For Quick Alerts
  ALLOW NOTIFICATIONS  
  For Daily Alerts

  ಬಾಯ್ ಫ್ರೆಂಡ್ ಜೊತೆ ಮದುವೆಗೆ ಸಜ್ಜಾದ ಬಾಲಿವುಡ್ ನಟಿ

  |

  ಬಾಲಿವುಡ್ ನಟಿ ರಿಚಾ ಚಡ್ಡಾ ತನ್ನ ಬಾಯ್ ಫ್ರೆಂಡ್ ಜೊತೆ ಹಸೆಮಣೆ ಏರಲು ತಯಾರಾಗಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಅಲಿ ಫಜಾಲ್ ಜೊತೆ ವೈವಾಹಿಕ ಬದುಕು ಆರಂಭಿಸಲು ಚಿಂತನೆ ಮಾಡಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

  ಮುಂಗಾರು ಸಮಯಕ್ಕೆ ಇವರಿಬ್ಬರು ಮದುವೆ ಆಗಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದ್ರೀಗ, ಅದಕ್ಕೂ ಮುಂಚೆಯೇ ವಿವಾಹವಾಗಲು ನಿಶ್ಚಿಯಿಸಿದ್ದಾರೆ.

  ನಟಿ ರಿಚಾ ಚಡ್ಡಾ ಮುಂದಿನ ಚಿತ್ರ 'ಮೇಡಂ ಚೀಫ್ ಮಿನಿಸ್ಟರ್'!ನಟಿ ರಿಚಾ ಚಡ್ಡಾ ಮುಂದಿನ ಚಿತ್ರ 'ಮೇಡಂ ಚೀಫ್ ಮಿನಿಸ್ಟರ್'!

  ಸದ್ಯದ ಮಾಹಿತಿ ಪ್ರಕಾರ ರಿಜಿಸ್ಟ್ರಾರ್ ಮದುವೆ ಆಗುವ ಪ್ಲಾನ್ ಇದೆಯಂತೆ. ಮುಂಬೈ ನ್ಯಾಯಾಲಯದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಸಿದ್ದಾರಂತೆ. ಬಳಿಕ ಅದ್ಧೂರಿಯಾಗಿ ಆರತಕ್ಷತೆ ಆಯೋಜಿಸಲು ನಟಿ ನಿರ್ಧರಿಸಿದ್ದಾರೆ ಎಂದು ಅವರ ವಕ್ತಾರ ತಿಳಿಸಿದ್ದಾರೆ.

  ರಿಚಾ ಚಡ್ಡಾ ಮತ್ತು ಅಲಿ ಫಜಾಲ್ ಇಬ್ಬರು ಸಿನಿಮಾ ಶೂಟಿಂಗ್ ವೇಳೆ ಪ್ರೀತಿಯಲ್ಲಿ ಬಿದ್ದರು ಎನ್ನಲಾಗಿದೆ. 'ಫಕ್ರಿ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಒಬ್ಬರಿಗೊಬ್ಬರಿಗೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತು. ಅಲ್ಲಿಂದ ಇಬ್ಬರು ಡೇಟಿಂಗ್ ನಲ್ಲಿದ್ದರು. ಈ ಇಬ್ಬರ ಸಂಬಂಧದ ಬಗ್ಗೆ ಹಲವು ಗಾಸಿಪ್ ಗಳು ಹರಿದಾಡಿದ್ದವು.

  ಉಳಿದಂತೆ ಸುಭಾಷ್ ಕಪೂರ್ ನಿರ್ದೇಶನದ 'ಮೇಡಂ ಚೀಫ್ ಮಿನಿಸ್ಟರ್' ಚಿತ್ರದಲ್ಲಿ ರಿಚಾ ಚಡ್ಡಾ ನಟಿಸುತ್ತಿದ್ದಾರೆ. ಮತ್ತೊಂದೆಡೆ ಅಲಿ ಫಜಾಲ್ ಹಾಲಿವುಡ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

  English summary
  Bollywood actress Richa Chadda getting married her boyfriend in april month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X