For Quick Alerts
  ALLOW NOTIFICATIONS  
  For Daily Alerts

  ಆಯುರ್ವೇದ ಬ್ಯೂಟಿ ರೀಚಾ 'ಹಾಟ್' ದೃಶ್ಯ

  By * ಜೇಮ್ಸ್ ಮಾರ್ಟಿನ್
  |

  ಆಯುರ್ವೇದ ಚೂರ್ಣ, ಸೌಂದರ್ಯವರ್ಧಕಗಳ ಪರ ಪ್ರಚಾರ ನಡೆಸುವ ಬಾಲಿವುಡ್ ಬೆಡಗಿ ರೀಚಾ ಛಡ್ಡಾ ಮತ್ತೆ ಸುದ್ದಿಯಲ್ಲಿದ್ದಾಳೆ. ದೆಹಲಿ ವಿಮಾನ ನಿಲ್ದಾಣದ ಎಪಿಸೋಡ್ ಆದ ಮೇಲೆ 'ತಮಾಂಚೆ' ಎಂಬ ಸಿನಿಮಾ ಒಪ್ಪಿಕೊಂಡಿದ್ದಾಳೆ. ಈ ಚಿತ್ರಕ್ಕಾಗಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ.

  ಗ್ಯಾಂಗ್ಸ್ ಆಫ್ ವಸ್ಸೇಪುರ್, ಓಯ್ ಲಕ್ಕಿ ಓಯ್ ಸಿನಿಮಾ ಖ್ಯಾತಿಯ ರೀಚಾ ಅವರು ಆಯುರ್ವೇದ ಸೌಂದರ್ಯ ವರ್ಧಕಗಳನ್ನು ಬಳಸಿಕೊಂಡು ಮೈಕಾಂತಿ ಹೆಚ್ಚಿಸಿಕೊಂಡಿರುವ ರೀಚಾ ಹೊಸ ಚಿತ್ರಕ್ಕಾಗಿ ತನ್ನ ಮೈಮಾಟವನ್ನು ತೋರಿದ್ದಾಳೆ. ಈ ಅಪರಾಧ ಮಾಡಿ ತಲೆಮರೆಸಿಕೊಂಡ ಹೆಣ್ಣಿನ ಪಾತ್ರ ನಿರ್ವಹಿಸುತ್ತಿರುವ ರೀಚಾ, ತನ್ನ ಸಹನಟ ನಿಖಿಲ್ ದ್ವಿವೇದಿ ಜತೆ ಮೈ ಚಳಿ ಬಿಟ್ಟು ನಟಿಸಿದ್ದಾಳೆ.[ಬ್ಯೂಟಿ ರೀಚಾ ಪೊಲೀಸ್ ವಶಕ್ಕೆ!]

  ಸಕತ್ ಸೆಕ್ಸಿ ಉಡುಪುಗಳನ್ನು ತೊಟ್ಟಿರುವ ರಿಚಾ, ನಿಖಿಲ್ ಜತೆ ಹಾಟ್ ಕಿಸ್ಸಿಂಗ್ ಸೀನ್ ನಲ್ಲೂ ಕಾಣಿಸಿಕೊಳ್ಳುತ್ತಿದ್ದಾಳೆ. ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಸೂರ್ಯವೀರ್ ಭುಲ್ಲಾರ್ ನಿರ್ಮಾಣದ ಈ ಚಿತ್ರವನ್ನು ಫ್ಯಾಷನ್ ಟಿವಿ ಫಿಲಂಸ್ ಅರ್ಪಿಸುತ್ತಿದೆ. ಅಂದ ಹಾಗೆ, ಗುರುವಾರ ಸಂಜೆ ಜುಹೂ ಇಸಿಎಕ್ಸ್ ನಲ್ಲಿ ರಿಚಾ ಛಡ್ಡಾ ಹಾಗೂ ನಿಖಿಲ್ ದ್ವಿವೇದಿ ಅವರು ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.ಈ ಚಿತ್ರದ ಹಾಟ್ ಚಿತ್ರಗಳು ಸಿನಿರಸಿಕರಿಗೆ ಇಲ್ಲಿದೆ..

  ವಿಭಿನ್ನ ಪಾತ್ರ ಒಪ್ಪಿಕೊಳ್ಳುವ ರೀಚಾ

  ವಿಭಿನ್ನ ಪಾತ್ರ ಒಪ್ಪಿಕೊಳ್ಳುವ ರೀಚಾ

  ಗ್ಯಾಂಗ್ಸ್ ಆಫ್ ವಸ್ಸೇಪುರ್ ಚಿತ್ರದಲ್ಲಿ ನಗ್ಮಾ ಖಾಟೂನ್ ಆಗಿ ಅಥವಾ ರಾಮ್ ಲೀಲಾ ಚಿತ್ರದಲ್ಲಿ ರಸೀಲಾ ಪಾತ್ರಧಾರಿಯಾಗಿದ್ದ ರೀಚಾ ವಿಭಿನ್ನ ಪಾತ್ರಧಾರಿಯಾಗಿ ರಂಜಿಸಿರುವ ಪ್ರತಿಭಾವಂತೆ. ತಮಾಂಚೆ ಚಿತ್ರದಲ್ಲಿ ನಿಖಿಲ್ ದ್ವಿವೇದಿ ಜತೆ ರೀಚಾ ಮೈಚಳಿ ಬಿಟ್ಟು ಕಾಣಿಸಿಕೊಂಡಿದ್ದಾರೆ.

  ತಮಾಂಚೆ ಚಿತ್ರದಲ್ಲೂ ವಿಶಿಷ್ಟ ಪಾತ್ರ

  ತಮಾಂಚೆ ಚಿತ್ರದಲ್ಲೂ ವಿಶಿಷ್ಟ ಪಾತ್ರ

  ತಮಾಂಚೆ ಚಿತ್ರದಲ್ಲೂ ರೀಚಾ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಬಾಬು ಹಾಗೂ ಮುನ್ನ ಎಂಬುವರ ಪ್ರೇಮಕಥೆಗೆ ಗ್ಯಾಂಗ್ ಸ್ಟರ್ ಗಳು ಅಡ್ಡಿಯಾಗುವ ಚಿತ್ರಕಥೆ ಇದಾಗಿದೆ.

  ರೀಚಾ ಬೋಲ್ಡ್ ನೆಸ್ ಗೆ ಫ್ಯಾನ್ಸ್ ಫಿದಾ

  ರೀಚಾ ಬೋಲ್ಡ್ ನೆಸ್ ಗೆ ಫ್ಯಾನ್ಸ್ ಫಿದಾ

  ರೀಚಾ ಬೋಲ್ಡ್ ನೆಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾನೆ. ಮಾಡಿರುವ ಕಡಿಮೆ ಚಿತ್ರಗಳಲ್ಲೆ ಪ್ರೇಕ್ಷಕರು ಹಾಗೂ ವಿಮರ್ಶಕ ಮೆಚ್ಚುಗೆ ಗಳಿಸಿದ್ದಾಳೆ. ಗ್ಯಾಂಗ್ಸ್ ಆಫ್ ವಸ್ಸೇಪುರ್ ಹಾಗೂ ಓಯ್ ಲಕ್ಕಿ ಓಯ್ ಚಿತ್ರಗಳಿಗೂ ತಮಾಂಚೆಗೂ ಸಾಕಷ್ಟು ವ್ಯತ್ಯಾಸ ಕಾಣಬಹುದು.

  ರೂಪದರ್ಶಿಯಾಗಿದ್ದ ರೀಚಾ ಛಡ್ಡಾ

  ರೂಪದರ್ಶಿಯಾಗಿದ್ದ ರೀಚಾ ಛಡ್ಡಾ

  ರೂಪದರ್ಶಿಯಾಗಿ ಬಣ್ಣದ ಲೋಕಕ್ಕೆ ಇಳಿದ ರೀಚಾ ಛಡ್ಡಾ ನಂತರದ ದಿನಗಳಲ್ಲಿ ನಾಟಕ ರಂಗದಲ್ಲಿ ಪಳಗಿದವಳು. ಬಾಲಿವುಡ್ ನಲ್ಲಿ ನಟನೆ ಏನಿದ್ದರೂ ಒಳ್ಳೆ ಚಿತ್ರಕಥೆ ಹಾಗೂ ಪಾತ್ರ ಸಿಕ್ಕರೆ ಮಾತ್ರ ಎಂಬ ಕಂಡಿಷನ್ ಪಾಲಿಸುತ್ತಾ ಬಂದಿದ್ದಾಳೆ.

  ತಮಾಂಚೆ ಮೇಲೆ ಭಾರಿ ನಿರೀಕ್ಷೆ

  ತಮಾಂಚೆ ಮೇಲೆ ಭಾರಿ ನಿರೀಕ್ಷೆ

  ನವನೀತ್ ಬೆಹಾಲ್ ನಿರ್ದೇಶನದ ತಮಾಂಚೆ ಚಿತ್ರದ ಕಥೆ ಅಬು ಸಲೇಂ ಹಾಗೂ ಮೋನಿಕಾ ಬೇಡಿ ಅವರ ನಿಜ ಜೀವನದ ಕಥೆ ಇದಾಗಿದೆ ಎಂಬ ಸುದ್ದಿ ಇದೆ.

  ತಮಾಂಚೆ ಚಿತ್ರದ ಫಸ್ಟ್ ಲುಕ್ ನೋಡಿ

  ತಮಾಂಚೆ ಚಿತ್ರದ ಫಸ್ಟ್ ಲುಕ್ ನೋಡಿ

  English summary
  Known for her unconventional roles and hard-hitting performances, whether be it as Nagma Khatoon in ‘Gangs Of Wasseypur' or Rasila in ‘Ram Leela', actress Richa Chadda has always believed in pushing the envelope.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X