, ನೀವು ಸಮಾಜಕ್ಕೆ ಅನರ್ಹರೆಂದು ಪರಿಗಣಿಸಲ್ಪಟ್ಟಿದ್ದೀರಿ. ಹೀಗಾಗಿಯೇ ಅಲ್ಲಿರುವ ವೇಳೆ ಈ ವ್ಯಕ್ತಿತ್ವ ಅಥವಾ ನಿಮ್ಮ ಬಗ್ಗೆ ನೀವು ಅಂದುಕೊಂಡ ಎಲ್ಲಾ ವಿಷಯಗಳು ಸಂಪೂರ್ಣವಾಗಿ ಮನಸ್ಸಿನಿಂದ ಹೊರಟುಹೋಗುತ್ತವೆ. ನೀವು ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಎಲ್ಲರೂ ನಿರಪರಾಧಿಗಳಾಗಿರುವ ಅಂಡರ್-ಟ್ರಯಲ್ ಜೈಲಿನಲ್ಲಿದ್ದೆ" ಎಂದು ರಿಯಾ ಹೇಳಿದ್ದಾರೆ.

ಜೈಲಿನಲ್ಲಿರುವ ಇತರ ಮಹಿಳೆಯರ ಬಗ್ಗೆ ಮಾತನಾಡಿದ ಅವರು, "ಅವರನ್ನು ನೋಡುವಾಗ ಮತ್ತು ಅವರೊಂದಿಗೆ ಸಂವಹನ ನಡೆಸುವಾಗ, ನಾನು ಆ ಮಹಿಳೆಯರಲ್ಲಿ ಒಂದು ವಿಶಿಷ್ಟ ಪ್ರೀತಿಯನ್ನು ಅನುಭವಿಸಿದೆ. ಅವರು ಸಣ್ಣ ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಂಡವರು. ಒಂದೊಂದು ಕ್ಷಣವನ್ನು ಹೇಗೆ ಆನಂದಿಸಬೇಕು ಎಂದು ಅವರಿಗೆ ತಿಳಿದಿದೆ" ಎಂದು ಹೇಳಿದ್ದಾರೆ.
ತಮ್ಮ ಜೈಲು ಶಿಕ್ಷೆಯನ್ನು 'ಕೆಟ್ಟ ನರಕ' ಎಂದು ಕರೆದ ರಿಯಾ ಚಕ್ರವರ್ತಿ, "ಆ ಸಮಯದಲ್ಲಿ, ನನ್ನ ಜೀವನವು ಕೆಟ್ಟ ನರಕವಾಗಿತ್ತು. ಆದರೆ ಸ್ವರ್ಗ ಅಥವಾ ನರಕವು ನಿಮ್ಮ ತಲೆಯಲ್ಲಿ ನೀವು ಮಾಡಿಕೊಳ್ಳಬಹುದಾದ ಆಯ್ಕೆ. ಆದರೆ, ಅದನ್ನು ಆಯ್ಕೆ ಮಾಡುವುದು ಕಷ್ಟ. ನಿಮ್ಮ ಮನಸ್ಸಿನಲ್ಲಿ ಶಕ್ತಿ ಮತ್ತು ಆಸೆ ಇದ್ದರೆ, ನೀವು ಖಂಡಿತವಾಗಿಯೂ ಮನಸ್ಸಿನೊಂದಿಗೆ ಹೋರಾಡಿ ಗೆಲ್ಲುತ್ತೀರಿ" ಎಂದು ರಿಯಾ ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020 ರಂದು ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿನ ನಂತರ ರಿಯಾ ಚಕ್ರವರ್ತಿ ಅವರನ್ನು ಟಾರ್ಗೆಟ್ ಮಾಡಲಾಗಿತ್ತು. ಟ್ರೋಲ್ ಮತ್ತು ಮಿಡಿಯಾ ಟ್ರಯಲ್ ಅವರನ್ನು ಕಿತ್ತು ತಿಂದಿದ್ದವು. ಸದ್ಯ ಅವರ ಮೇಲಿನ ಪ್ರಕರಣ ಇನ್ನೂ ಉಪನ್ಯಾಯಾಲಯದಲ್ಲಿದೆ. ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ರಿಯಾ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿತ್ತು.


Click it and Unblock the Notifications











