For Quick Alerts
  ALLOW NOTIFICATIONS  
  For Daily Alerts

  ರಿಚಾ ಚಡ್ಡಾ ಮಾನನಷ್ಟ ಮೊಕದ್ದಮೆ: 'ಯಾರನ್ನು ಕ್ಷಮೆ ಕೇಳಲ್ಲ' ಎಂದ ಪಾಯಲ್ ಘೋಷ್

  |

  ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಪಾಯಲ್ ಘೋಷ್, ಈ ವಿಚಾರದಲ್ಲಿ ರಿಚಾ ಚಡ್ಡಾ ಹೆಸರನ್ನು ಪ್ರಸ್ತಾಪಿಸಿದ್ದರು. ಈ ಸಂಬಂಧ ಪಾಯಲ್ ವಿರುದ್ಧ ರಿಚಾ ಚಡ್ಡಾ ಮಾನನಷ್ಟ ಮೊಕದ್ದಮೆ ಕೇಸ್ ದಾಖಲು ಮಾಡಿದ್ದರು.

  ರಿಚಾ ಚಡ್ಡಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ಇಂದು ಬಾಂಬೆ ಹೈ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತ್ತು. ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಪಾಯಲ್ ಘೋಷ್ ಪರ ವಕೀಲ ''ಪಾಯಲ್, ತಮ್ಮ ಹೇಳಿಕೆಯನ್ನು ಹಿಂಪಡೆಯಲು ಸಿದ್ಧರಿದ್ದಾರೆ, ಹಾಗೂ ಅಗತ್ಯ ಬಿದ್ದಲ್ಲಿ ಕ್ಷಮೆ ಕೇಳಲಿದ್ದಾರೆ'' ಎಂದು ಕೋರ್ಟ್‌ಗೆ ತಿಳಿಸಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಆದ್ರೆ, ಪಾಯಲ್ ಘೋಷ್ ಮಾತ್ರ ''ನಾನು ಯಾರ ಬಳಿಯೂ ಕ್ಷಮೆ ಕೇಳಲ್ಲ'' ಎಂದು ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ...

  ಲೈಂಗಿಕ ಕಿರುಕುಳ ಆರೋಪ: ತನ್ನ ಹೆಸರನ್ನು ಎಳೆದು ತಂದ ಪಾಯಲ್ ವಿರುದ್ಧ ರಿಚಾ ಗರಂ ಲೈಂಗಿಕ ಕಿರುಕುಳ ಆರೋಪ: ತನ್ನ ಹೆಸರನ್ನು ಎಳೆದು ತಂದ ಪಾಯಲ್ ವಿರುದ್ಧ ರಿಚಾ ಗರಂ

  ರಿಚಾ ಜೊತೆ ನನ್ನ ಸಂಘರ್ಷ ಇಲ್ಲ

  ರಿಚಾ ಜೊತೆ ನನ್ನ ಸಂಘರ್ಷ ಇಲ್ಲ

  ''ರಿಚಾ ಚಡ್ಡಾ ಜೊತೆ ನನಗೆ ಏನೂ ಸಂಘರ್ಷ ಇಲ್ಲ. ನಾವಿಬ್ಬರು ಮಹಿಳೆಯರು. ಮಹಿಳೆಯ ಪರವಾಗಿ ಭುಜಕ್ಕೆ ಭುಜ ಕೊಟ್ಟು ನಿಲ್ಲಬೇಕಿದೆ. ಆಕೆಗೆ ಕಿರುಕುಳ ನೀಡುವ ಯಾವುದೇ ಉದ್ದೇಶ ನನಗಿಲ್ಲ. ನನ್ನ ಹೋರಾಟ ಏನೇ ಇದ್ದರೂ ಆನುರಾಗ್ ಕಶ್ಯಪ್ ವಿರುದ್ಧ. ನಾನು ಆ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇನೆ'' ಎಂದು ರಿಚಾ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  ನಾನು ಯಾರ ಬಳಿಯೂ ಕ್ಷಮೆ ಕೇಳಲ್ಲ

  ನಾನು ಯಾರ ಬಳಿಯೂ ಕ್ಷಮೆ ಕೇಳಲ್ಲ

  ''ನಾನು ಯಾರಿಗೂ ಕ್ಷಮೆಯಾಚಿಸುತ್ತಿಲ್ಲ. ನಾನು ಅನ್ಯಾಯ ಮಾಡಿಲ್ಲ ಅಥವಾ ಯಾರ ಬಗ್ಗೆಯೂ ತಪ್ಪು ಹೇಳಿಕೆ ನೀಡಿಲ್ಲ. ಅನುರಾಗ್ ಕಶ್ಯಪ್ ನನಗೆ ಏನು ಹೇಳಿದ್ದರೋ ಅದನ್ನು ಮಾತ್ರ ನಾನು ಹೇಳಿದೆ'' ಎಂದು ರಿಚಾ ವಿರುದ್ಧದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

  ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ನಟಿ ಪಾಯಲ್ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ನಟಿ ಪಾಯಲ್

  ವಕೀಲರು ತಪ್ಪೊಪ್ಪಿಕೊಂಡರು, ನಟಿ ಆಗಲ್ಲ ಎಂದರು

  ವಕೀಲರು ತಪ್ಪೊಪ್ಪಿಕೊಂಡರು, ನಟಿ ಆಗಲ್ಲ ಎಂದರು

  ರಿಚಾ ಚಡ್ಡಾ ಹೂಡಿರುವ ಮಾನನಷ್ಟ ಮೊಕದ್ದಮೆ ಕೇಸ್‌ಗೆ ಸಂಬಂಧಿಸಿದಂತೆ ಪಾಯಲ್ ಪರ ವಕೀಲರು, ನ್ಯಾಯಾಧೀಶರ ಮುಂದೆ ''ಪಾಯಲ್ ಮುಗ್ದತೆಯಿಂದ ಈ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಹಿಂಪಡೆಯಲು ಸಿದ್ಧರಿದ್ದಾರೆ, ಅಗತ್ಯವಿದ್ದರೆ ಕ್ಷಮೆ ಕೇಳುತ್ತಾರೆ'' ಎಂದು ತಿಳಿಸಿದ್ದಾರೆ. ಆದ್ರೆ, ನಟಿ ಮಾತ್ರ ಈ ಬಗ್ಗೆ ''ನಾನು ಕ್ಷಮೆ ಕೇಳಲ್ಲ, ಏಕಂದ್ರೆ ಇದು ನಾನು ಹೇಳಿದ ಮಾತಲ್ಲ, ಅನುರಾಗ್ ಕಶ್ಯಪ್ ಹೇಳಿದ್ದು'' ಎಂದು ಸ್ಪಷ್ಟನೆ ನೀಡಿದ್ದಾರೆ.

  ರಿಚಾ ಬಗ್ಗೆ ಪಾಯಲ್ ಏನು ಹೇಳಿದ್ದರು?

  ರಿಚಾ ಬಗ್ಗೆ ಪಾಯಲ್ ಏನು ಹೇಳಿದ್ದರು?

  ಅನುರಾಗ್ ಕಶ್ಯಪ್ ವಿರುದ್ಧ ಗಂಭೀರ ಆರೋಪ ಮಾಡಿರುವ ಪಾಯಲ್ ಘೋಷ್ ನನ್ನನ್ನು ಬಲವಂತವಾಗಿ ಪಡೆದುಕೊಳ್ಳಲು ಪ್ರಯತ್ನಿಸಿದ್ದ ಎಂದು ಆರೋಪಿಸಿ ದೂರು ನೀಡಿದ್ದಾರೆ. 'ನಟಿಯರಾದ ರಿಚಾ ಚಡ್ಡಾ, ಹುಮಾ ಖುರೇಶಿ, ಮಾಹಿ ಗಿಲ್ ಅಂತಹ ನಟಿಯರು ನನ್ನ ಜೊತೆ ಲೈಂಗಿಕವಾಗಿ ಸಹಕರಿಸಿದ್ದರು' ಎಂದು ಅನುರಾಗ್ ಕಶ್ಯಪ್, ಪಾಯಲ್ ಬಳಿ ಹೇಳಿದ್ದರಂತೆ. ಈ ಹೇಳಿಕೆಯನ್ನು ಖಂಡಿಸಿರುವ ರಿಚಾ ಚಡ್ಡಾ, ಪಾಯಲ್ ವಿರುದ್ಧ 1 ಕೋಟಿ ಪರಿಹಾರ ನೀಡಬೇಕೆಂದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

  English summary
  Richa Chadha defamation Case: lawyer says she is ready to withdraw her statement and extend apology, but payal ghosh says ''i am Not apologizing to anyone''.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X