ಸುಶಾಂತ್‌ಗೆ ಚಹಾದಲ್ಲಿ 4 ಹನಿ ಡ್ರಗ್ ಹಾಕಿ ಕೊಡುತ್ತಿದ್ದ ರಿಯಾ: ವಾಟ್ಸಪ್ ಚಾಟ್ ಬಹಿರಂಗ
ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಮತ್ತೊಂದು ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಸುಶಾಂತ್ ಸಾವಿಗೆ ಡ್ರಗ್ ಮಾಫಿಯಾದ ಸಂಪರ್ಕ ಸಹ ಕಾರಣವಿರಬಹುದು ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಇದೀಗ ರಿಯಾ ಚಕ್ರವರ್ತಿ ವಾಟ್ಸಪ್ ಚಾಟ್ ಬಹಿರಂಗವಾಗಿದ್ದು, ನಟಿ ಮಾದಕ ದ್ರವ್ಯ ವ್ಯವಹಾರದಲ್ಲಿ ಭಾಗಿಯಾಗಿದ್ದರು ಮತ್ತು ಮಾದಕ ವ್ಯಸನಿಯಾಗಿದ್ದರು ಎಂದು ಹೇಳಲಾಗುತ್ತಿದೆ.
Recommended Video
ಈ ಸಂಬಂಧ ರಿಯಾ ಚಕ್ರವರ್ತಿ ಮೊಬೈಲ್ ಫೋನ್ ನಿಂದ ಕಳುಹಿಸಲಾದ ವಾಟ್ಸಪ್ ಸಂದೇಶಗಳು ಮಾಧ್ಯಮಗಳಲ್ಲಿ ವರದಿಯಾಗಿದೆ. ಎಂಡಿಎಂಎ, ಗಾಂಜಾ ಮುಂತಾದ ಡ್ರಗ್ ಗಳ ಬಗ್ಗೆ ರಿಯಾ ಕೆಲವು ವ್ಯಕ್ತಿಗಳ ಜೊತೆ ಚಾಟ್ ಮಾಡಿದ್ದಾರೆ. ಡ್ರಗ್ಸ್ ವ್ಯಾಪಾರಿ ಗೌರವ್ ಆರ್ಯ ಎನ್ನುವ ವ್ಯಕ್ತಿಯ ಜೊತೆ ರಿಯಾ ಮಾದಕ ವಸ್ತುಗಳ ಕುರಿತು ಮಾತನಾಡಿರುವುದು ಬಹಿರಂಗವಾಗಿದೆ. ಮುಂದೆ ಓದಿ...

ಡ್ರಗ್ ಡೀಲರ್ ಗೌರವ್ ಆರ್ಯ ಜೊತೆ ರಿಯಾ ಚಾಟ್
"ಹಾರ್ಡ್ ಗ್ರಡ್ ಗಳ ಬಗ್ಗೆ ಮಾತನಾಡುವುದಾದರೆ, ನಾನು ಅದನ್ನು ಹೆಚ್ಚು ಬಳಸುವುದಿಲ್ಲ. ಎಂಡಿಎಂಎ ಒಮ್ಮೆ ಪ್ರಯತ್ನಸಿದ್ದೆ, ನಿಮ್ಮ ಬಳಿ ಎಂಡಿ ಇದೆಯೇ?" ಎಂದು ಕೇಳಿದ್ದಾರೆ.

'ಸ್ಟಫ್ ಬಹುತೇಕ ಮುಗಿದಿದೆ..'
ಮತ್ತೊಂದು ಸಂಭಾಷಣೆಯಲ್ಲಿ, ರಿಯಾ ಅವರ ಫೋನ್ ನಲ್ಲಿ ಮಿರಾಂಡಾ ಸುಶಿ ಎಂದು ಸೇವ್ ಆಗಿರುವ ವ್ಯಕ್ತಿಯ ಜೊತೆ ಮಾತನಾಡಿದ್ದಾರೆ. ಮಿರಾಂಡಾ ಸುಶಿ ಎನ್ನುವವರು ರಿಯಾ ಬಳಿ "ಹಾಯ್ ರಿಯಾ, ಸ್ಟಫ್ ಬಹುತೇಕ ಮುಗಿದುಹೋಗಿದೆ" ಎಂದು ಹೇಳಿದ್ದಾರೆ. ಬಳಿಕ "ನಾವು ಅದನ್ನು ಶೋಯಿಕ್ (ರಿಯಾ ಸಹೋದರ) ಗೆಳೆಯನಿಂದ ತೆಗೆದುಕೊಳ್ಳಬಹುದೇ? ಆದರೆ ಅವನ ಹತ್ರ ಇರುವುದು ಗಾಂಜಾ ಮಾತ್ರ" ಇದೆ ಕೇಳುತ್ತಾರೆ.

'ಚಹಾದಲ್ಲಿ 4 ಹನಿಗಳನ್ನು ಹಾಕಿ ಕೊಡು..'
ಇನ್ನೂ ನವೆಂಬರ್ 25, 2019 ರಂದು ರಿಯಾ, ಜಯಾ ಸಹಾ ಎನ್ನುವ ವ್ಯಕ್ತಿಯ ಜೊತೆ ಮಾತನಾಡಿದ್ದಾರೆ. "ಚಹಾ ಅಥವಾ ನೀರಿನಲ್ಲಿ 4 ಹನಿಗಳನ್ನು ಬಳಸಿ ಅದನ್ನು ಕುಡಿಯಲು ಬಿಡಿ. 30-40 ನಿಮಿಷದ ಬಳಿಕ ಕಿಕ್ ಬರುತ್ತೆ." ಎಂದಿದ್ದಾರೆ ಇದಕ್ಕೆ ರಿಯಾ "ತುಂಬಾ ಧನ್ಯವಾದಗಳು" ಎಂದಿದ್ದಾರೆ. ಬಳಿಕ ಜಯಾ "ತೊಂದರೆ ಇಲ್ಲ, ಇದರಿಂದ ನಿನಗೆ ಅನುಕೂಲವಾಗುತ್ತೆ." ಎಂದು ಚಾಟ್ ಮಾಡಿದ್ದಾರೆ.

ಮಾದಕ ವಸ್ತು ನಿಯಂತ್ರಣ ಇಲಾಖೆ ತನಿಖೆ ಮಾಡುವ ಸಾಧ್ಯತೆ!
ಈ ಬಗ್ಗೆ ಮಾದಕ ವಸ್ತು ನಿಯಂತ್ರಣ ಇಲಾಖೆ ತನಿಖೆ ಮಾಡುವ ಸಾಧ್ಯತೆ ಇದೆ. ಇನ್ನೂ ಈ ಪ್ರಕರಣದಲ್ಲಿ ಸಿಬಿಐ ತನ್ನ ತನಿಖೆಯನ್ನು ಮುಂದುವರೆಸಿದೆ. ಈಗಾಗಲೆ ಸಾಕಷ್ಟು ಮಂದಿಯ ವಿಚಾರಣೆಯನ್ನು ನಡೆಸಿದ್ದು ಸುಶಾಂತ್ ಸ್ನೇಹಿತರು, ಮನೆಗೆಲಸದವರು ಸೇರಿದಂತೆ ಅನೇಕರನ್ನು ಪ್ರಶ್ನಿಸಿದ್ದಾರೆ. ರಿಯಾ ಚಕ್ರವರ್ತಿ ಮತ್ತು ಸ್ನೇಹಿತ ಸಂದೀಪ್ ಅವರ ವಿಚಾರಣೆ ನಡೆಸಬೇಕಿದೆ.


Click it and Unblock the Notifications











