ಸುಶಾಂತ್ ಸಿಂಗ್ ಕುಟುಂಬದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ರಿಯಾ ಚಕ್ರವರ್ತಿ
ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಇದೀಗ ಸುಶಾಂತ್ ಕುಟುಂಬದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ರಿಯಾ ಚಕ್ರವರ್ತಿ, ತನ್ನ ಮಗನಿಗೆ ವಿಷ ಹಾಕುತ್ತಿದ್ದಳು, ಓವರ್ ಡೋಸ್ ಔಷಧಿ ನೀಡುತ್ತಿದ್ದಳು, ಸುಶಾಂತ್ ಸಿಂಗ್ ಹಣವನ್ನು ದೋಚಿಕೊಂಡಿದ್ದಾಳೆ, ಆತ್ಮಹತ್ಯೆಗೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದಾಳೆ, ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾಳೆ, ಎಂದು ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್, ರಿಯಾ ಚಕ್ರವರ್ತಿ ವಿರುದ್ಧ ಆರೋಪ ಮಾಡಿದ್ದರು.
Recommended Video
ಇದೀಗ ರಿಯಾ ಚಕ್ರವರ್ತಿ ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಸುಶಾಂತ್ ಸಿಂಗ್ ಕುಟುಂಬದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತನಿಖಾ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂದು ವರದಿಯಾಗಿದೆ. ಮುಂದೆ ಓದಿ...

ಸುಶಾಂತ್ ಸಿಂಗ್ ಸಹೋದರಿಯ ವಾಟ್ಸಪ್ ಸಂದೇಶ ಬಹಿರಂಗ
ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಖಿನ್ನತೆ ಕಾರಣವೆಂದು ಹೇಳಲಾಗಿತ್ತು. ಆದರೆ ಸುಶಾಂತ್ ಸಿಂಗ್ ಕುಟುಂಬದವರು ಇದನ್ನು ತಳ್ಳಿ ಹಾಕಿದ್ದರು. ಸುಶಾಂತ್ ಸಿಂಗ್ ಗೆ ಯಾವುದೇ ಮಾನಸಿಕ ಸಮಸ್ಯೆ ಇರಲಿಲ್ಲ ಎಂದು ಕುಟುಂಬದವರು ಹೇಳಿದ್ದರು. ಆದರೀಗ ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್ ಮಾಡಿರುವ ಮೆಸೇಜ್ ಅಚ್ಚರಿ ಮೂಡಿಸಿದೆ. ಸುಶಾಂತ್ ಮಾನಸಿಕ ಸಮಸ್ಯೆ ಬಗ್ಗೆ ಕುಟುಂಬಕ್ಕೆ ತಿಳಿದಿತ್ತು ಎನ್ನುವ ವಿಚಾರ ಬಹಿರಂಗವಾಗಿದೆ.

ಸುಶಾಂತ್ ಖಿನ್ನತೆ ಬಗ್ಗೆ ಅವರ ಕುಟುಂಬಕ್ಕೆ ಗೊತ್ತಿತ್ತು
ಪ್ರಿಯಾಂಕಾ ಸಿಂಗ್, ಸುಶಾಂತ್ ಬಳಿ ಮಾತ್ರೆಗಳ ಬಗ್ಗೆ ಚಾಟ್ ಮಾಡಿದ್ದಾರೆ. ಯಾವ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಲ್ಲದೆ, ಒಳ್ಳೆಯ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸುವ ಬಗ್ಗೆಯೂ ಚಾಟ್ ಮಾಡಿದ್ದಾರೆ. ಸುಶಾಂತ್ ಮತ್ತು ಸಹೋದರಿಯ ಚಾಟ್ ಬಹಿರಂಗವಾಗುತ್ತಿದ್ದಂತೆ, ಸುಶಾಂತ್ ಗೆ ಖಿನ್ನತೆ ಇರುವ ವಿಚಾರ ಗೊತ್ತಿದ್ದರು ಕುಟುಂಬದವರು ಯಾಕೆ ಸುಳ್ಳು ಹೇಳುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.

ಸುಶಾಂತ್ ಕುಟುಂಬದ ವಿರುದ್ಧ ರಿಯಾ ಕಾನೂನು ಕ್ರಮ
ಈ ಬೆಳವಣಿಗೆಯ ಬಳಿಕ ರಿಯಾ, ಸುಶಾಂತ್ ಕುಟುಂಬದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನಶಿಂದೆ, ಸುಶಾಂತ್ ಅನಾರೋಗ್ಯದ ಬಗ್ಗೆ ಕುಟುಂಬದವರಿಗೆ ಮೊದಲೇ ತಿಳಿದಿತ್ತು. ಆದರೂ ಅಧಿಕಾರಿಗಳ ಮುಂದೆ ಸುಳ್ಳು ಹೇಳಿದ್ದಾರೆ. ಇದು ಕಾನೂನುಬಾಹಿರವಾಗಿದೆ ಎಂದು ಹೇಳಿದ್ದಾರೆ.

ರಿಯಾ ಪರ ವಕೀಲರು ಹೇಳುವುದೇನು?
'ಜೂನ್ 8ರಂದು ಪ್ರಿಯಾಂಕಾ ಸಿಂಗ್, ಸುಶಾಂತ್ ಸಿಂಗ್ ಜೊತೆ ಚಾಟ್ ಮಾಡಿದ್ದಾರೆ. ಪ್ರಿಸ್ಕ್ರಿಪ್ಷನ್ ಇಲ್ಲದೆ ಮೂರು ವಿಭಿನ್ನ ಮೆಡಿಸಿನ್ ಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ರಿಯಾ ಚಕ್ರವರ್ತಿ, ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ರಿಯಾ ಮತ್ತು ಸುಶಾಂತ್ ನಡುವೆ ವಾಗ್ವಾದವಾಗಿದೆ. ನಂತರ ಸುಶಾಂತ್, ರಿಯಾ ಅವರನ್ನು ಮನೆಯಿಂದ ಹೋಗುವಂತೆ ಹೇಳಿದ್ದಾರೆ' ಎಂದು ರಿಯಾ ಪರ ವಕೀಲ ಸತೀಶ್ ಮನಶಿಂದೆ ಹೇಳಿದ್ದಾರೆ.


Click it and Unblock the Notifications











