For Quick Alerts
  ALLOW NOTIFICATIONS  
  For Daily Alerts

  ಭಾನುವಾರ ಇಂಡಿಯಾನೂ ಗೆಲ್ತು.. 'ಕಾಂತಾರ'ನೂ ಗೆಲ್ತು.. ಹೇಗೆ ಗೊತ್ತಾ?

  |

  ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳು 100 ಕೋಟಿ ರೂ. ಕಲೆಕ್ಷನ್ ಮಾಡುವುದೇ ಕನಸಿನ ಮಾತಾಗಿತ್ತು. ಆದರೆ KGF ಸರಣಿ ಸಿನಿಮಾಗಳು ಆ ಮಾತನ್ನು ಸುಳ್ಳಾಗಿಸಿ 1000 ಕೋಟಿ ರೂ. ಕಲೆಕ್ಷನ್ ಕೂಡ ಸಾಧ್ಯ ಎನ್ನುವುದನ್ನು ಸಾಬೀತು ಮಾಡಿ ತೋರಿಸಿತ್ತು. ಹಿಂದಿ ಬೆಲ್ಟ್‌ನಲ್ಲಿ 'ಕಾಂತಾರ' ಅಬ್ಬರ ಹೇಗಿದೆ ಅಂದರೆ ಬಾಲಿವುಡ್‌ನಲ್ಲೇ ಸಿನಿಮಾ 100 ಕೋಟಿ ರೂ. ಗಳಿಸುವ ಸುಳಿವು ಸಿಗ್ತಿದೆ.

  ಯಾವುದೇ ಸಿನಿಮಾ ಆದರೂ ದಿನದಿಂದ ದಿನಕ್ಕೆ ಕಲೆಕ್ಷನ್ ಕಮ್ಮಿ ಆಗುತ್ತದೆ. ಆದರೆ 'ಕಾಂತಾರ' ವಿಚಾರದಲ್ಲಿ ಇದು ಸುಳ್ಳಾಗಿದೆ. ಇಂದಿಗೂ ಸಿನಿಮಾ ಕೆಲವೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. 4ನೇ ವಾರಾಂತ್ಯ ಹಿಂದಿ ವರ್ಷನ್ ಸಿನಿಮಾ 8 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಬಾಲಿವುಡ್ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರವನ್ನು ಸುಳ್ಳಾಗಿಸಿ ಶಿವ ಗೆಲುವಿನ ನಾಗಾಲೋಟ ಮುಂದುವರೆಸಿದ್ದಾನೆ. ಈ 4 ವಾರದಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾಗಳೆಲ್ಲಾ ಥಿಯೇಟರ್‌ನಿಂದ ಎತ್ತಂಗಡಿ ಆಗಿವೆ. ಇನ್ನು ಕೆಲವು ದಿನಗಳ ಹಿಂದಿ ಬೆಲ್ಟ್‌ನಲ್ಲಿ 'ಕಾಂತಾರ' ಆರ್ಭಟ ತಡೆಯುವವರೇ ಇಲ್ಲ ಎನ್ನುವಂತಾಗಿದೆ.

  ರಜನಿ ಜೊತೆ ರಿಷಬ್ 1 ಗಂಟೆ ಸಂಭಾಷಣೆ: 'ಕಾಂತಾರ' ಬಿಟ್ಟು 'ಬೆಲ್‌ ಬಾಟಂ' ಕಥೆ ಬಂದಿದ್ಯಾಕೆ?ರಜನಿ ಜೊತೆ ರಿಷಬ್ 1 ಗಂಟೆ ಸಂಭಾಷಣೆ: 'ಕಾಂತಾರ' ಬಿಟ್ಟು 'ಬೆಲ್‌ ಬಾಟಂ' ಕಥೆ ಬಂದಿದ್ಯಾಕೆ?

  ಸರಿಯಾದ ಪ್ರಮೋಷನ್ ಇಲ್ಲದೇ 'ಕಾಂತಾರ' ಹಿಂದಿ ವರ್ಷನ್ ರಿಲೀಸ್ ಆಗಿತ್ತು. ಸೆಪ್ಟೆಂಬರ್ 30ಕ್ಕೆ ಕನ್ನಡದಲ್ಲಿ ರಿಲೀಸ್ ಆಗಿದ್ದ ಸಿನಿಮಾ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಹಿಂದಿ ಡಬ್ ಮಾಡುವಂತೆ ಬೇಡಿಕೆ ಶುರುವಾದ ಬೆನ್ನಲ್ಲೇ ಡಬ್ ಮಾಡಿ ರಿಲೀಸ್ ಮಾಡಿದ್ದರು. ಆದರೂ ಕೂಡ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೀತಿದೆ.

  24ನೇ ದಿನ ₹4.50 ಕೋಟಿ ಕಲೆಕ್ಷನ್

  24ನೇ ದಿನ ₹4.50 ಕೋಟಿ ಕಲೆಕ್ಷನ್

  'ಕಾಂತಾರ' ಹಿಂದಿ ವರ್ಷನ್ 24ನೇ ದಿನ ಬರೋಬ್ಬರಿ 4.50 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಸದ್ಯ ಭಾರತದಲ್ಲಿ ಪ್ರದರ್ಶನ ಆಗುತ್ತಿರುವ ಯಾವುದೇ ಸಿನಿಮಾ ಭಾನುವಾರ ಇಷ್ಟು ಕಲೆಕ್ಷನ್ ಮಾಡಿಲ್ಲ. ಟಿ20 ವಿಶ್ವಕಪ್ ಭಾರತ Vs ಜಿಂಬಾಬ್ವೆ ಪಂದ್ಯ ಇದ್ದರೂ ಕೂಡ ಸಿನಿಮಾ ಈ ಪಾಟಿ ಕಲೆಕ್ಷನ್ ಮಾಡಿರುವುದು ಬಾಲಿವುಡ್ ಮಂದಿಗೂ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಭಾರತ ತಂಡದ ಕ್ರಿಕೆಟ್ ಪಂದ್ಯ ಇದ್ದರೆ ಜನ ಥಿಯೇಟರ್‌ಗೆ ಬರೋದಿಲ್ಲ ಎನ್ನುವ ಮಾತಿದೆ. ಆದರೆ ಅದನ್ನು 'ಕಾಂತಾರ' ಸುಳ್ಳಾಗಿಸಿದೆ. ಭಾರತ ಕ್ರಿಕೆಟ್ ಮೈದಾನದಲ್ಲಿ ಗೆದ್ದರೆ ರಿಷಬ್ ಶೆಟ್ಟಿ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದಾರೆ.

  ಇನ್ನೂ 'ಕಾಂತಾರ' ನೋಡಿಲ್ಲ ಎಂದ ಶಿವಣ್ಣ ಯಾವಾಗ ನೋಡುತ್ತೇನೆ ಎಂಬುದನ್ನೂ ತಿಳಿಸಿದ್ರುಇನ್ನೂ 'ಕಾಂತಾರ' ನೋಡಿಲ್ಲ ಎಂದ ಶಿವಣ್ಣ ಯಾವಾಗ ನೋಡುತ್ತೇನೆ ಎಂಬುದನ್ನೂ ತಿಳಿಸಿದ್ರು

  ಹಿಂದಿ ವರ್ಷನ್ ಗಳಿಕೆ ₹62.40 ಕೋಟಿ

  ಹಿಂದಿ ವರ್ಷನ್ ಗಳಿಕೆ ₹62.40 ಕೋಟಿ

  4 ವಾರಕ್ಕೆ 'ಕಾಂತಾರ' ಹಿಂದಿ ವರ್ಷನ್ ಬರೋಬ್ಬರಿ 62.40 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಫಸ್ಟ್ ವೀಕೆಂಡ್ 7.52 ಕೋಟಿ ರೂ. ಗಳಿಸಿದ್ದ ಸಿನಿಮಾ 2ನೇ ವೀಕೆಂಡ್ 7.25 ಕೋಟಿ ರೂ. ಕಲೆಕ್ಷನ್ ಮಾಡಿತ್ತು. 4ನೇ ವಾರದ ಶುಕ್ರವಾರ 2.10 ಕೋಟಿ, ಶನಿವಾರ 4.15 ಕೋಟಿ ಹಾಗೂ ಭಾನುವಾರ 4.50 ಸೇರಿ 10.75 ಕೋಟಿ ರೂ. ಗಳಿಕೆ ಮಾಡಿದೆ ಎಂದು ಬಾಲಿವುಡ್ ಪಂಡಿತ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ.

  100 ಕೋಟಿ ಗಳಿಸುತ್ತಾ ಹಿಂದಿ ವರ್ಷನ್?

  100 ಕೋಟಿ ಗಳಿಸುತ್ತಾ ಹಿಂದಿ ವರ್ಷನ್?

  ಸದ್ಯ 62.40 ಕೋಟಿ ರೂ. ಕಲೆಕ್ಷನ್ ಮಾಡಿರುವ ಸಿನಿಮಾ 75 ಕೋಟಿ ರೂ. ಗಳಿಕೆಯತ್ತ ದಾಪುಗಾಲು ಇಟ್ಟಿದೆ. ಸಿನಿಮಾ ಕ್ರೇಜ್ ನೋಡುತ್ತಿದ್ದರೆ 100 ಕೋಟಿ ರೂ. ಬಾಚಿದರೂ ಅಚ್ಚರಿ ಪಡಬೇಕಿಲ್ಲ ಎಂದು ಬಾಲಿವುಡ್ ಸಿನಿಮಾ ಪಂಡಿತರು ಹೇಳುತ್ತಿದ್ದಾರೆ. ಸದ್ಯಕ್ಕೆ ಯಾವುದೇ ದೊಡ್ಡ ಹಿಂದಿ ಸಿನಿಮಾಗಳು ರಿಲೀಸ್ ಆಗದೇ ಇರುವುದು ಕೂಡ ರಿಷಬ್ ಶೆಟ್ಟಿ ಚಿತ್ರಕ್ಕೆ ಪ್ಲಸ್ ಆಗಲಿದೆ.

  'ಪುಷ್ಪ' ಟೋಟಲ್ ಕಲೆಕ್ಷನ್ ಹಿಂದಿಕ್ಕಲು 'ಕಾಂತಾರ' ಇನ್ನೆಷ್ಟು ಕೋಟಿ ಗಳಿಸಬೇಕು? ಪುಷ್ಪ.. ತಗ್ಗಲೇಬೇಕು!'ಪುಷ್ಪ' ಟೋಟಲ್ ಕಲೆಕ್ಷನ್ ಹಿಂದಿಕ್ಕಲು 'ಕಾಂತಾರ' ಇನ್ನೆಷ್ಟು ಕೋಟಿ ಗಳಿಸಬೇಕು? ಪುಷ್ಪ.. ತಗ್ಗಲೇಬೇಕು!

  ಕೆಲವೆಡೆ ಇಂದಿಗೂ ಹೌಸ್‌ಫುಲ್

  ಕೆಲವೆಡೆ ಇಂದಿಗೂ ಹೌಸ್‌ಫುಲ್

  ತಿಂಗಳು ಕಳೆದರೂ 'ಕಾಂತಾರ' ಹವಾ ಮಾತ್ರ ಕಮ್ಮಿ ಆಗುತ್ತಿಲ್ಲ. ಕೇರಳ, ಮಂಗಳೂರು, ಬೆಂಗಳೂರಿನ ಕೆಲವೆಡೆ ಸಂಜೆ ಹೊತ್ತು ಸಿನಿಮಾ ಇಂದಿಗೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ತಮಿಳುನಾಡಿದ 150ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ಆಂಧ್ರ ತೆಲಂಗಾಣದಲ್ಲೂ ಒಳ್ಳೆ ಕಲೆಕ್ಷನ್ ಇದೆ. ಇನ್ನು ವಿದೇಶಗಳಲ್ಲೂ 'ಕಾಂತಾರ' ಆರ್ಭಟ ಮುಂದುವರೆದಿದೆ. ವಿಶ್ವದಾದ್ಯಂತ ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

  English summary
  Rishab Shetty Starrer Kantara Hindi version is racing towards the 100 Cr mark at the box office. Movie Stays strong on its 6th Sunday at the box office. Hindi version is collecting more than the current running films. Know More.
  Monday, November 7, 2022, 17:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X