ಆಲಿಯಾ-ರಣ್ಬೀರ್ ಮದುವೆ ಬಗ್ಗೆ ಸುಳಿವು ನೀಡಿದ ಟ್ವೀಟ್.!

By Bharath Kumar

ಬಾಲಿವುಡ್ ನ ಒಂದೊಂದೆ ತಾರಾ ಜೋಡಿಯ ಮದುವೆ ಸುದ್ದಿಯಾಗುತ್ತಲೇ ಇದೆ. ಅನುಷ್ಕಾ-ಕೊಹ್ಲಿ ನಂತರ ಸೋನಂ ಕಪೂರ್ ಮದುವೆ ಆಯ್ತು. ಈಗ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಮದುವೆ ನವೆಂಬರ್ ನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ, ಮತ್ತೊಂದು ಜೋಡಿ ಹಕ್ಕಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಗಳು ಚರ್ಚೆಯಾಗುತ್ತಿದೆ.

ಬಹುದಿನಗಳಿಂದ ಪ್ರೀತಿಯಲ್ಲಿರುವ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ದಾಂಪತ್ಯ ಜೀವನಕ್ಕೆ ಅಣಿಯಾಗಿದ್ದಾರಂತೆ. ಈ ಬಗ್ಗೆ ಎರಡು ಕುಟುಂಬಗಳಲ್ಲಿ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಇದೀಗ, ಆಲಿಯಾ ಭಟ್ ಜೊತೆ ಮಗನ ಮದುವೆ ನಿಜ ಇರಬಹುದು ಎಂದು ರಣ್ಬೀರ್ ಕಪೂರ್ ಅವರ ತಂದೆ ರಿಷಿ ಕಪೂರ್ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

Rishi Kapoor just hint at Alia Bhatt and Ranbir Kapoor

ಇದ್ದಕ್ಕಿದ್ದಂತೆ ಆಲಿಯಾ ಭಟ್ ಅವರ ಕುಟುಂಬದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯಾವುದೇ ಬೆಳವಣಿಗೆ ಇಲ್ಲ, ಒಟ್ಟಿಗೆ ಸಿನಿಮಾ ಮಾಡ್ತಿಲ್ಲ, ಬೇರೆ ಏನೂ ವಿಶೇಷತೆಯೂ ಇಲ್ಲ. ಹೀಗಿದ್ದರೂ ಆಲಿಯಾ ಭಟ್ ಫ್ಯಾಮಿಲಿ ಸದಸ್ಯರಿಗೆ ಧನ್ಯವಾದ ತಿಳಿಸಿದ್ದಾರೆ. ಇದು ಸಹಜವಾಗಿ ಹಲವಯ ಕುತೂಹಲ, ಅನುಮಾನಗಳಿಗೆ ಕಾರಣವಾಗಿದೆ.

''ಭಟ್ ಕುಟುಂಬದಲ್ಲಿ (ಸಂಬಂಧಿಕರು) ಬಹುತೇಕ ಅತ್ಯುತ್ತಮ ಪ್ರತಿಭೆಗಳ ಜೊತೆ ಕೆಲಸ ಮಾಡಿದ್ದೇನೆ. ಮಹೇಶ್ ಭಟ್, ಮುಕೇಶ್ ಭಟ್, ರಾಬಿನ್ ಭಟ್, ಪೂರ್ಣಿಮಾ, ಸೋನಿ ಭಟ್, ಪೂಜಾ ಭಟ್, ಇಮ್ರಾನ್ ಹಸ್ಮಿ, ಆಲಿಯಾ ಭಟ್ ಜತೆಗೆ ಕೆಲಸ ಮಾಡಿದ್ದೇನೆ. ಎಲ್ಲರಿಗೂ ಕೃತಜ್ಞತೆಗಳು" ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಆಲಿಯಾ ಭಟ್ ''ಖಂಡಿತಾ ಸರ್, ಮತ್ತೆ ಒಟ್ಟಿಗೆ ಕೆಲಸ ಮಾಡೋಣ. ಈ ಸಲ ಎಲ್ಲರೂ ಒಟ್ಟಿಗೆ'' ಎಂದಿದ್ದಾರೆ. ಇದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಈ ಟ್ವೀಟ್ ಗಳನ್ನ ಗಮನಿಸಿರುವ ಅಭಿಮಾನಿಗಳು ಬಹುಶಃ ಇದು ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಮದುವೆಯ ಬಗ್ಗೆ ಪರೋಕ್ಷ ಸುಳಿವು, ಇಬ್ಬರ ಮದುವೆ ನಿಶ್ಚಯವಾಗಿರಬೇಕು, ಅಥವಾ ಮದುವೆ ದಿನಾಂಕ ನಿಗದಿಯಾಗಿರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Alia Bhatt and Ranbir Kapoor’s relationship rumours have been going on since a long time now. The latest to join this club appears to be father Rishi Kapoor just hint at Alia Bhatt and Ranbir Kapoor’s relationship?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X