»   » ಸಿನಿಮಾ ಇಂಡಸ್ಟ್ರಿಯಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟ ನಟಿ

ಸಿನಿಮಾ ಇಂಡಸ್ಟ್ರಿಯಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟ ನಟಿ

Posted By:
Subscribe to Filmibeat Kannada
ಸಿನಿಮಾ ಇಂಡಸ್ಟ್ರಿಯಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟ ನಟಿ | Filmibeat Kannada

ಸಿನಿಮಾ ಲೋಕದಲ್ಲಿ ನಡೆಯುವ ಲೈಂಗಿಕ ಕಿರುಕುಳ, ನಾಯಕಿಯರ ಮೇಲೆ ದೌರ್ಜನ್ಯದ ಕುರಿತು ಒಬ್ಬರ ಹಿಂದೆ ಒಬ್ಬರಂತೆ ನಟಿಯರು ಮಾತನಾಡುತ್ತಿದ್ದಾರೆ. ತೆರೆ ಹಿಂದೆ ನಡೆದ ಕರಾಳ ನೋವನ್ನ ಸಮಾಜದ ಮುಂದೆ ಬಿಚ್ಚಿಡುತ್ತಿದ್ದಾರೆ.

ಇದೀಗ, ಬಿ-ಟೌನ್ ನಟಿ ರಿಚಾ ಚಡ್ಡಾ ಬಣ್ಣದ ಲೋಕದ ಇನ್ನೊಂದು ಮುಖವನ್ನ ಬಹಿರಂಗಪಡಿಸಿದ್ದಾರೆ. ಅದರಲ್ಲೂ, ಬಾಲಿವುಡ್ ಇಂಡಸ್ಟ್ರಿಯ ಕರಾಳ ಪರಿಚಯವನ್ನ ಮಾಡಿದ್ದಾರೆ.

ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ರಾಧಿಕಾ ಆಪ್ಟೆ.!

ಹಾಲಿವುಡ್ ನಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಅಭಿಯಾನ ಆರಂಭವಾಗಿದೆ. ಅದೇ ರೀತಿ ಬಾಲಿವುಡ್ ನಲ್ಲಿ ಆಗಬೇಕಿದೆ. ಒಂದು ವೇಳೆ ಈ ರೀತಿ ಇಲ್ಲಿಯೂ ಆದ್ರೆ, ಸಾಕಷ್ಟು ನಟರು, ನಿರ್ಮಾಪಕರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ನಟಿ ರಿಚಾ ಟೀಕಿಸಿದ್ದಾರೆ. ಮುಂದೆ ಓದಿ......

ಹೀರೋಗಳನ್ನ ಕಳೆದುಕೊಳ್ಳಬೇಕಾಗುತ್ತೆ

''ಹಾಲಿವುಡ್ ನಂತೆ ಬಾಲಿವುಡ್ ನಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ರೆ, ಬಾಲಿವುಡ್ ಇಂಡಸ್ಟ್ರಿ ಅನೇಕ ನಟರು ಹಾಗೂ ನಿರ್ದೇಶಕರನ್ನ ಕಳೆದುಕೊಳ್ಳಲಿದೆ''- ರಿಚಾ ಚಡ್ಡಾ, ನಟಿ

ಪ್ರಗತಿಪರ ನಿರ್ಮಾಪಕರು ನಾಶ ಆಗ್ತಾರೆ

''ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುವ ಹಾಗೂ ಪ್ರಗತಿಪರರು ಎನ್ನುತ್ತಿರುವ ನಿರ್ಮಾಪಕರು ಕೂಡ ನಾಶವಾಗ್ತಾರೆ'' - ರಿಚಾ ಚಡ್ಡಾ, ನಟಿ

ನಿರಂತರ ಕಿರುಕುಳ ನಡೆಯುತ್ತಿದೆ

ಬಾಲಿವುಡ್ ನಲ್ಲಿ ನಟಿ ರಿಚಾ ಎದುರಿಸಿದ್ದ ನಿರ್ದಿಷ್ಟ ಘಟನೆಯನ್ನು ವಿವರಿಸುವ ಬದಲು, ಯುವ ಕಲಾವಿದರು ನಿರಂತರ ಕಿರುಕುಳವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್ ನಲ್ಲಿ ಲೈಂಗಿಕ ದೌರ್ಜನ್ಯ ನಿರಂತರವಾಗಿದೆ ಎಂಬುದನ್ನ ಪರೋಕ್ಷವಾಗಿ ತಿಳಿಸಿದ್ದಾರೆ.

ಧೈರ್ಯದಿಂದ ಎದುರಿಸಬೇಕಿದೆ

ತಮಗೆ ಆಗಿರುವ ದೌರ್ಜನ್ಯದ ವಿರುದ್ಧ ಹೋರಾಡಬೇಕಿದೆ. ಧೈರ್ಯದಿಂದ ಹೇಳುವ ಮನಸ್ಸು ಮಾಡಬೇಕಿದೆ. ಬಾಲಿವುಡ್ ಇಂಡಸ್ಟ್ರಿ ಈ ಬಗ್ಗೆ ಯಾಕೆ ಮೌನವಾಗಿದೆ ಎಂದು ನಟಿ ರಿಚಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
''When Bollywood opens up on sexual harassment, we will lose a lot of heroes” said Actress Richa Chadha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada