ಶ್ರೀದೇವಿಯನ್ನ ಗುರುತು ಹಿಡಿಯದ ರಿಶಿ ಕಪೂರ್: ಟ್ವಿಟ್ಟರ್ ನಲ್ಲಿ ಯದ್ವಾತದ್ವಾ ಟ್ರೋಲ್.!

By Harshitha

ಹಿಂದು ಮುಂದು ಯೋಚನೆ ಮಾಡದೆ, ಮನಸ್ಸಿಗೆ ಅನಿಸಿದ್ದನ್ನ ನೇರವಾಗಿ ಹೇಳುವ ಜಾಯಮಾನ ಬಾಲಿವುಡ್ ನ ಹಿರಿಯ ನಟ ರಿಶಿ ಕಪೂರ್ ರದ್ದು. ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೆ ಮಾತನಾಡಿ ನಟ ರಿಶಿ ಕಪೂರ್ ಹಲವು ಬಾರಿ ವಿವಾದಕ್ಕೆ ಗ್ರಾಸವಾಗಿದ್ದಾರೆ. ಈಗಲೂ ಹೀಗೆ ಆಗಿದೆ.

ಬಹುಭಾಷಾ ನಟಿ, ದಿವಂಗತ ಶ್ರೀದೇವಿ ಜೊತೆಗೆ ನಾಲ್ಕೈದು ಸಿನಿಮಾಗಳಲ್ಲಿ ರಿಶಿ ಕಪೂರ್ ಅಭಿನಯಿಸಿದ್ದಾರೆ. 'ಚಾಂದಿನಿ', 'ನಾಗಿನ' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವುದು ಇದೇ ಶ್ರೀದೇವಿ ಹಾಗೂ ರಿಶಿ ಕಪೂರ್ ಜೋಡಿ. ಹೀಗಿದ್ದರೂ, ನಟಿ ಶ್ರೀದೇವಿಯನ್ನ ರಿಶಿ ಕಪೂರ್ ಗುರುತು ಹಿಡಿಯುವಲ್ಲಿ ವಿಫಲರಾಗಿದ್ದಾರೆ.!

ಹೌದು, ಶ್ರೀದೇವಿಯನ್ನ ಕಂಡು ಹಿಡಿಯದ ರಿಶಿ ಕಪೂರ್ ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ, ಏನೀ ವಿವಾದ ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ರಿಶಿ ಕಪೂರ್ ಮಾಡಿರುವ ಟ್ವೀಟ್ ಏನು.?

'ಕೌನ್ ಸಾಚಾ ಕೌನ್ ಜೂಟಾ' ಚಿತ್ರದ ಹಾಡಿನ ವಿಡಿಯೋನ GIF ಇಮೇಜ್ ಮಾಡಿ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದರು. ಅದನ್ನ ನೋಡಿದ ರಿಶಿ ಕಪೂರ್, ''ಇದು ಯಾವ ಸಿನಿಮಾ.? ನನ್ನ ಜೊತೆ ಇರುವ ನಟಿಯನ್ನು ಗುರುತು ಹಿಡಿಯಲು ಆಗುತ್ತಿಲ್ಲ'' ಎಂದು ಟ್ವೀಟಿಸಿದ್ದಾರೆ.

ಟ್ರೋಲ್ ಶುರು.!

ಟ್ರೋಲ್ ಶುರು.!

''ನಿಮಗೆ ಶ್ರೀದೇವಿ ಗುರುತು ಸಿಗಲಿಲ್ವಾ.? 'ನಾಗಿನ' ಹಾಗೂ 'ಚಾಂದಿನಿ' ಚಿತ್ರದಲ್ಲಿ ನೀವು ಶ್ರೀದೇವಿ ಜೊತೆ ನಟಿಸಿರಲಿಲ್ಲ ಅಂದ್ರೆ, ನಿಮ್ಮನ್ನ ಯಾರೂ ಗುರುತು ಹಿಡಿಯುತ್ತಿರಲಿಲ್ಲ'' ಎಂದು ಟ್ವೀಟಿಗರು ಲೇವಡಿ ಮಾಡಿದ್ದಾರೆ.

ಜ್ಞಾಪಕ ಶಕ್ತಿಗೆ ಏನಾಗಿದೆ.?

ಜ್ಞಾಪಕ ಶಕ್ತಿಗೆ ಏನಾಗಿದೆ.?

''ನಿಮ್ಮ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಕೊಟ್ಟ ಸೂಪರ್ ಸ್ಟಾರ್ ಶ್ರೀದೇವಿಯನ್ನ ಕಂಡು ಹಿಡಿಯಲು ನಿಮಗೆ ಸಾಧ್ಯ ಆಗಿಲ್ಲ ಅಂದ್ರೆ ನೀವು ನಿಮ್ಮ ಜ್ಞಾಪಕ ಶಕ್ತಿಯನ್ನ ಕಳೆದುಕೊಂಡಿರಬೇಕು. ಇಲ್ಲಾಂದ್ರೆ, ಅತಿಯಾಗಿ ಡ್ರಗ್ಸ್ ಸೇವಿಸಿರಬೇಕು. ಹೇಗಿದ್ದರೂ, ಬೇಗ ಹುಷಾರಾಗಿ'' ಅಂತೆಲ್ಲಾ ಜನ ಟ್ವೀಟ್ ಮಾಡಿದ್ದಾರೆ.

ಯದ್ವಾತದ್ವಾ ಟ್ರೋಲ್

ಯದ್ವಾತದ್ವಾ ಟ್ರೋಲ್

''ಅಷ್ಟಕ್ಕೂ, ಯಾರೀ ರಿಶಿ ಕಪೂರ್.?'' ಅಂತೆಲ್ಲಾ ಕೇಳುವ ಮೂಲಕ ರಿಶಿ ಕಪೂರ್ ಗೆ ಟ್ವೀಟಿಗರು ಬಿಸಿ ಮುಟ್ಟಿಸುತ್ತಿದ್ದಾರೆ. ಮಾಡಿಕೊಂಡ ಎಡವಟ್ಟಿಗೆ ಟ್ವಿಟ್ಟರ್ ನಲ್ಲಿ ರಿಶಿ ಕಪೂರ್ ಯದ್ವಾತದ್ವಾ ಟ್ರೋಲ್ ಆಗುತ್ತಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ, ರಿಶಿ ಕಪೂರ್ ಮಾತ್ರ ಸದ್ಯಕ್ಕೆ ಸೈಲೆಂಟ್ ಆಗಿದ್ದಾರೆ.

More from Filmibeat

English summary
Bollywood Actor Rishi Kapoor gets trolled in Twitter for not recognizing Late Actress Sridevi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X