2021ಕ್ಕೆ ಬಾಲಿವುಡ್‌ಗೆ ಕಂಬ್ಯಾಕ್ ಮಾಡಲಿದ್ದಾರೆ ರಿಯಾ ಚಕ್ರವರ್ತಿ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ನಡೆದ ಕೆಲವು ಬೆಳವಣಿಗೆಗಳ ಹಿನ್ನೆಲೆ ನಟಿ ಹಾಗೂ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಜೈಲು ಸೇರಬೇಕಾಯಿತು. ಸುಮಾರು ಒಂದು ತಿಂಗಳ ಕಾಲ ಬೈಕುಲ್ಲಾ ಜೈಲಿನಲ್ಲಿ ಕಾಲ ಕಳೆದರು. ನಂತರ ಜಾಮೀನು ಪಡೆದು ಹೊರಗೆ ಬಂದ ನಟಿ ಮನೆಯಲ್ಲಿ ಕೂತಿದ್ದಾರೆ.

ಈ ನಡುವೆ ರಿಯಾ ಚಕ್ರವರ್ತಿ ಅವರ ಜೀವನ ಆಧರಿತ ಸಿನಿಮಾ ಬಾಲಿವುಡ್‌ನಲ್ಲಿ ತಯಾರಾಗಲಿದೆ ಎಂಬ ಅಭಿಪ್ರಾಯ ಬಲವಾಗಿ ಕೇಳಿ ಬರುತ್ತಿದೆ. ಆದ್ರೆ, ಇದು ನಿಜವಲ್ಲ ಎಂದು ರಿಯಾ ಚಕ್ರವರ್ತಿ ಸ್ನೇಹಿತ ನಿರ್ಮಾಪಕ-ನಿರ್ದೇಶಕ ರೂಮಿ ಜಾಫೇರಿ ಇಂಡಿಯಾ ಟುಡೇ ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೇ 2021ರಲ್ಲಿ ನಟಿ ರಿಯಾ ಚಕ್ರವರ್ತಿ ಬಾಲಿವುಡ್‌ಗೆ ಕಂಬ್ಯಾಕ್ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮುಂದೆ ಓದಿ....

ರಿಯಾ ಆಘಾತಕಾರಿ ವರ್ಷ

ರಿಯಾ ಆಘಾತಕಾರಿ ವರ್ಷ

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೂಮಿ ಜಾಫೇರಿ ''2020 ಪ್ರತಿಯೊಬ್ಬರಿಗೂ ಕೆಟ್ಟ ವರ್ಷ. ಆದರೆ ರಿಯಾ ಚಕ್ರವರ್ತಿ ಕೆಟ್ಟದರ ಜೊತೆಗೆ ಆಘಾತ ತಂದ ವರ್ಷ. ಉತ್ತಮವಾಗಿ ಸಾಗಬೇಕಿದ್ದ ಮಧ್ಯಮ ಕುಟುಂಬದ ಹೆಣ್ಣು ಮಗಳೊಬ್ಬರು ಒಂದು ತಿಂಗಳು ಕಾಲ ಜೈಲಿನಲ್ಲಿ ಕಳೆಯಬೇಕಾಯಿತು. ನಾವು ಊಹಿಸಲು ಸಾಧ್ಯವಿಲ್ಲ. ಏಕಂದ್ರೆ ಇದು ಅವಳ ಸ್ಥೈರ್ಯವನ್ನು ಸಂಪೂರ್ಣವಾಗಿ ನಾಶಗೊಳಿಸಿದೆ'' ಎಂದು ಹೇಳಿದ್ದಾರೆ.

2021ಕ್ಕೆ ಕಂಬ್ಯಾಕ್ ಮಾಡ್ತಾಳೆ

2021ಕ್ಕೆ ಕಂಬ್ಯಾಕ್ ಮಾಡ್ತಾಳೆ

''ಇತ್ತೀಚಿಗೆ ನಾನು ರಿಯಾ ಅವರನ್ನು ಭೇಟಿ ಮಾಡಿದೆ. ಬಹಳಷ್ಟು ನೊಂದಿದ್ದಾರೆ. ತುಂಬಾ ಶಾಂತವಾಗಿ ಕಾಣಿಸಿಕೊಂಡಳು. ಅವಳ ಕೆಲವು ನಿರ್ಧಾರಗಳಿಂದ ನಾವು ಅವಳನ್ನು ದೂಷಿಸಲು ಸಾಧ್ಯವಿಲ್ಲ. 2021ಕ್ಕೆ ರಿಯಾ ಬಾಲಿವುಡ್‌ಗೆ ಕಂಬ್ಯಾಕ್ ಮಾಡ್ತಾಳೆ'' ಎಂದು ಜಾಫೇರಿ ತಿಳಿಸಿದ್ದಾರೆ.

ರಿಯಾ ಕುರಿತು ಸಿನಿಮಾ?

ರಿಯಾ ಕುರಿತು ಸಿನಿಮಾ?

ರೂಮಿ ಜಾಫೇರಿ ಅವರು ರಿಯಾ ಚಕ್ರವರ್ತಿ ಜೀವನದ ಕುರಿತು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಜಾಫೇರಿ ''ಇದು ವದಂತಿ ಅಷ್ಟೇ. ಸುಶಾಂತ್ ಸಾವಿನ ಬಳಿಕ ರಿಯಾ ಹೆಚ್ಚು ಸುದ್ದಿಯಲ್ಲಿದ್ದ ಕಾರಣ ಕೆಲವು ಇದನ್ನು ಹಬ್ಬಿಸುತ್ತಿದ್ದಾರೆ. ರಿಯಾ ಅವರ ಜೀವನ ಆಧರಿಸಿ ನಾನು ಯಾವುದೇ ಸಿನಿಮಾ ಮಾಡಲು ಬಯಸುತ್ತಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

Recommended Video

ಮಾತಾಡೋರು ಇದ್ರೇನೆ ಅವರು ಬದುಕಿದ್ದಾರೆ ಅನೋದು ಗೊತ್ತಾಗೋದು | Filmibeat Knnada
ಸುಶಾಂತ್ ಜೊತೆ ಸಿನಿಮಾ ಮಾಡಬೇಕಿತ್ತು

ಸುಶಾಂತ್ ಜೊತೆ ಸಿನಿಮಾ ಮಾಡಬೇಕಿತ್ತು

ಅಂದ್ಹಾಗೆ, ಜಾಫೇರಿ ಅವರು ಸುಶಾಂತ್ ಸಿಂಗ್ ರಜಪೂತ್ ಗೆ ನಿರ್ದೇಶನ ಮಾಡಬೇಕಿತ್ತು. ಈ ಕುರಿತು ಮಾತುಕತೆ ಸಹ ಆಗಿತ್ತು. ಈ ಚಿತ್ರದಲ್ಲಿ ಸುಶಾಂತ್ ಗೆ ಜೋಡಿಯಾಗಿ ರಿಯಾ ಚಕ್ರವರ್ತಿ ನಟಿಸಬೇಕಿತ್ತು. ಆದ್ರೆ, ಸುಶಾಂತ್ ಅವರ ಅನಿರೀಕ್ಷಿತ ಸಾವಿನಿಂದ ಈ ಪ್ರಾಜೆಕ್ಟ್ ನಿಂತು ಹೋಗಿದೆ. ಈ ಬಗ್ಗೆ ಮಾತನಾಡಿದ ಜಾಫೇರಿ ''ನಾನು ಸುಶಾಂತ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಸ್ಕ್ರಿಪ್ಟ್ ಅಂತಿಮಗೊಳಿಸಿದ್ದೆ. ಇಂದು ಅವರೇ ನಮ್ಮೊಂದಿಗೆ ಇಲ್ಲದಿದ್ದಾಗ ಅದನ್ನು ಚರ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಚಿತ್ರವನ್ನು ಸ್ಥಗಿತಗೊಳಿಸಲಾಗಿದೆ'' ಎಂದು ಹೇಳಿದರು.

More from Filmibeat

English summary
Actress Rhea chakraborty will comeback to bollywood in 2021 said Filmmaker rumi jaffery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X