ರಿಚಾ ಚಡ್ಡಾ-ಅಲಿ ಫಜಲ್ ಮದುವೆಗೆ ಭರ್ಜರಿ ತಯಾರಿ: ನಟಿ ಧರಿಸುವ ಆಭರಣದ ಬಗ್ಗೆ ಇಂಟ್ರಸ್ಟಿಂಗ್ ಡೀಟೈಲ್ಸ್‌

ಬಾಲಿವುಡ್‌ನಲ್ಲಿ ಅದ್ದೂರಿ ಮದುವೆಗಳಿಗೇನೂ ಕಮ್ಮಿಯಿಲ್ಲ. ಡೇಟಿಂಗ್‌ನಲ್ಲಿ ಮುಳುಗಿದ್ದ ಅನೇಕ ಜೋಡಿಗಳು ದೇಶ ಹಾಗೂ ವಿದೇಶದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇದೀಗ ಬಾಲಿವುಡ್‌ನ ಮತ್ತೊಂದು ಜೋಡಿ ಹಸೆಮಣೆ ಏರಲು ಸಜ್ಜಾಗಿದ್ದು, ಮದುವೆಗೆ ಭರ್ಜರಿ ತಯಾರಿ ನಡೀತಿದೆ.

ರಿಚಾ ಮತ್ತು ಅಲಿ ಫಜಲ್ ಬಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಬ್ಬರು. ಇಬ್ಬರೂ ಅನೇಕ ವರ್ಷದಿಂದ ಪ್ರೀತಿಸುತ್ತಿದ್ದು, ಕೆಲವು ಕಾರ್ಯಕ್ರಮದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಿರುತ್ತಾರೆ.

ಬಹಳ ಸಮಯದ ಡೇಟಿಂಗ್ ನಂತರ, ಅಲಿ ಮತ್ತು ರಿಚಾ ಅಂತಿಮವಾಗಿ ಹಸೆಮಣೆ ಏರಲು ನಿರ್ಧರಿಸಿದ್ದಾರೆ. ಬಾಲಿವುಡ್‌ನ ಪ್ರಸಿದ್ಧ ಜೋಡಿಗಳಾದ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಮದುವೆಗಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Richa Chadha-Ali Fazal Wedding: Actress bridal jewellery to be made by 175 year old Bikaner family

ಇದೀಗ ಜೋಡಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದು, ಇದೇ ತಿಂಗಳ ಸೆಪ್ಟೆಂಬರ್ 30ರಿಂದ ಮದುವೆ ಶಾಸ್ತ್ರಗಳು ಆರಂಭಗೊಳ್ಳಲಿದೆ. ಮುಂಬೈ ಹಾಗೂ ದೆಹಲಿ ಎರಡೂ ಕಡೆಗಳಲ್ಲೂ ಅದ್ಧೂರಿಯಾಗಿ ಮದುವೆ ನಡೆಯಲಿದ್ದು, ಅಕ್ಟೋಬರ್ 7ರವರೆಗೆ ರಿಚಾ ಮತ್ತು ಆಲಿ ಫಜಲ್ ಮದುವೆಯ ಶಾಸ್ತ್ರಗಳು ನಡೆಯಲಿದೆ ಎಂದು ವರದಿಯಾಗಿದೆ.

ಮದುವೆಯ ತಯಾರಿ ಭರದಿಂದ ಸಾಗುತ್ತಿದ್ದು, ಅಲಿ ಹಾಗೂ ರಿಚಾ ಮದುವೆಯ ಪೂರ್ವ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯಲ್ಲಿ ರಿಚಾ ಸುಂದರವಾಗಿ ಕಾಣಲು ಎಲ್ಲಾ ರೀತಿಯ ತಯಾರಿ ಕೂಡ ನಡೆಯುತ್ತಿದ್ದು, ದೆಹಲಿಯಲ್ಲಿ ನಡೆಯುವ ಶಾಸ್ತ್ರಕ್ಕೆ ನಟಿ ಧರಿಸುವ ಆಭರಣವನ್ನು ಬಹಳ ವಿಶೇಷವಾಗಿ ಸಿದ್ದಪಡಿಸಲಾಗ್ತಿದೆ. 175 ವರ್ಷಗಳಿಂದ ಆಭರಣ ತಯಾರಿಕೆಯಲ್ಲಿ ಗುರ್ತಿಸಿಕೊಂಡಿರುವ ಕುಟುಂಬವು ರಿಚಾಳ ಆಭರಣ ತಯಾರಿಸಲಿದೆ. ಇನ್ನು ವಧು ರಿಚಾಗೆ ಅಂತರಾಷ್ಟ್ರೀಯ ವಿನ್ಯಾಸಕರು ಸೇರಿ ಒಟ್ಟು ಐದು ಮಂದಿ ಡಿಸೈನರ್‌ಗಳು ಆಕೆಯನ್ನು ಮದುವೆ ಸಿದ್ಧಗೊಳಿಸಲಿದ್ದಾರೆ.

ಅಲಿ ಹಾಗೂ ರಿಚಾ ಬಾಲಿವುಡ್‌ನ ಬಹು ಬೇಡಿಕೆಯ ಕಲಾವಿದರಾಗಿದ್ದು, ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನ ಮುಗಿಸಿಕೊಟ್ಟಿದ್ದಾರೆ. 1 ವಾರ ಮದುವೆಯ ಶಾಸ್ತ್ರಗಳು ನಡೆಯಲಿದ್ದು, ಸದ್ಯ ಮದುವೆಯ ತಯಾರಿಯಲ್ಲಿ ರಿಚಾ ಮತ್ತು ಆಲಿ ಫಜಲ್ ಬ್ಯುಸಿಯಾಗಿದ್ದಾರೆ. ಗುರು ಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಅಕ್ಟೋಬರ್‌ 1ರಂದು ಮದುವೆಯಾಗಲಿದ್ದಾರೆ.

ರಿಚಾ ಮತ್ತು ಅಲಿ ಫಜಲ್ ಮೊದಲ ಬಾರಿಗೆ 2012ರಲ್ಲಿ 'ಫುಕ್ರೆ' ಸಿನಿಮಾ ಚಿತ್ರೀಕರಣದ ಸೆಟ್‌ನಲ್ಲಿ ಭೇಟಿಯಾಗಿದ್ದರು. ಪ್ರಾರಂಭದ ದಿನಗಳಲ್ಲಿ ಉತ್ತಮ ಸ್ನೇಹಿತರಾಗಿದ್ದ ಇವರು ಬಳಿಕ ಡೇಟಿಂಗ್ ಆರಂಭಿಸಿದ್ದರು. 2019 ರಲ್ಲಿ ಅಲಿ, ರಿಚಾಗೆ ಪ್ರಪೋಸ್ ಮಾಡಿದ್ದು, ಆಕೆಯೂ ಪ್ರೀತಿಗೆ ಸಮ್ಮತಿ ಸೂಚಿಸಿದ್ದರು. ಇಬ್ಬರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದು, 2020ರಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಕೊರೊನಾ ಕಾರಣದಿಂದ ಮದುವೆಗೆ ಬ್ರೇಕ್‌ ಬಿದ್ದಿತ್ತು. ರಿಚಾ ಮತ್ತು ಅಲಿ ಇದೀಗ ಅದ್ಧೂರಿಯಾಗಿ ಮದುವೆಯಾಗಲು ಸಜ್ಜಾಗುತ್ತಿದ್ದಾರೆ.

ಬಾಲಿವುಡ್‌ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ರಿಚಾ ಚಡ್ಡಾ , ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದರು. ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ' ಬಯೋಪಿಕ್‌ನಲ್ಲಿ ರಿಚಾ ಚಡ್ಡಾ ಶಕೀಲಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕನ್ನಡ ಮಾತ್ರವಲ್ಲೇ ಬೇರೆ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗಿತ್ತು. ಆದರೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು.

More from Filmibeat

English summary
Actress Richa Chadha Wedding actress’ jewellery is being custom made by a 175 year old jeweller family from Bikaner who are custom making bridal jewellery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X