For Quick Alerts
  ALLOW NOTIFICATIONS  
  For Daily Alerts

  ಲೈಂಗಿಕ ಕಿರುಕುಳ ಆರೋಪ: ತನ್ನ ಹೆಸರನ್ನು ಎಳೆದು ತಂದ ಪಾಯಲ್ ವಿರುದ್ಧ ರಿಚಾ ಗರಂ

  |

  ಬಾಲಿವುಡ್ ನಲ್ಲಿ ಮೀ ಟೂ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಇತ್ತೀಚಿಗೆ ನಟಿ ಪಾಯಲ್ ಗೋಷ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಅನುರಾಗ್ ಕಶ್ಯಪ್ ವಿರುದ್ಧ ಆರೋಪ ಮಾಡುವಾಗ ಪಾಯಲ್, ರಿಚಾ ಚಡ್ಡಾ ಮತ್ತು ಹುಮಾ ಖುರೇಷಿ ಹೆಸರನ್ನು ಉಲ್ಲೇಖ ಮಾಡಿದ್ದಾರೆ.

  ಇದರಿಂದ ಸಿಟ್ಟಿಗೆದ್ದಿರುವ ನಟಿ ರಿಚಾ ಚಡ್ಡಾ, ಪಾಯಲ್ ಗೋಷ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ರಿಯಾ ಚಡ್ಡಾ ಪರ ವಕೀಲರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

  ''ನನ್ನನ್ನು ಕೆಟ್ಟದಾಗಿ ಬಲವಂತ ಮಾಡಿದ್ದ': ನಟಿಯ ಆರೋಪಕ್ಕೆ ಅನುರಾಗ್ ಕಶ್ಯಪ್ ಸ್ಪಷ್ಟನೆ''ನನ್ನನ್ನು ಕೆಟ್ಟದಾಗಿ ಬಲವಂತ ಮಾಡಿದ್ದ': ನಟಿಯ ಆರೋಪಕ್ಕೆ ಅನುರಾಗ್ ಕಶ್ಯಪ್ ಸ್ಪಷ್ಟನೆ

  "ನಮ್ಮ ಕಕ್ಷಿದಾರರು, ರಿಚಾ ಚಡ್ಡಾ ತನ್ನ ಹೆಸರನ್ನು ಅನಗತ್ಯವಾಗಿ ಮತ್ತು ಅವಹೇಳನಕಾರಿಯಾಗಿ ವಿವಾದಗಳಿಗೆ ಎಳೆದೊಯ್ಯುವುದನ್ನು ಖಂಡಿಸಿದ್ದಾರೆ. ನಮ್ಮ ಕಕ್ಷಿದಾರರು ನಿಜವಾಗಿಯೂ ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ದೊರೆಯಬೇಕು ಎಂದು ನಂಬಿದ್ದಾರೆ. ಮಹಿಳೆಯರು ಕೆಲಸ ಮಾಡುವ ಜಾಗದಲ್ಲಿ ಘನತೆ, ಗೌರವ, ಸಮಾನತೆ ಇರಬೇಕು ಎಂದು ಕಾನೂನಿನಲ್ಲಿದೆ. ಇತರ ಮಹಿಳೆಯರಿಗೆ ಕಿರುಕುಳ ನೀಡುವುದು, ಯಾವುದೇ ಮಹಿಳೆ ತಮ್ಮ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳಲು ಅನುಮತಿಸಲಾಗುವುದಿಲ್ಲ" ಎಂದು ಹೇಳಿದ್ದಾರೆ.

  ನಟಿ ಪಾಲಯ್, ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ, 'ಅನುರಾಗ್ ಕಶ್ಯಪ್ ನನ್ನ ಬಳಿ ಕೆಟ್ಟದಾಗಿ ನಡೆದುಕೊಂಡು, ಬಲವಂತ ಮಾಡಿದ್ದ. ಪ್ರಧಾನಿ ಮೋದಿ ಅವರು ದಯವಿಟ್ಟು ಆತನ ವಿರುದ್ಧ ಕ್ರಮ ತೆಗೆದುಕೊಳ್ಳಿ. ದೇಶಕ್ಕೆ ಆ ಸತ್ಯ ಏನು ಎಂಬುವುದು ಗೊತ್ತಾಗಲಿ. ಇದರಿಂದ ನನಗೆ ತೊಂದರೆಯಾಗಲಿದೆ ಎನ್ನುವ ಅರಿವು ನನಗಿದೆ. ನಾನು ಅಪಾಯಕ್ಕೆ ಸಿಲುಕಿಕೊಳ್ಳಲಿದ್ದೇನೆ. ನನಗೆ ಸಹಾಯ ಮಾಡಿ'' ಎಂದು ನಟಿ ಪಾಯಲ್ ದೂರಿದ್ದರು.

  ಪಂಜಾಬ್ ಪಂದ್ಯದಲ್ಲಿ Sudeep ರನ್ನು ಕಾದಿದ್ದು ಒಂದೇ ಪ್ರಶ್ನೆ | Filmibeat Kannada

  ಪಾಯಲ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಅನುರಾಗ್ ''ಎಂಥಹಾ ಮಾತು, ನನ್ನನ್ನು ಮೌನಗೊಳಿಸುವ ಪ್ರಯತ್ನದಲ್ಲಿ ಇದು ತುಂಬಾ ಸಮಯ ತೆಗೆದುಕೊಂಡಿತು, ಪರವಾಗಿಲ್ಲ. ಆದರೆ ನೀವೊಬ್ಬ ಮಹಿಳೆಯಾಗಿದ್ದರೂ ಈ ಪ್ರಯತ್ನದಲ್ಲಿ ಇತರ ಮಹಿಳೆಯರನ್ನು ಎಳೆದಿದ್ದೀರಿ. ಸ್ವಲ್ಪ ಮಿತಿ ಇರಲಿ ಮೇಡಂ. ನೀವು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಆಧಾರವಿಲ್ಲ'' ಸ್ಪಷ್ಟನೆ ನೀಡಿದ್ದಾರೆ.

  English summary
  Actress Richa Chadha To Drag Payal Ghosh To Court For Naming her in #MeToo allegation against Anurag Kashyap.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X