Don't Miss!
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕಾಂತಾರ' ಬಗ್ಗೆ ಡೆಲಿವರಿ ಬಾಯ್ ಕೇಳಿದ ಪ್ರಶ್ನೆಗೆ ಅಣ್ಣ ಬಿಟ್ಟುಬಿಡಿ ಎಂದು ಕೈಮುಗಿದ ರಿಷಬ್ ಶೆಟ್ಟಿ!
ಕಾಂತಾರ ಚಿತ್ರದ ಹವಾ ಎಲ್ಲೆಡೆ ಜೋರಾಗಿದೆ. ದಸರಾ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದ ಕಾಂತಾರ ಚಿತ್ರ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡಿತ್ತು. ನಂತರ ಚಿತ್ರ ಪರಭಾಷಾ ಸಿನಿ ಪ್ರೇಕ್ಷಕರಿಂದ ಪಡೆದುಕೊಂಡ ವಿಪರೀತ ಪ್ರಶಂಸೆಯಿಂದಾಗಿ ಚಿತ್ರವನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಸಹ ಡಬ್ ಮಾಡಿ ಬಿಡುಗಡೆಗೊಳಿಸಲಾಯಿತು.
ಹೀಗೆ ಬಿಡುಗಡೆಗೊಂಡ ನಂತರದ ದಿನಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾದ ಕಾಂತಾರಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು. ಮಲಯಾಳಂನಲ್ಲಿಯೇ ಇಪ್ಪತ್ತಕ್ಕೂ ಹೆಚ್ಚು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಕಾಂತಾರ ಚಿತ್ರ ತೆಲುಗಿನಲ್ಲಿ ಐವತ್ತು ಕೋಟಿ ಕ್ಲಬ್ ಸೇರಿ ದಸರಾ ಪ್ರಯುಕ್ತ ಬಿಡುಗಡೆಗೊಂಡಿದ್ದ ತೆಲುಗು ಚಿತ್ರಗಳು ತಮ್ಮದೇ ನೆಲದಲ್ಲಿ ನೆಲ ಕಚ್ಚುವಂತೆ ಮಾಡಿತ್ತು.
ಇನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡ ಕಾಂತಾರ ಹಿಂದಿ ವರ್ಷನ್ ಸಹ ಅಭೂತಪೂರ್ವ ಯಶಸ್ಸನ್ನು ಸಾಧಿಸಿತು. ಉತ್ತರ ಭಾರತದಲ್ಲಿ ಸುಮಾರು ನೂರು ಕೋಟಿ ಗಳಿಸಿದ ಕಾಂತಾರ ಹಿಂದಿ ಅವತರಣಿಕೆ ಇಂದಿಗೂ ಸಹ ಪುಣೆ ಹಾಗೂ ಮುಂಬೈ ರೀತಿಯ ನಗರಗಳ ಹಲವಾರು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಹೌದು, ಅಮೆಜಾನ್ ಪ್ರೈಮ್‌ನಲ್ಲಿ ನವೆಂಬರ್ ಕೊನೆಯ ವಾರದಂದು ಕಾಂತಾರ ಕನ್ನಡ, ತೆಲುಗು, ತಮಿಳು ಹಾಗ ಮಲಯಾಳಂ ವರ್ಷನ್ ಬಿಡುಗಡೆಗೊಂಡಿದ್ದು, ಇನ್ನೂ ಸಹ ಹಿಂದಿ ವರ್ಷನ್ ಬಿಡುಗಡೆಗೊಳ್ಳದ ಕಾರಣ ಹಿಂದಿ ವರ್ಷನ್ ವೀಕ್ಷಿಸಲು ಜನ ಚಿತ್ರಮಂದಿರದತ್ತ ಬರುತ್ತಿದ್ದಾರೆ. ಇದೇ ವೇಳೆ ಕಾಂತಾರ ಹಿಂದಿ ವರ್ಷನ್ ಓಟಿಟಿಗೆ ಯಾವಾಗ ಬರಲಿದೆ ಎಂಬ ಪ್ರಶ್ನೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ.

ಕಾಂತಾರ ಹಿಂದಿ ವರ್ಷನ್ ಓಟಿಟಿ ಬಿಡುಗಡೆ ಘೋಷಣೆ
ಹೀಗೆ ಸಾಲು ಸಾಲು ಪ್ರಶ್ನೆಗಳು ಎದುರಾದ ಬೆನ್ನಲ್ಲೇ ನೆಟ್‌ಫ್ಲಿಕ್ಸ್ ಕಾಂತಾರ ಹಿಂದಿ ವರ್ಷನ್ ಓಟಿಟಿ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಇದೇ ಡಿಸೆಂಬರ್ 9ರಂದು ಕಾಂತಾರ ಹಿಂದಿ ವರ್ಷನ್ ಪ್ರಸಾರವಾಗಲಿದೆ ಎಂದು ನೆಟ್‌ಫ್ಲಿಕ್ಸ್ ಘೋಷಿಸಿದೆ. ಸದ್ಯ ಈ ಸುದ್ದಿ ಕಾಂತಾರ ಹಿಂದಿ ವರ್ಷನ್‌ಗಾಗಿ ಕಾಯುತ್ತಿದ್ದವರಿಗೆ ಸಂತಸ ತಂದಿದೆ.

ಡೆಲಿವರಿಗೆ ಬಾಯ್‌ಗೆ ಕೈಮುಗಿದ ರಿಷಬ್
ಇನ್ನು ಕಾಂತಾರ ಹಿಂದಿ ವರ್ಷನ್ ಓಟಿಟಿ ಬಿಡುಗಡೆಗೆ ಇದ್ದ ಹೈಪ್ ಕುರಿತು ನೆಟ್‌ಫ್ಲಿಕ್ಸ್ ರಿಷಬ್ ಶೆಟ್ಟಿಯವರನ್ನು ಇಟ್ಟುಕೊಂಡು ವಿಶೇಷ ಪ್ರೊಮೊವೊಂದನ್ನು ಬಿಡುಗಡೆಗೊಳಿಸಿದೆ. ಈ ಪ್ರೊಮೊದಲ್ಲಿ ರಿಷಬ್ ಶೆಟ್ಟಿ ಮೊಬೈಲ್‌ಗೆ ಕಾಂತಾರ ಹಿಂದಿ ವರ್ಷನ್ ಓಟಿಟಿ ಬಿಡುಗಡೆ ಯಾವಾಗ ಎಂಬ ಸಾಲು ಸಾಲು ಪ್ರಶ್ನೆಗಳು ಮೆಸೇಜ್ ಮೂಲಕ ಕೇಳಿ ಬರುತ್ತವೆ ಹಾಗೂ ಇದರಿಂದ ರಿಷಬ್ ಶೆಟ್ಟಿ ಯಾವಾಗ ಬಿಡುಗಡೆ ಎಂದು ನನಗೇನು ಗೊತ್ತು ಎಂದು ಗೊಣಗುತ್ತಾ ಬೇಸರಕ್ಕೊಳಗಾಗುತ್ತಾರೆ. ಇದೇ ಸಮಯದಲ್ಲಿ ಕಾಲಿಂಗ್ ಬೆಲ್ ಶಬ್ದ ಬಂದ ಕಾರಣ ಬಾಗಿಲು ತೆರೆಯುವ ರಿಷಬ್ ಶೆಟ್ಟಿಗೆ ಪಾರ್ಸೆಲ್ ನೀಡಲು ಬಂದಿದ್ದ ಡೆಲಿವರಿ ಬಾಯ್ ಸಹ ಕಾಂತಾರ ಹಿಂದಿ ವರ್ಷನ್ ಓಟಿಟಿ ಯಾವಾಗ ಎಂಬ ಪ್ರಶ್ನೆಯನ್ನು ಕೇಳುತ್ತಾನೆ. ಈ ಪ್ರಶ್ನೆಗೆ ಮತ್ತೆ ಬೇಸರಗೊಳ್ಳುವ ರಿಷಬ್ ಅಣ್ಣ ಎಂದು ಕೈ ಮುಗಿದು ಬಾಗಿಲು ಹಾಕಿಕೊಳ್ತಾರೆ.

ಕನ್ನಡಿಗರ ಚಿತ್ರವೊಂದಕ್ಕೆ ಈ ಮಟ್ಟಿಗಿನ ಕ್ರೇಜ್ ಇದೇ ಮೊದಲು
ಹೀಗೆ ಪ್ರಶ್ನೆಗಳಿಂದ ಬೇಸರಕ್ಕೊಳಗಾಗುವ ರಿಷಬ್ ನಂತರ ಇದೇ ವಿಡಿಯೊದಲ್ಲಿ ಕಾಂತಾರ ಹಿಂದಿ ವರ್ಷನ್ ಡಿಸೆಂಬರ್ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನು ತಿಳಿಸುತ್ತಾರೆ. ಹೀಗೆ ಕನ್ನಡಿಗರು ತಯಾರಿಸಿದ ಚಿತ್ರವೊಂದರ ಓಟಿಟಿ ಬಿಡುಗಡೆಯ ದಿನಾಂಕ ಘೋಷಿಸಲು ನೆಟ್‌ಫ್ಲಿಕ್ಸ್ ವಿಭಿನ್ನ ಪ್ರೊಮೊ ಬಿಡುಗಡೆ ಮಾಡಿದ್ದು ಇದೇ ಮೊದಲು ಹಾಗೂ ಇಷ್ಟರ ಮಟ್ಟಿಗೆ ವೀಕ್ಷಕರು ಸಹ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳುತ್ತಾ ಚಿತ್ರಕ್ಕಾಗಿ ಕಾದದ್ದೂ ಸಹ ಇದೇ ಮೊದಲು ಎಂದು ಹೇಳಬಹುದು.