ಬೆಂಗಳೂರಿನ ಕೋಟ್ಯಾಧಿಪತಿಯ ಜೊತೆ ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿಯ ಜಾಲಿ ರೈಡ್...!
ಪ್ರೀತಿ-ಪ್ರೇಮ ಇದ್ದಲ್ಲಿ ವಿರಹ ಮತ್ತು ನೋವು ಹೊಸದಲ್ಲ. ಅದು ಇಂದು ನಿನ್ನೆಯ ಕಥೆಯೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರೇಮ ಕಥೆ ಮತ್ತು ವ್ಯಥೆಗಳನ್ನು ನಮ್ಮ ಸುತ್ತ ಮುತ್ತ ನಾವು ಮತ್ತು ನೀವು ದಿನನಿತ್ಯ ಕೇಳುತ್ತಾನೆ ಇರುತ್ತೇವೆ.
ಇನ್ನೂ.. ಬಣ್ಣದ ಬದುಕು ನಿಮಗೆ ಗೊತ್ತು. ಇಲ್ಲಿ ಲವ್ ಮತ್ತು ದೋಖಾ ತುಂಬಾ ಮಾಮೂಲು. ಇವತ್ತು 'ಐ ಲವ್ ಯೂ' ಎಂದು ಹೇಳಿದವರೇ ಮರು ದಿನ 'ಐ ಹೇಟ್ ಯು' ಎಂದು ಹೇಳಿ ಸಂಬಂಧಗಳನ್ನು ಮುರಿದುಕೊಳ್ಳುತ್ತಾರೆ. ಎಲ್ಲವನ್ನೂ ಮರೆತು ಹೊಸ ಬದುಕಿನ ಹುಡುಕಾಟ ನಡೆಸುತ್ತಾರೆ. ಇದಕ್ಕೆ ಬಾಲಿವುಡ್‌ನ ಚೆಲುವೆ 'ರಿಯಾ ಚಕ್ರವರ್ತಿ' ಸದ್ಯದ ಅತ್ಯುತ್ತಮ ಉದಾಹರಣೆ.

ಹೌದು, ರಿಯಾ ಚಕ್ರವರ್ತಿ, 'ಸುಶಾಂತ್ ಸಿಂಗ್ ರಜಪೂತ್' ಎಂಬ ಸುರಸುಂದರಾಂಗನ ಮಾಜಿ ಪ್ರೇಯಸಿ. ನೇಣಿಗೆ ಸುಶಾಂತ್ ಕೊರಳೊಡ್ಡಿದ ನಂತರ, 'ಮಾದಕ ಮಾಯಾಜಾಲ'ದಲ್ಲಿ ಸಿಲುಕಿ ಬೈಕುಲ್ಲಾ ಜೈಲಿನಲ್ಲಿ ಹೆಚ್ಚು ಕಡಿಮೆ ಒಂದು ತಿಂಗಳಿದ್ದು ಬಂದ ರಿಯಾ ಸದ್ಯ ಹಳೆಯದೆಲ್ಲವನ್ನು ಮರೆತು ಹೊಸ ಬದುಕು ಶುರು ಮಾಡಿದ್ದಾರೆ. ಚಿತ್ರರಂಗದಿಂದ ಅಂತರ ಕಾಪಾಡಿಕೊಂಡು 'ಚಾಪ್ಟರ್ -02' ಎಂಬ 'ಪಾಡ್ ಕಾಸ್ಟ್' ಶುರು ಮಾಡಿದ್ದಾರೆ. ತಮ್ಮ ಉದ್ಯಮದ ಸ್ನೇಹಿತರನ್ನು ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರ ಕಷ್ಟ ಸುಖ ಕೇಳುತ್ತಿದ್ದಾರೆ.
ಇಂಥಾ ರಿಯಾ ಈಗ ನಿಖಿಲ್ ಕಾಮತ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹೀಗೊಂದು ಅನುಮಾನ ಸದ್ಯ ಅನೇಕರನ್ನು ಕಾಡುತ್ತಿದೆ. ನಿಖಿಲ್ ಕಾಮತ್ ಜೊತೆ ರಿಯಾ ಚಕ್ರವರ್ತಿ ಮುಂಬೈನ ಬಾಂದ್ರಾದ ಬೀದಿಗಳಲ್ಲಿ ಜಾಲಿ ರೈಡ್ ಮಾಡಿರುವ ಫೋಟೋಗಳು ವೈರಲ್ ಆಗುತ್ತಿವೆ. ಇನ್ನೂ ನಿಖಿಲ್ ಕಾಮತ್ ಮತ್ತು ರಿಯಾ ತಮ್ಮ ಗುರುತು ಮರೆಮಾಚಲು ಮಾಸ್ಕ್ ಧರಿಸಿದ್ದಾರೆ. ಆದರೂ ಬಾಲಿವುಡ್‌ನ ಪ್ರತಿಷ್ಠಿತ ಪಾಪರಾಜಿಗಳು ತಮ್ಮ ಚಾಕಚಕ್ಯತೆಯಿಂದ 20 ಲಕ್ಷ ರೂಪಾಯಿ ಬೆಲೆ ಬಾಳುವ 'ಸುಜುಕಿಯ ಬುಲೆವರ್ಡ್ ಎಂ 109ಆರ್' ಬೈಕ್ ಮೇಲೆ ವಿಹಾರಕ್ಕೆ ತೆರಳಿದ್ದ ಈ ಜೋಡಿ ಹಕ್ಕಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಅಂದ್ಹಾಗೇ ನಿಖಿಲ್ ಕಾಮತ್ ಸಾಧಾರಣ ವ್ಯಕ್ತಿಯಲ್ಲ. ಖ್ಯಾತ ಸ್ಟಾಕ್ ಬ್ರೋಕಿಂಗ್ ವೇದಿಕೆ ಜೆರೋಧಾ ಸಂಸ್ಥೆಯ ಸಹ ಸಂಸ್ಥಾಪಕ. ಇನ್ನೂ ಕಳೆದ ವರ್ಷದ 'ಡಿಎನ್‌ಎ' ಪತ್ರಿಕೆಯ ವರದಿ ಪ್ರಕಾರ, ಬೆಂಗಳೂರು ಮೂಲಕ ನಿಖಿಲ್ ಕಾಮತ್ ಸಂಪತ್ತು ಒಂಭತ್ತು ಸಾವಿರ ಕೋಟಿಗೂ ಅಧಿಕ ಇದೆ. ಇನ್ನೂ..2023ರ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಹೆಸರು ಪಡೆದವರು ನಿಖಿಲ್ ಕಾಮತ್. ಇಂತಹ ನಿಖಿಲ್ ಕಾಮತ್ ಜೊತೆ ರಿಯಾ ಚಕ್ರವರ್ತಿಯನ್ನು ಕಂಡು ಮುಂಬೈನ ಮಾಯಾ ಬಜಾರ್ ಬೆಚ್ಚಿ ಬಿದ್ದಿದೆ. ಎಲ್ಲಿಂದ ಎಲ್ಲಿಗೆ ಸಂಬಂಧ ಎಂದು ಯೋಚಿಸುತ್ತಿದೆ.
ಇನ್ನೂ.. ವೈರಲ್ ಆದ ಈ ವಿಡಿಯೋದಲ್ಲಿ ನಿಖಿಲ್ ಕಾಮತ್ ಮಾಸ್ಕ್ ಜೊತೆ ತಲೆಗೆ ಹೆಲ್ಮೆಟ್ ಧರಿಸಿದ್ದಾರೆ. ಆದರೆ, ರಿಯಾ ಮಾತ್ರ ಹೆಲ್ಮೆಟ್ ಹಾಕಿಕೊಂಡಿಲ್ಲ. ಈ ಕಾರಣಕ್ಕೆ ಅನೇಕರು ರಿಯಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಉಳಿದಂತೆ ನಿಖಿಲ್ ಕಾಮತ್ ಈ ಹಿಂದೆ 2019 ರಲ್ಲಿ 'ಅಮಂಡಾ ಪುರವಂಕರ' ಜೊತೆ ಮದುವೆಯಾಗಿದ್ದರು. 2021 ರಲ್ಲಿ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದರು. ಆ ನಂತರ ವಿಶ್ವ ಸುಂದರಿ ಮತ್ತು ನಟಿ ಮಾನುಷಿ ಚಿಲ್ಲರ್ ಜೊತೆಗೆ ಪ್ರೀತಿ ಪ್ರೇಮ ಎಂದು ಸುತ್ತಾಡಿದ್ದ ನಿಖಿಲ್ ಕಾಮತ್ ಆ ನಂತರ ಆ ಸಂಬಂಧವನ್ನು ಕೂಡ ಮುರಿದುಕೊಂಡರು. ಈಗ ರಿಯಾ ಜೊತೆ ನಿಖಿಲ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











