ಸರೋಜ್ ಖಾನ್ ಪರ ದನಿ ಎತ್ತಿದ ರಿಚಾ ಚಡ್ಡಾಗೆ ಟ್ವಿಟ್ಟರ್ ನಲ್ಲಿ ಮಂಗಳಾರತಿ.!
ಕಾಸ್ಟಿಂಗ್ ಕೌಚ್ ವಿರುದ್ಧ ತೆಲುಗು ಚಿತ್ರರಂಗದ ಯುವ ನಟಿ ಶ್ರೀರೆಡ್ಡಿ ಸಮರ ಸಾರಿದ ಬೆನ್ನಲ್ಲೇ ಹಲವು ನಟಿಯರು 'ಅವಕಾಶಕ್ಕಾಗಿ ಮಂಚ ಏರುವ' ಪದ್ಧತಿಯ ವಿರುದ್ಧ ದನಿ ಎತ್ತಿದ್ದಾರೆ.
ಇಡೀ ಭಾರತೀಯ ಚಿತ್ರರಂಗದಲ್ಲೇ ಈ ವಿವಾದ ಸದ್ದು ಮಾಡುತ್ತಿರುವಾಗ, 'ಕಾಸ್ಟಿಂಗ್ ಕೌಚ್' ಪರವಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನೃತ್ಯ ಸಂಯೋಜಕಿ ಸರೋಜ್ ಖಾನ್ ಮಾತನಾಡಿದ್ದರು.
''ಕಾಸ್ಟಿಂಗ್ ಕೌಚ್'ನಿಂದ ಕೆಲಸ ಆಂತೂ ಸಿಗುತ್ತೆ. ಕಮ್ಮಿ ಅಂದ್ರೂ ರೊಟ್ಟಿ ಕೊಡ್ತಾರೆ. ಅತ್ಯಾಚಾರ ಎಸಗಿ ಪರಾರಿ ಆಗುವುದಿಲ್ಲ'' ಎಂದು ಸರೋಜ್ ಖಾನ್ ನೀಡಿದ್ದ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆಡಿದ ಮಾತಿನಿಂದ ಸರೋಜ್ ಖಾನ್ ವಿವಾದದಲ್ಲಿ ಸಿಲುಕಿರುವಾಗಲೇ, ಆಕೆ ಪರ ಬ್ಯಾಟಿಂಗ್ ಮಾಡಲು ಮುಂದಾಗಿದ್ದಾರೆ ಬಾಲಿವುಡ್ ನಟಿ ರಿಚಾ ಚಡ್ಡಾ.
ಸರೋಜ್ ಖಾನ್ ಪರ ದನಿ ಎತ್ತಿರುವ ರಿಚಾ ಚಡ್ಡಾ ಇದೀಗ ಟ್ವೀಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂದೆ ಓದಿರಿ..

ಸರೋಜ್ ಖಾನ್ ಪರ ಮಾತನಾಡಿದ ರಿಚಾ ಚಡ್ಡಾ
''ಬಾಲಿವುಡ್ ನಲ್ಲಿ ಇರುವವರೆಲ್ಲರೂ ಕೆಟ್ಟವರು. ಕೆಟ್ಟ ಕೆಟ್ಟ ಕೆಲಸಗಳಲ್ಲಿ ತೊಡಗುತ್ತಾರೆ ಅಂತ ಎಲ್ಲರೂ ಭಾವಿಸುತ್ತಾರೆ. ಆದ್ರೆ, ಅದು ಸತ್ಯ ಅಲ್ಲ. ಸರೋಜ್ ಖಾನ್ ಆಡಿದ ಮಾತಿನಲ್ಲಿ ಅರ್ಥ ಇದೆ. ಎಲ್ಲ ಚಿತ್ರರಂಗದಲ್ಲಿಯೂ ಕಾಸ್ಟಿಂಗ್ ಕೌಚ್ ನಡೆಯುತ್ತದೆ. ಬಾಲಿವುಡ್ ಮಾತ್ರ ಯಾಕೆ ಟಾರ್ಗೆಟ್ ಆಗುತ್ತಿದೆ?'' ಎಂದು ನಟಿ ರಿಚಾ ಚಡ್ಡಾ, ಸರೋಜ್ ಖಾನ್ ಪರ ಮಾತನಾಡಿದ್ದಾರೆ.

ಅಂದು ಹಾಗೆ ಹೇಳಿ, ಇಂದು ಹೀಗೆ ಹೇಳ್ಬಹುದೇ.?
ಇಂದು ಕಾಸ್ಟಿಂಗ್ ಕೌಚ್ ಪರವಾಗಿ ಮಾತನಾಡಿದ ಸರೋಜ್ ಖಾನ್ ಪರ ಬ್ಯಾಟಿಂಗ್ ಮಾಡಿರುವ ರಿಚಾ ಚಡ್ಡಾ, ಹಿಂದೊಮ್ಮೆ 'ಕಾಸ್ಟಿಂಗ್ ಕೌಚ್' ವಿರುದ್ಧ ಸಿಡಿದೆದ್ದಿದ್ದರು. ಫಿಲ್ಮ್ ಮೇಕರ್ ಒಬ್ಬರು ತಮಗೆ ನೀಡಿದ್ದ ಲೈಂಗಿಕ ಕಿರುಕುಳದ ಬಗ್ಗೆ ರಿಚಾ ಚಡ್ಡಾ ಬಾಯ್ಬಿಟ್ಟಿದ್ದರು.

ರಿಚಾ ಚಡ್ಡಾ ವಿರುದ್ಧ ಟ್ವೀಟಿಗರ ಸಮರ
''ಸರೋಜ್ ಖಾನ್ ಪರವಾಗಿ ಮಾತನಾಡುವ ಬದಲು, ನಟಿಯರ ಪರ ದನಿ ಎತ್ತಬೇಕಿತ್ತು'' ಎಂದು ರಿಚಾ ಚಡ್ಡಾಗೆ ಟ್ವೀಟಿಗರು ಕ್ಲಾಸ್ ತೆಗೆದುಕೊಳ್ತಿದ್ದಾರೆ.

ಎಲ್ಲ ಪಬ್ಲಿಸಿಟಿಗೆ.!
''ಇದೇ ರಿಚಾ ಚಡ್ಡಾ ಸಿನಿಮಾ ಪ್ರಮೋಷನ್ ವೇಳೆ ಕಾಸ್ಟಿಂಗ್ ಕೌಚ್ ವಿರುದ್ಧ ಮಾತನಾಡಿದ್ದರು. ಅಲ್ಲಿಗೆ ಅದು ಸಿನಿಮಾ ಪ್ರಚಾರದ ಗಿಮಿಕ್. ವಾವ್ ಗ್ರೇಟ್'' ಎಂದು ಟ್ವೀಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.

ಪಿ.ಆರ್.ಸ್ಟಂಟ್.!
''ಫಕ್ರಿ ಸೀಕ್ವೆಲ್ ಬರುತ್ತಿದ್ದ ವೇಳೆ ಕಾಸ್ಟಿಂಗ್ ಕೌಚ್ ವಿರುದ್ಧ ಮಾತನಾಡಿದ್ದ ನಟಿ ಈಕೆಯೇ ತಾನೆ.? ಬಾಲಿವುಡ್ ಗೆ ವೆಲ್ ಕಮ್. ಇದೆಲ್ಲ ಪಿ.ಆರ್.ಸ್ಟಂಟ್'' ಎಂದಿದ್ದಾರೆ ನೆಟ್ಟಿಗರೊಬ್ಬರು.


Click it and Unblock the Notifications











